ಹಿರಿಯ ರಾಜಕೀಯ ಧುರೀಣ ಮತ್ತು ಕಾಂಗ್ರೆಸ್ ಮುಖಂಡ ಶ್ರೀ ಅಶೋಕ ನಿಂಗಯ್ಯ ಸ್ವಾಮಿ ಪೂಜಾರಿ ಅವರು ಇಂದು ಚಿಕ್ಕೋಡಿ ತಾಲೂಕಿನ ಯಡೂರ ಶ್ರೀ ಯಡೂರ ವೀರುಪಾಕ್ಷಲಿಂಗ ದೇವಸ್ಥಾನಕ್ಕೆ ಗೋಕಾಕ ನಗರದ ಯಡೂರು ಪಾದಯಾತ್ರ ಭಕ್ತ ಮಂಡಳಿ ಅವರ ನೇತೃತ್ವದಲ್ಲಿ ಯಶಸ್ವಿಯಾಗಿ 47ನೇ ವರ್ಷದಲ್ಲಿ ಪಾದಯಾತ್ರೆಯಲ್ಲಿ ಆಗಮಿಸಿದ ಭಕ್ತ ಮಂಡಳಿಯವರು ನಡೆಸಿದ
ಗುಗ್ಗಳೋತ್ಸವ, ದೇವರಿಗೆ ಮಂಗಳಾರತಿ ಹಾಗೂ ನೈವೇದ್ಯ ಅರ್ಪಣೆ ಹಾಗೂ ಸಾಮೂಹಿಕ ವಿವಾಹದ ಕಾರ್ಯಕ್ರಮದಲ್ಲಿ ಭಾಗವಹಿಸಿ ವಧು ವರರಿಗೆ ಶುಭ ಕೋರಿ ಪಾದಯಾತ್ರೆಯ ಹಾಗೂ ಅಲ್ಲಿ ಜರುಗಿದ ಕಾರ್ಯಕ್ರಮಗಳು ಕುರಿತು ಮಾತನಾಡಿದರು.
ಈ ಸಂದರ್ಭದಲ್ಲಿ ಕೆಎಲ್ಇ ನಿರ್ದೇಶಕ ತ್ರೀ ಜಯಾನಂದ ಮನವಳ್ಳಿ, ಗೋಕಾಕ ಅರ್ಬನ್ ಬ್ಯಾಂಕ ಅಧ್ಯಕ್ಷರಾದ ಶ್ರೀ ಬಸವರಾಜ ಕಲ್ಯಾಣಶೆಟ್ಟಿ, ಶ್ರೀ ಸಂಜಯ ಕಿತ್ತೂರ ಮುಖ್ಯೋಪಾಧ್ಯಾಯರು ಬೆಳಗಾವಿ, ಪಾದಯಾತ್ರೆ ಭಕ್ತ ಮಂಡಳಿಯ ಕಮಿಟಿಯ ಅಧ್ಯಕ್ಷರಾದ ಶ್ರೀ ರಮೇಶ ಮೂರ್ತೇಲಿ, ಕಮಿಟಿಯ ಸದಸ್ಯರುಗಳಾದ ಶ್ರೀ ಮಲ್ಲಯ್ಯ ಹಿರೇಮಠ, ಶ್ರೀ ಸುರೇಶ ಹತಪಾಕಿ, ಶ್ರೀ ಸುನಿಲ ಶಿಂಧೆ, ಶ್ರೀ ಸದಾನಂದ ನಿಪ್ಪಾಣಿ, ಶ್ರೀ ಬಸವರಾಜ ಹೂಲಿ, ಶ್ರೀ ಮಲ್ಲಿಕಾರ್ಜುನ ಹೊಸಪೇಟೆ,
ಶ್ರೀ ರವಿಶಂಕರ ಜುಗಳಿ, ಶ್ರೀ ಅನಿಲ ಹಾಲಬಾವಿ, ಶ್ರೀ ಮಹೇಶ ಮಠಪತಿ, ಶ್ರೀ ಉದಯ ಗಂಜಿ, ಶ್ರೀ ಅಶೋಕ ಹೊಸಮನಿ, ಶ್ರೀ ಮಹದೇವ ಗಿಡವಳ್ಳಿ, ಶ್ರೀ ವಿಶ್ವನಾಥ ಕಡಕೋಳ, ಶ್ರೀ ಪರಶುರಾಮ ಭಗತ ಮುಂತಾದ ಗಣ್ಯರು ಉಪಸ್ಥಿತರಿದ್ದರು.