Breaking News

ಪರಿಶಿಷ್ಟ ಜಾತಿಗಳ ಸಮಗ್ರ ಸಮೀಕ್ಷೆ* *ಜಿಲ್ಲಾಧಿಕಾರಿ ದಿವ್ಯ ಪ್ರಭು ಅವರಿಂದ ಕ್ಷೇತ್ರ ಭೇಟಿ; ಸಮಿಕ್ಷೆ ಕಾರ್ಯ ಪರಿಶೀಲನೆ.*

Spread the love

ಪರಿಶಿಷ್ಟ ಜಾತಿಗಳ ಸಮಗ್ರ ಸಮೀಕ್ಷೆ*
*ಜಿಲ್ಲಾಧಿಕಾರಿ ದಿವ್ಯ ಪ್ರಭು ಅವರಿಂದ ಕ್ಷೇತ್ರ ಭೇಟಿ; ಸಮಿಕ್ಷೆ ಕಾರ್ಯ ಪರಿಶೀಲನೆ.*

*ಧಾರವಾಡ (ಕರ್ನಾಟಕ ವಾರ್ತೆ) ಮೇ.8:* ನ್ಯಾಯಮೂರ್ತಿ ಡಾ.ಎಚ್.ಎನ್. ನಾಗಮೋಹನ್‍ದಾಸ್ ಏಕ ಸದಸ್ಯ ವಿಚಾರಣಾ ಆಯೋಗದ ನಿರ್ದೇಶನದಂತೆ ಜಿಲ್ಲೆಯಲ್ಲಿ ಪರಿಶಿಷ್ಟ ಜಾತಿಯ ಪಟ್ಟಿಗೆ ಸೇರಿರುವ ಜನರ ಸಾಮಾಜಿಕ, ಶೈಕ್ಷಣಿಕ, ಆರ್ಥಿಕ, ರಾಜಕೀಯ, ಔದ್ಯೋಗಿಕ ಪ್ರಾತಿನಿಧ್ಯದ ಸ್ಥಿತಿಗತಿಗಳ ಬಗ್ಗೆ ಸಮೀಕ್ಷೆ ಮಾಡುವುದು. ಈ ಸಮೀಕ್ಷೆಯ ಉದ್ದೇಶವಾಗಿದೆ. ಸಮೀಕ್ಷೆದಾರರು ಜಿಲ್ಲೆಯ ಯಾವ ಪರಿಶಿಷ್ಟ ಜಾತಿಯ ಕುಟುಂಬಗಳು ಈ ಸಮೀಕ್ಷೆಯಿಂದ ಹೊರಗುಹಿಯದಂತೆ ಮುಂಜಾಗ್ರತೆ ವಹಿಸಿ, ನಿಯಮಾನುಸಾರ ಸಮೀಕ್ಷೆ ಮಾಡಬೇಕೆಂದು ಜಿಲ್ಲಾಧಿಕಾರಿ ದಿವ್ಯ ಪ್ರಭು ಅವರು ಹೇಳಿದರು.

ಅವರು ಇಂದು ಮಧ್ಯಾಹ್ನ ಧಾರವಾಡ ನಗರದ ವಿವಿಧ ಪ್ರದೇಶಗಳಿಗೆ ಭೇಟಿ ನೀಡಿ, ಪರಿಶಿಷ್ಟ ಜಾತಿ ಕುಟುಂಬಗಳ ಸಮೀಕ್ಷಾ ಕಾರ್ಯದ ಪ್ರಗತಿ ಪರಿಶೀಲನೆ ಮಾಡಿದರು.
ಈ ಸಂದರ್ಭದಲ್ಲಿ ಹಾಜರಿದ್ದ ವಿವಿಧ ಸಮೀಕ್ಷೆದಾರರು, ಸಂಪನ್ಮೂಲ ವ್ಯಕ್ತಿಗಳು, ಮೇಲ್ವಿಚಾರಕರನ್ನು ಉದ್ದೇಶಿಸಿ ಅವರು ಮಾತನಾಡಿದರು. ವಿಭಿನ್ನ ಸ್ಥಳಗಳಲ್ಲಿ ವಾಸವಾಗಿರುವ ಅಥವಾ ವಿಭಿನ್ನ ವೃತ್ತಿಗಳನ್ನು ತೊಡಗಿರುವ ವ್ಯಕ್ತಿಗಳು ಹಾಗೂ ಜನ ಸಮೂಹಗಳಿಗೆ ಸಾಮಾಜಿಕ ಮತ್ತು ಆರ್ಥಿಕ ಅಸಮಾನತೆಯನ್ನು ಕಡಿಮೆ ಮಾಡಲು ಮತ್ತು ಸ್ಥಾನಮಾನ ಸೌಲಭ್ಯ ಹಾಗೂ ಅವಕಾಶಗಳಲ್ಲಿ ತಾರತಮ್ಯವನ್ನು ತೊಡೆದು ಹಾಕಲು ಕಾರ್ಯಕ್ರಮ

