ಹೀರೋಗಳ ಕಾರು ಎಷ್ಟು ಗಮನ ಸೆಳೆಯುತ್ತದೆಯೋ ಅವರ ಕಾರಿನ ನಂಬರ್ಪ್ಲೇಟ್ ಕೂಡ ಗಮನ ಸೆಳೆಯುತ್ತವೆ. ಈಗ ಯಶ್ ಅವರ ಕಾರಿನ ಸಂಖ್ಯೆ ವೈರಲ್ ಆಗುತ್ತಿದೆ. ‘ಕರ್ನಾಟಕಕ್ಕೆ ನಾನೇ ನಂಬರ್ 1 ಬಾಸ್’ ಎಂಬ ರೀತಿಯಲ್ಲಿ ಆ ನಂಬರ್ ಪ್ಲೇಟ್ ಇದೆ. ಈ ಮಾತನ್ನು ಅನೇಕರು ಒಪ್ಪಿದ್ದಾರೆ. ಸದ್ಯ ನಂಬರ್ಪ್ಲೇಟ್ ವೈರಲ್ ಆಗುತ್ತಿದೆ.
ಬಾಸ್ ಯಾರು ಎನ್ನುವ ಬಗ್ಗೆ ಚರ್ಚೆ ಮೊದಲಿನಿಂದಲೂ ಇದೆ. ದರ್ಶನ್ ಅಭಿಮಾನಿಗಳು ತಮ್ಮ ಹೀರೋ ಬಾಸ್ ಎನ್ನುತ್ತಾರೆ. ಅದಕ್ಕಾಗಿ ಫ್ಯಾನ್ಸ್ ಅವರನ್ನು ಪ್ರೀತಿಯಿಂದ ಡಿ ಬಾಸ್ ಎಂದು ಕರೆಯುತ್ತಾರೆ. ಇನ್ನು ಧ್ರುವ ಫ್ಯಾನ್ಸ್ ಕೂಡ ‘ಡಿ ಬಾಸ್’ ಎಂದರೆ ಧ್ರುವ ಬಾಸ್ ಎನ್ನುತ್ತಿದ್ದಾರೆ. ಅತ್ತ ಸುದೀಪ್ ಹಾಗೂ ಯಶ್ ಫ್ಯಾನ್ಸ್ ಕೂಡ ನಮ್ಮ ಹೀರೋನೇ ಬಾಸ್ ಎನ್ನುತ್ತಿದ್ದಾರೆ. ಈ ಮಧ್ಯೆ ಯಶ್ ಅವರ ಕಾರ್ ನಂಬರ್ ಸಾಕಷ್ಟು ಗಮನ ಸೆಳೆದಿದೆ. ‘ಕರ್ನಾಟಕಕ್ಕೆ ನಾನೇ ನಂಬರ್ 1 ಬಾಸ್’ ಎಂಬ ರೀತಿಯಲ್ಲಿ ಆ ನಂಬರ್ ಪ್ಲೇಟ್ ಇದೆ.
ಇತ್ತೀಚೆಗೆ ಯಶ್ ಅವರು ‘ಟಾಕ್ಸಿಕ್’ ಸಿನಿಮಾ ಶೂಟ್ ಆರಂಭಿಸಿದ್ದಾರೆ. ಬೆಂಗಳೂರಿನ ಹೊರವಲಯದಲ್ಲಿ ಇದರ ಶೂಟಿಂಗ್ ನಡೆಯುತ್ತಿದೆ. ಸಿನಿಮಾ ಕೆಲಸಗಳ ಕಾರಣಕ್ಕೆ ಯಶ್ ಅವರು ಕಾರಿನಲ್ಲಿ ಶೂಟಿಂಗ್ ಸ್ಪಾಟ್ಗೆ ತೆರಳುತ್ತಿದ್ದಾರೆ. ಅವರ ಕಾರು ರೇಂಜ್ ರೋವರ್. 2023ರ ಜೂನ್ 14ರಂದು ಈ ಕಾರು ನೋಂದಣಿ ಆಗಿದೆ. ಬೆಂಗಳೂರು ಕೇಂದ್ರ ಆರ್ಟಿಒನಲ್ಲಿ ಈ ಕಾರನ್ನು ನೋಂದಣಿ ಮಾಡಿಸಲಾಗಿದೆ.