ಅಪ್ರಾಪ್ತ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದ ಲೋಕೇಶ್ವರ ಸ್ವಾಮೀಜಿಯ ಮಠ ಧ್ವಂಸ
ಚಿಕ್ಕೋಡಿ: ಅಪ್ರಾಪ್ತ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದ ಕಪಟಿ ಸ್ವಾಮೀಜಿ ಲೋಕೇಶ್ವರ ಜೈಲು ಸೇರುತ್ತಿದ್ದಂತೆ ಆತನ ಮಠ ಸಂಪೂರ್ಣ ಧ್ವಂಸ ಮಾಡಲಾಗಿದೆ.
ಆರೋಪಿ ಕಪಟಿ ಸ್ವಾಮೀಜಿ ಲೋಕೇಶ್ವರ ಅನಧಿಕೃತವಾಗಿ ಮಠ ಕಟ್ಟಡ ನಿರ್ಮಾಣ ಮಾಡಿದ್ದರು.ರಾಯಬಾಗ ತಾಲೂಕಿನ ಮೇಖಳಿ ಗ್ರಾಮದ ಸರ್ವೇ ನಂ.
225ರಲ್ಲಿ ಸರಕಾರಿ ಗಾಯರಾಣಾ ಜಮೀನಿನಲ್ಲಿ 8 ಎಕರೆ ಜಾಗವನ್ನ ಅತಿಕ್ರಮಣ ಮಾಡಿಕೊಂಡು 8 ವರ್ಷಗಳ ಹಿಂದೆ ಮಠ ನಿರ್ಮಾಣ ಮಾಡಿಕೊಂಡಿದ್ದರು.
ಇತ್ತ ದೌರ್ಜನ್ಯ ಕೇಸ್‌ನಲ್ಲಿ ಸ್ವಾಮೀಜಿ ಜೈಲು ಪಾಲಾಗುತ್ತಿದ್ದಂತೆ ಬೆಳ್ಳಂಬೆಳಿಗ್ಗೆ ರಾಯಬಾಗ ತಹಶೀಲ್ದಾರ್ ನೇತೃತ್ವದಲ್ಲಿ ಮೂರು ಜೆಸಿಬಿಗಳ ಮೂಲಕ ತೆರವು ಕಾರ್ಯಾಚರಣೆ ನಡೆಸಲಾಗಿದೆ.
Laxmi News 24×7