ಗೋಕಾಕ ನಗರದಲ್ಲಿ ಶ್ರೀ ಬಸವ ಜಯಂತಿ ಆಚರಣೆ.
ಗೋಕಾಕ : ಶ್ರೀ ಬಸವ ಜಯಂತಿ ನಿಮಿತ್ತವಾಗಿ ಇಂದು ನಗರದ ಬಸವೇಶ್ವರ ಪುತ್ಥಳಿಗೆ ಮಾಲಾರ್ಪಣೆ ಮಾಡುವ ಮೂಲಕ ಗೌರವ ಸಲ್ಲಿಸಿ, ಜಯಂತಿ ಆಚರಣೆ ಮಾಡಿದರು.
ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡರಾದ ಸಿ ಸಿ ಕೊಣ್ಣೂರ ಅವರು ಮಾತನಾಡಿ ಜಗದ್ಗುರು ಬಸವೇಶ್ವರರು ಬೋಧಿಸಿದ ಸಮಾನತೆ, ಸತ್ಯತೆ ಮತ್ತು ಮಾನವೀಯತೆಯ ಮೌಲ್ಯಗಳನ್ನು ನಾವು ಪಾಲಿಸೋಣ. ಅವರ ಆದರ್ಶಗಳು ನಮ್ಮ ಜೀವನದ ಪಥವನ್ನು ಬೆಳಗಿಸಲಿ, ನಾವು ಜ್ಞಾನದ, ಸೇವೆಯ ಮತ್ತು ಧರ್ಮಪಥದತ್ತ ಮುನ್ನಡೆಯೋಣ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಮುಖಂಡರಾದ ಚೆನ್ನಬಸಯ್ಯಾ ಬೀಜಲಿ , ಮಹಾಂತೇಶ ಪಾಟೀಲ, ಮಹಾಂತೇಶ ವಾಲಿ, ಮಾಯಪ್ಪಾ ತಹಶೀಲ್ದಾರ್ ಹಾಗೂ ಹಿರಿಯರು, ಮಹಿಳಾ ಕಾರ್ಯಕರ್ತರು , ಯುವಕರು, ಉಪಸ್ಥಿತರಿದ್ದರು.