ಧಾರವಾಡ: ಕ್ಯಾಂಟರ್ ಪಲ್ಟಿಯಾಗಿ ಟಿಟಿ ವಾಹನಕ್ಕೆ ಡಿಕ್ಕಿ ಹೊಡೆದ ಪರಿಣಾಮವಾಗಿ ಮೂವರು ಮೃತಪಟ್ಟ ಘಟನೆ ಧಾರವಾಡ ಜಿಲ್ಲೆಯ ಅಳ್ನಾವರ ತಾಲೂಕಿನ ಕಡಬಗಟ್ಟಿ ಗ್ರಾಮದ ಹೊರವಲಯದ ಬಳಿ ಭಾನುವಾರ ರಾತ್ರಿ ನಡೆದಿದೆ.
ಕ್ಯಾಂಟರ್ ವಾಹನದಲ್ಲಿದ್ದ ಹನುಮಂತಪ್ಪ ಮಲ್ಲದ, ಮಹಾಂತೇಶ ಚವ್ಹಾಣ, ಮಹದೇವ ಹುಳೊಳ್ಳಿ ಮೃತರು. ಸಾವನ್ನಪ್ಪಿದವರು ಬೆಳಗಾವಿ ಜಿಲ್ಲೆಯ ಶಿರಸಂಗಿ ಗ್ರಾಮದ ನಿವಾಸಿಗಳು ಎಂದು ಹೇಳಲಾಗುತ್ತಿದೆ. ಶಿರಸಂಗಿಯಿಂದ ಗೋವಾಗೆ ತೆರಳುವ ವೇಳೆ ಅಪಘಾತ ಸಂಭವಿಸಿದೆ.
ಕ್ಯಾಂಟರ್ ವಾಹನ ಶಿರಸಂಗಿಯಿಂದ ಗೋವಾಗೆ ತೆರಳುತ್ತಿತ್ತು, ಗೋವಾದಿಂದ ಹುಬ್ಬಳ್ಳಿಗೆ ಟಿಟಿ ವಾಹನ ಬರುತ್ತಿತ್ತು. ಕ್ಯಾಂಟರ್ ವಾಹನ ಕಡಬಗಟ್ಟಿ ಗ್ರಾಮದ ಹೊರವಲಯದ ಬಳಿ ಪಲ್ಟಿಯಾಗಿ ಟಿಟಿಗೆ ಡಿಕ್ಕಿ ಹೊಡೆದಿದೆ. ಪರಿಣಾಮ ಕ್ಯಾಂಟರ್ ವಾಹನದಲ್ಲಿದ್ದ ಮೂವರು ಮೃತಪಟ್ಟಿದ್ದಾರೆ. ಓರ್ವನಿಗೆ ಗಾಯಗಳಾಗಿವೆ. ಟಿಟಿ ವಾಹನದಲ್ಲಿನ ಇಬ್ಬರು ಪ್ರಯಾಣಿಕರು ಸಹ ಗಾಯಗೊಂಡಿದ್ದಾರೆ. ಮೂವರು ಗಾಯಾಳುಗಳನ್ನು ಹುಬ್ಬಳ್ಳಿ ಕಿಮ್ಸ್ಗೆ ರವಾನಿಸಲಾಗಿದೆ.