 

ರೂಪಿಸುವುದಕ್ಕಾಗಿ ಸಾಮಾಜಿಕ ಸ್ಥಿತಿಗತಿಗಳ ಅಧ್ಯಯನ ಮಾಡಬೇಕಾಗಿರುವುದರಿಂದ ಈ ಸಮೀಕ್ಷೆಯನ್ನು ಕೈಗೊಳ್ಳಲಾಗಿದೆ. ಸಮೀಕ್ಷೆದಾರರು ಉದ್ದೇಶ ಅರಿತು ಸರಿಯಾಗಿ ಕುಟುಂಬಗಳ ಆರ್ಥಿಕ, ಶೈಕ್ಷಣಿಕ, ಜೌದ್ಯೋಗಿಕ ಅಂಶಗಳನ್ನು ಸಮೀಕ್ಷೆಯಲ್ಲಿ ದಾಖಲಿಸಬೇಕೆಂದು ಜಿಲ್ಲಾಧಿಕಾರಿಗಳು ತಿಳಿಸಿದರು.
ಕ್ಷೇತ್ರ ಭೇಟಿ: ಪರಿಶಿಷ್ಟ ಜಾತಿಗಳ ಸಮಗ್ರ ಸಮೀಕ್ಷೆ ಕಾರ್ಯವನ್ನು ಸಮೀಕ್ಷೆ ನಡೆದಿರುವ ಧಾರವಾಡ ನಗರದ ವಾರ್ಡ 8 ರಲ್ಲಿ ಬರುವ ಜೋಪಡಪಟ್ಟಿ ಓಣಿಯ ಬಸವಣ್ಣೆವ್ವ ಶಲವಡಿ (97) ಮನೆಗೆ ಭೇಟಿ ನೀಡಿ, ಸಮೀಕ್ಷೆದಾರರ ಮಾಹಿತಿ ಭರ್ತಿ ಕುರಿತು ಪರಿಶೀಲಿಸಿದರು.

