ಬ್ರಹ್ಮಗಂಟು ಸೀರಿಯಲ್ ನಟಿ ಶೋಭಿತಾ ಇನ್ನಿಲ್ಲ; ಹೈದರಾಬಾದ್‌ನಲ್ಲಿ ನಿಧನ
Laxminews 24x7
ಡಿಸೆಂಬರ್ 1, 2024
Uncategorized
49 Views
ಎರಡೊಂದ್ಲಾ ಮೂರು’, ‘ಒಂದ್ ಕಥೆ ಹೇಳಾ’ ಮುಂತಾದ ಸಿನಿಮಾಗಳಲ್ಲಿ ನಟಿಸಿದ್ದ ಶೋಭಿತಾ ಶಿವಣ್ಣ ನಿಧನರಾಗಿದ್ದಾರೆ. ‘ಬ್ರಹ್ಮಗಂಟು’ ಸೀರಿಯಲ್ ಮೂಲಕ ಅವರು ಖ್ಯಾತಿ ಪಡೆದಿದ್ದರು. ಆತ್ಮಹತ್ಯೆ ಮಾಡಿಕೊಂಡು ಅವರು ಸಾವಿಗೀಡಾಗಿದ್ದಾರೆ. ಹಾಸನ ಮೂಲದ ಸಕಲೇಶಪುರದನಟಿ ಶೋಭಿತಾ ಅವರು ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂಬ ಮಾಹಿತಿ ಇದೆ. ಸದ್ಯ ‘ಫಸ್ಟ್ ಡೇ ಫಸ್ಟ್ ಶೋ’ ಸಿನಿಮಾದಲ್ಲಿ ನಟಿಸಿದ್ದ ಶೋಭಿತಾ ಅವರು ಮದುವೆ ಬಳಿಕ ಸಿನಿಮಾಗಳಲ್ಲಿ ನಟಿಸುವುದು ಕಡಿಮೆ ಆಗಿತ್ತು.
ಎರಡು ವರ್ಷಗಳ ಹಿಂದೆ ಮದುವೆಯಾದ ಶೋಭಿತಾ ಅವರು ಹೈದರಾಬಾದ್‌ನಲ್ಲಿ ವಾಸವಾಗಿದ್ದರು. ನಟಿಯ ಆತ್ಮಹತ್ಯೆಗೆ ಕಾರಣ ಏನು ಎಂಬುದು ಗೊತ್ತಾಗಿಲ್ಲ. ಶನಿವಾರ (ನವೆಂಬರ್ 30) ರಾತ್ರಿ ಘಟನೆ ನಡೆದಿರುವ ಸಾಧ್ಯತೆ ಇದೆ. ಶನಿವಾರವಷ್ಟೇ ಸೋಶಿಯಲ್ ಮೀಡಿಯಾದಲ್ಲಿ ಸ್ಟೋರಿ ಶೇರ್ ಮಾಡಿದ್ದರು. ಆ ಬಳಿಕ ಅವರು ಆತ್ಮಹತ್ಯೆಯ ನಿರ್ಧಾರ ಮಾಡಿದ್ದು ಅಚ್ಚರಿಗೆ ಕಾರಣ ಆಗಿದೆ.