ಎಸ್ಸೆಸ್ಸೆಲ್ಸಿ ಪರೀಕ್ಷೆಯ ಮರುಮೌಲ್ಯಮಾಪನ…
624 ಅಂಕಗಳು ಬಂದ ಹಿನ್ನೆಲೆ ಕುಂದಾನಗರಿಯ ಕುವರಿಯ ಹರ್ಷ
ಇಷ್ಟವಾದುದ್ದನ್ನೇ ಆಯ್ಕೆ ಮಾಡಿಕೊಂಡು ಸಾಧನೆ ಮಾಡುವಂತೆ ಕರೆ
ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಬರೆದ್ದಿದ್ದಕ್ಕಿಂತ ಕಡಿಮೆ ಅಂಕಗಳು ಬಂದ ಹಿನ್ನೆಲೆ ಮತ್ತೇ ಮರು ಮೌಲ್ಯಮಾಪನಕ್ಕೆ ಹಾಕಿ 624 ಅಂಕ ಪಡೆದ ಬೆಳಗಾವಿಯ ವಿದ್ಯಾರ್ಥಿನಿ ಸಂತಸವನ್ನು ವ್ಯಕ್ತಪಡಿಸಿದ್ದು,
ವಿದ್ಯಾರ್ಥಿಗಳಿಗೆ ಎಲ್ಲ ಕ್ಷೇತ್ರಗಳಲ್ಲಿಯೂ ಅವಕಾಶವಿದೆ. ಬೇರೆಯವರು ಹೇಳಿದ್ದನ್ನು ಆಯ್ಕೆ ಮಾಡಿಕೊಳ್ಳುವ ಬದಲೂ ತಮಗೆ ಇಷ್ಟವಾದುದ್ದನ್ನು ಆಯ್ಕೆ ಮಾಡಿಕೊಂಡು ಸಾಧನೆ ಮಾಡಬೇಕೆಂದು ಕರೆ ನೀಡಿದ್ದಾಳೆ.
ಹೌದು, ಸೇಂಟ್ ಜೋಸಫ್ ಕಾನ್ವೆಂಟ್ ಶಾಲೆಯ ವಿದ್ಯಾರ್ಥಿನಿ ಮೊದಲು 621 ಅಂಕಗಳು ಬಂದಿದ್ದವು. ಫಲಿತಾಂಶ ನೋಡುತ್ತಲೇ ಬೇಸರವಾಯಿತು. ವಿಜ್ಞಾನ ಮತ್ತು ಗಣಿತ ವಿಷಯದಲ್ಲಿ ಹೆಚ್ಚಿನ ಅಂಕಗಳು ಬರುವ ವಿಶ್ವಾಸವಿತ್ತು. ಮರು ಮೌಲ್ಯಮಾಪನಕ್ಕೆ ಹಾಕಿದಾಗ ಹೆಚ್ಚುವರಿ 3 ಅಂಕಗಳು ಅಂದರೇ ಒಟ್ಟು 624 ಅಂಕಗಗಳು ಬಂದಿದ್ದು,
ಸಂತಸವನ್ನು ತಂದಿದೆ. ಶಿಕ್ಷಕರು, ತಂದೆ-ತಾಯಿ-ಸಹೋದರಿಯರು ಅಮೂಲ್ಯವಾದ ಸಹಕಾರವನ್ನು ನೀಡಿದ್ದಾರೆ. ವಿದ್ಯಾರ್ಥಿಗಳು ಏಕಾಗ್ರತೆಯಿಂದ ಓದಬೇಕು.
ಭವಿಷ್ಯದಲ್ಲಿ ವಕೀಲ ವೃತ್ತಿ ಅಥವಾ ಚಾರ್ಟರ್ಡ್ ಅಕೌಂಟಂಟ್ ಆಗುವ ಆಸೆ ವ್ಯಕ್ತಪಡಿಸಿ, ಎಲ್ಲರೂ ಒಂದೊಂದನ್ನ ಹೇಳುತ್ತಾರೆ. ಆದರೇ, ನಿಮಗಿಷ್ಟವಾದುದ್ದನ್ನು ಆಯ್ಕೆ ಮಾಡಿಕೊಂಡು ಸಾಧನೆ ಮಾಡಿ ಎಂದು ಅನುಷಾ ದೇಸಾಯಿ ಹೇಳಿದರು.
ಅನುಷಾ ಸಾಧನೆಗೆ ಪೋಷಕರು ಮತ್ತು ಶಿಕ್ಷಕರು ಸಂತಸ ವ್ಯಕ್ತಪಡಿಸಿದ್ದಾರೆ.