ಹುಕ್ಕೇರಿ: ರಾಷ್ಟ್ರೀಕೃತ ಬ್ಯಾಂಕ್‌ಗಳಿಗಿಂತ ಉತ್ತಮ ಸೇವೆ ನೀಡುವ ಸಂಘ ಸಂಸ್ಥೆಗಳು ದೀರ್ಘಾವಧಿ ಸೇವೆ ಸಲ್ಲಿಸಲು ಸಾಧ್ಯ ಎಂದು ಬೆಲ್ಲದ ಬಾಗೇವಾಡಿ ಅರ್ಬನ್ ಸಹಕಾರ ಬ್ಯಾಂಕ್ ಅಧ್ಯಕ್ಷ ಪವನ್ ಕತ್ತಿ ಹೇಳಿದರು.
ಶುಕ್ರವಾರ ತಾಲ್ಲೂಕಿನ ಶಿರಗಾಂವ ಗ್ರಾಮದಲ್ಲಿ ‘ಶಿರಗಾಂವ ಸೌಹಾರ್ದ ಸಹಕಾರ ಸಂಘ’ ಉದ್ಘಾಟಿಸಿ ಮಾತನಾಡಿದರು.
‘ಸಹಕಾರದಿಂದ ಆರ್ಥಿಕ ವ್ಯವಹಾರದ ಜತೆ ರೈತರಿಗೆ ಉಪಯೋಗವಾಗುವ ನಿಟ್ಟಿನಲ್ಲಿ ಬೀಜ, ರಸಗೊಬ್ಬರ ಮತ್ತು ಕ್ರಮಿನಾಶಕ ಔಷಧ ಮಾರಾಟ ಪ್ರಾರಂಭಿಸಿರುವುದು ಶ್ಲಾಘನೀಯ’ ಎಂದರು.
ಸಹಕಾರ ಸಂಘದ ಅಧ್ಯಕ್ಷ ರವೀಂದ್ರ ಹಿಡಕಲ್ ಮಾತನಾಡಿ, ಸ್ಥಳೀಯ ರೈತರು ವ್ಯವಸಾಯಕ್ಕೆ ಬೇಕಾದ ಔಷಧ, ಬೀಜ ಮತ್ತು ರಸಗೊಬ್ಬರ ಸಮೀಪದ ಪಟ್ಟಣಗಳಿಗೆ ಹೋಗಿ ತರಬೇಕಾಗಿತ್ತು. ಅದನ್ನು ತಪ್ಪಿಸುವ ನಿಟ್ಟಿನಲ್ಲಿ ಸಂಘದಿಂದ ಮಾರಾಟ ವ್ಯವಸ್ಥೆ ಮಾಡಿದ್ದು, ಸದಸ್ಯರು ಮತ್ತು ಗ್ರಾಹಕರು ಸೌಲಭ್ಯ ಪಡೆಯಲು ವಿನಂತಿಸಿದರು. ಇದೇ ಸಂದರ್ಭದಲ್ಲಿ ಅತಿಥಿಗಳನ್ನು ಸತ್ಕರಿಸಲಾಯಿತು.
ಉಪಾಧ್ಯಕ್ಷ ಎನ್.ಎಸ್.ಬಿರಾದಾರ ಪಾಟೀಲ, ಬೆಮುಲ್ ನಿರ್ದೇಶಕ ರಾಯಪ್ಪ ಡೂಗ, ಮಹಾವೀರ ಉದ್ಯೋಗ ಸಮೂಹ ಸಂಸ್ಥೆ ಉಪಾಧ್ಯಕ್ಷ ಪ್ರಜ್ವಲ್ ನಿಲಜಗಿ, ವಕೀಲ ಕೆ.ಎಲ್.ಜಿನರಾಳಿ, ಶಿರಗಾಂವ ಪಿಕೆಪಿಎಸ್ ಅಧ್ಯಕ್ಷ ರಾಜೇಶ ಬಿರಾದಾರ ಪಾಟೀಲ, ನಿರ್ದೇಶಕ ಮಲ್ಲಿಕಾರ್ಜುನ ತೇರಣಿ ಭಾಗವಹಿಸಿದ್ದರು.