ಬೆಳಗಾವಿ : ನನ್ನ ದೃಷ್ಟಿಯಲ್ಲಿ ಯತ್ನಾಳ್ ಅವರನ್ನು ಒಂದು ವರ್ಷದಲ್ಲಿ ಬಿಜೆಪಿಯವರೇ ಕರೆಯುತ್ತಾರೆ. ಇವರಿಗೆ ಅವರು ಅನಿವಾರ್ಯ. ಅವರು ಇವರಿಗೆ ಅನಿವಾರ್ಯ. ಹಾಗಾಗಿ, ಯತ್ನಾಳ್ ಮತ್ತೆ ಬಿಜೆಪಿಗೆ ವಾಪಸ್ ಆಗುತ್ತಾರೆ ಎಂದು ಲೋಕೋಪಯೋಗಿ ಇಲಾಖೆ ಸಚಿವ ಸತೀಶ್ ಜಾರಕಿಹೊಳಿ ಭವಿಷ್ಯ ನುಡಿದಿದ್ದಾರೆ.
ಬೆಳಗಾವಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಹಿಂದುತ್ವದ ಹೆಸರಿನಲ್ಲಿ ಹೊಸ ಪಕ್ಷ ಕಟ್ಟುತ್ತೇವೆ ಎನ್ನುವ ಯತ್ನಾಳ್ ಹೇಳಿಕೆ ಕುರಿತು ಪ್ರತಿಕ್ರಿಯಿಸಿದ ಅವರು, ಅದು ಅವರಿಗೆ ಬಿಟ್ಟಿದ್ದು. ಯತ್ನಾಳ್ ಹೊಸ ಪಕ್ಷ ಕಟ್ಟುವುದು ಶುದ್ದ ಸುಳ್ಳು. ಒಂದೇ ವರ್ಷದಲ್ಲಿ ಮರಳಿ ಗೂಡಿಗೆ ಬರುತ್ತಾರೆ. ನಮ್ಮ ಸಿದ್ದಾಂತ,
ಬಿಜೆಪಿ ಸಿದ್ದಾಂತಗಳು ಬೇರೆ ಬೇರೆಯಾಗಿದೆ. ಅವರ ಸಿದ್ಧಾಂತ, ಹೋರಾಟ ಬಿಜೆಪಿಯಲ್ಲಿಯೇ ಸೂಟ್ ಆಗುತ್ತದೆ. ನಮ್ಮ ಸಿದ್ಧಾಂತಗಳು ಅವರಿಗೆ ಸೂಟ್ ಆಗಲ್ಲ ಎಂದರು.ಬಿಜೆಪಿ ಆಡಳಿತ ಅವಧಿಯಲ್ಲಿ ಬೆಲೆ ಏರಿಕೆಗಳು ಆಗಿವೆ. ಅನಾವಶ್ಯಕವಾಗಿ ಪ್ರತಿಭಟನೆ ಅಗತ್ಯವಿಲ್ಲ. ವೈಜ್ಞಾನಿಕ ಮಾರ್ಗ ಕಂಡುಕೊಳ್ಳುವ ಅಗತ್ಯವಿದೆ.
ಅದನ್ನು ರಾಜಕೀಯವಾಗಿ ಬಳಸಿಕೊಳ್ಳಬಾರದು. ಬೆಲೆ ಏರಿಕೆ ವಿಷಯಗಳ ಬಗ್ಗೆ ಆಯಾ ಇಲಾಖೆಗಳು ಸ್ಪಷ್ಪನೆ ನೀಡಬೇಕಿದೆ. ಬೆಲೆ ಏರಿಕೆ ಬಗ್ಗೆ ಚರ್ಚಿಸಿ ವೈಜ್ಞಾನಿಕ ಮಾರ್ಗ ಕಂಡುಕೊಳ್ಳುವ ಬದಲು ಪ್ರತಿಭಟನೆ ನಡೆಸುವುದು ಅನಾವಶ್ಯಕ. ಯಾವುದೇ ಸಮಸ್ಯೆಯಾದರೂ ಮಾರ್ಗ ಕಂಡುಕೊಳ್ಳಬೇಕು, ಅದನ್ನು ಬಿಟ್ಟು ಪ್ರತಿಭಟನೆಗೆ ಇಳಿಯುವುದು ಸರಿಯಲ್ಲ ಎಂದು ಬಿಜೆಪಿಯವರ ಅಹೋರಾತ್ರಿ ಧರಣಿಗೆ ತಿರುಗೇಟು ಕೊಟ್ಟರು.