ಬೆಂಗಳೂರು, ನವೆಂಬರ್ 24: ಚನ್ನಪಟ್ಟಣ ಉಪಚುನಾವಣೆಯಲ್ಲಿ ನಿಖಿಲ್ ಕುಮಾರಸ್ವಾಮಿ ಗೆಲುವಿನ ನಿರೀಕ್ಷೆಯಲ್ಲಿದ್ದ ಜೆಡಿಎಸ್ಗೆ ದೊಡ್ಡ ಆಘಾತವೇ ಎದುರಾಗಿದೆ. ಚನ್ನಪಟ್ಟಣದಲ್ಲಿ ಜೆಡಿಎಸ್ ಲೆಕ್ಕಾಚಾರ ಸಂಪೂರ್ಣ ಉಲ್ಟಾಪಲ್ಟಾ ಆಗಿದೆ. ಇದರಿಂದಾಗಿ ದಳಪತಿಗಳಿಗೆ ಆತಂಕವೂ ಹೆಚ್ಚಾಗಿದೆ. ನಿಖಿಲ್ ಸೋಲಿನಿಂದಾಗಿ ಚನ್ನಪಟ್ಟಣದಲ್ಲಿ ಜೆಡಿಎಸ್ಗೆ ಹೊಸ ಟೆನ್ಷನ್ ಕೂಡ ಆರಂಭವಾಗಿದೆ
.ಸದ್ಯ ಉಪಚುನಾವಣೆ ಗೆಲುವಿನ ಮೂಲಕ ಜೆಡಿಎಸ್ ಭದ್ರಕೋಟೆಯಲ್ಲಿ ಡಿಕೆ ಸಹೋದರರು ಲಗ್ಗೆ ಇಟ್ಟಿದ್ದಾರೆ. ಡಿಕೆ ಶಿವಕುಮಾರ್ ಮತ್ತು ಡಿಕೆ ಸುರೇಶ್ ಸಹೋದರರ ಪ್ರವೇಶದಿಂದಾಗಿ ಒಕ್ಕಲಿಗ ಜೆಡಿಎಸ್ ನಾಯಕರನ್ನು ಕಾಂಗ್ರೆಸ್ಗೆ ಸೆಳೆಯುವ ಆತಂಕ ದಳಪತಿಗಳಿಗೆ ಎದುರಾಗಿದೆ.