ಸಮೀಕ್ಷೆದಾರ ವಿಜಯಕುಮಾರ ಮೂಲಿಮನಿ ಅವರಿಗೆ 258 ಕುಟುಂಬಳ ಸಮೀಕ್ಷೆ ಮಾಡುವದಿದ್ದು, ಈಗಾಗಲೇ 88 ಪರಿಶಿಷ್ಟ ಜಾತಿ ಕುಟುಂಬಗಳು ಸೇರಿ ಒಟ್ಟು 140 ಕುಟುಂಬಗಳ ಸಮೀಕ್ಷೆ ಮುಗಿಸಿದ್ದಾರೆ.
ಅದರಂತೆ ವಾರ್ಡ ನಂ 6 ರಲ್ಲಿನ ನಿಜಾಮುದ್ದಿನ ಕಾಲೋನಿಯ ಬಾಲ ಮಾರುತಿ ಮಂದಿರ ಓಣಿಯ ಮಂಜುನಾಥ ಭೋವಿ ಅವರ ಮನೆಗೆ ಸಮೀಕ್ಷೆದಾರರೊಂದಿಗೆ ಭೇಟಿ ನೀಡಿ, ಕುಟುಂಬ ಮಾಹಿತಿ ಪಡೆದುಕೊಂಡರು.
*ಮನೆ ಮನೆ ಸಮೀಕ್ಷಾ ತಂಡ:* ನ್ಯಾಯಮೂರ್ತಿ ಡಾ. ಹೆಚ್.ಎನ್. ನಾಗಮೋಹನದಾಸ್ ಏಕ ಸದಸ್ಯ ಆಯೋಗದ ನಿರ್ದೇಶನದಂತೆ ಜಿಲ್ಲೆಯಲ್ಲಿ ಪರಿಶಿಷ್ಟ ಜಾತಿಗಳ ಸಮಗ್ರ ಸಮೀಕ್ಷೆ ನಡೆದಿದೆ.
ಸಮೀಕ್ಷಾ ಕಾರ್ಯಕ್ಕೆ 7 ಜನ ಕ್ಷೇತ್ರ ಶಿಕ್ಷಣಾಧಿಕಾರಿಗಳು ನೋಡಲ್ ಅಧಿಕಾರಿಗಳಾಗಿದ್ದು, 10 ಜನ ಜಿಲ್ಲಾ ತಾಂತ್ರಿಕ ಸಲಹೆಗಾರರಿದ್ದಾರೆ. ಮತ್ತು 3 ಜನ ಜಿಲ್ಲಾ ಮಾಸ್ಟರ್ ಟ್ರೇನರ್ ಇದ್ದಾರೆ.
ಅಲ್ಲದೆ ತಾಲೂಕುಮಟ್ಟದಲ್ಲಿ 35 ಜನ ತಾಲೂಕು ಮಾಸ್ಟರ್ ಟ್ರೇನರ್, 1665 ಸಮೀಕ್ಷಾ (ಗಣತಿ) ದಾರರನ್ನು ಮತ್ತು 167 ಜನರನ್ನು ಸಮೀಕ್ಷಾದಾರರ ಮೇಲ್ವಿಚಾರರನ್ನಾಗಿ ನೇಮಿಸಲಾಗಿದೆ.
ಸಮೀಕ್ಷೆ ಸಂಬಂಧಿಸಿದ ಹೆಚ್ಚಿನ ಮಾಹಿತಿ ಅಗತ್ಯವಿದ್ದಲ್ಲಿ ಸಮೀಕ್ಷೆದಾರರಿಗೆ, ಸಾರ್ವಜನಿಕರಿಗೆ ಸಹಾಯವಾಗಲು ದಿನದ 24 ಗಂಟೆ ಕಾರ್ಯನಿರ್ವಹಿಸುವ ಸಹಾಯವಾಣಿ ಕೇಂದ್ರ ಸ್ಥಾಪಿಸಲಾಗಿದೆ. ಕೇಂದ್ರದಲ್ಲಿ ಕಾರ್ಯನಿರ್ವಹಿಸಲು 24 ಜನ ಸಿಬ್ಬಂದಿಗಳನ್ನು ನಿಯೋಜಿಸಲಾಗಿದೆ. ಮತ್ತು ಶೇ. 10 ರಷ್ಟು ಹೆಚ್ಚುವರಿ ಗಣತಿದಾರರನ್ನು ಗುರುತಿಸಿ, ಮೀಸಲಿಡಲಾಗಿದೆ.
ಜಿಲ್ಲೆಯ ಎಲ್ಲಾ ನಗರ, ಪಟ್ಟಣ ಹಾಗೂ ಗ್ರಾಮಗಳಲ್ಲಿ ಪರಿಶಿಷ್ಟ ಜಾತಿ ಕುಟುಂಬಗಳ ಸಮೀಕ್ಷಾ ಕಾರ್ಯ ಯಶಸ್ವಿಯಾಗಿ ನಡೆದಿದೆ. ಮೇ 17 ರವರೆಗೆ ಸಮೀಕ್ಷೆಗೆ ಕಾಲಾವಕಾಶವಿದ್ದು, ಜಿಲ್ಲೆಯ ಎಲ್ಲ ಪರಿಶಿಷ್ಟ ಜಾತಿ ಕುಟುಂಬಗಳನ್ನು ಸಮೀಕ್ಷೆಗೆ ಒಳಪಡಿಸಲಾಗುವುದು ಎಂದು ಜಿಲ್ಲಾಧಿಕಾರಿ ದಿವ್ಯ ಪ್ರಭು ಅವರು ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ಧಾರವಾಡ ಶಹರ ನೋಡಲ್ ಅಧಿಕಾರಿ, ಬಿಇಓ ಅಶೋಕ ಸಿಂದಗಿ, ಸಮನ್ವಯ ಅಧಿಕಾರಿ ಮಂಜುನಾಥ ಅಡಮೇರ, ಕಂದಾಯ ನಿರೀಕ್ಷಕ ಗುರು ಸುಣಗಾರ, ಸಿ.ಆರ್.ಪಿ ರೇಣುಕಾ ಜುಗ್ಗಲ, ಮೇಲ್ವಿಚಾರಕ ಅಶೋಕ ತಳವಾರ, ಗ್ರಾಮ ಆಡಳಿತ ಅಧಿಕಾರಿ ಕರೆಪ್ಪ ಗುಡ್ಡದ, ಸಮೀಕ್ಷೆದಾರರಾದ ಜ್ಯೋತಿ ಹಳಿಂಗಳಿ, ರಾಜಶೇಖರ್ ಏಡತೆರ, ವಿಜಯಕುಮಾರ ಮೂಲಿಮನಿ ಹಾಗೂ ಇತರರು, ಇದ್ದರು.


Spread the love

About Laxminews 24x7

Check Also

2028ಕ್ಕೆ ಕಾಂಗ್ರೆಸ್​ ಕ್ರಾಂತಿ ಎಬ್ಬಿಸುತ್ತೆ: ಸಚಿವ ಚಲುವರಾಯಸ್ವಾಮಿ

Spread the loveಮಂಡ್ಯ : ನವೆಂಬರ್ ಕ್ರಾಂತಿನೂ ಇಲ್ಲ, ಸಂಕ್ರಾಂತಿ ಕ್ರಾಂತಿನೂ ಇಲ್ಲ, ಯುಗಾದಿಗೂ ಇಲ್ಲ. 2028ಕ್ಕೆ ಮತ್ತೆ ನಾವೇ, ಕಾಂಗ್ರೆಸ್ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