ಶಿವಮೊಗ್ಗ: ರಾಜ್ಯದಲ್ಲಿ ಮಳೆ ಅಬ್ಬರ ಮುಂದುವರಿದಿದೆ. ಈ ಮಧ್ಯೆ ಹೊಸನಗರ ತಾಲೂಕಿನ ಅರಮನೆ ಕೊಪ್ಪ ಗ್ರಾಮ ಪಂಚಾಯತಿ ವ್ಯಾಪ್ತಿಯ ಕುಂದಗಲ್ ಗ್ರಾಮದ ಬಳಿ ಭೂಮಿ ಬಿರುಕು ಬಿಡಲು ಪ್ರಾರಂಭಿಸಿದೆ. ಇದು ಗ್ರಾಮಸ್ಥರಲ್ಲಿ ಆತಂಕ ಉಂಟುಮಾಡಿದೆ.
ಭೂಮಿಯು ಸುಮಾರು ಮೂರು ಅಡಿಯಷ್ಟು ಅಗಲ ಬಾಯ್ಬಿಟ್ಟಿದೆ. ಅಲ್ಲದೆ ಎರಡು ಅಡಿಯಷ್ಟು ಭೂಮಿ ಕುಸಿತವಾಗಿದೆ. ಕುಂದಗಲ್ಲು ಗ್ರಾಮದಲ್ಲಿ ಭೂಮಿ ಕುಸಿತವಾಗಿರುವ ಸುದ್ದಿ ತಿಳಿದು ತೀರ್ಥಹಳ್ಳಿ ಶಾಸಕ ಆರಗ ಜ್ಞಾನೇಂದ್ರ ಭೇಟಿ ಪರಿಶೀಲಿಸಿದರು.
ಸ್ಥಳದಲ್ಲಿ ಭಾರೀ ಪ್ರಮಾಣದಲ್ಲಿ ಭೂಮಿ ಬಿರುಕು ಬಿಟ್ಟಿರುವುದಕ್ಕೆ ಶಾಸಕರು ಆಶ್ಚರ್ಯ ವ್ಯಕ್ತಪಡಿಸಿದ್ದಾರೆ. ”ಇಲ್ಲಿ ಕಳೆದ ವರ್ಷವೇ ಸಣ್ಣದಾಗಿ ಬಿರುಕು ಬಿಟ್ಟಿತ್ತು. ಈ ವರ್ಷ ಮಳೆಗಾಲ ಪ್ರಾರಂಭದಲ್ಲಿಯೇ ಬಿರುಕು ಬಿಟ್ಟಿದೆ.
ಇಲ್ಲಿ ಭೂಮಿ ಕುಸಿತವಾದರೆ ಪಕ್ಕದ ಜಮೀನುಗಳಿಗೆ ಮಣ್ಣು ಹೋಗಿ ಕೃಷಿಗೆ ಅನಾನೂಕುಲವಾಗುತ್ತದೆ. ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ಸೂಕ್ತ ಕ್ರಮ ತೆಗೆದುಕೊಳ್ಳುತ್ತಾರೆ” ಎಂದು ಭರವಸೆ ನೀಡಿದರು.