Breaking News

ಚಿಕ್ಕೋಡಿ: ₹18 ಲಕ್ಷಕ್ಕೆ ಎತ್ತು ಖರೀದಿ

Spread the love

ಚಿಕ್ಕೋಡಿ: ವಿಜಯಪುರ ಜಿಲ್ಲೆಯ ಬಬಲೇಶ್ವರ ತಾಲ್ಲೂಕಿನ ಬಬಲಾದಿಯ ದ್ಯಾವನಗೌಡ ಪಾಟೀಲ ಅವರು ಸಾಕಿದ ಎತ್ತನ್ನು ರಾಯಬಾಗ ತಾಲ್ಲೂಕಿನ ಇಡ್ನಾಳ ಗ್ರಾಮದ ರೈತ ಸದಾಶಿವ ಢಾಂಗೆ ಅವರು ₹ 18 ಲಕ್ಷಕ್ಕೆ ಖರೀದಿಸಿದ್ದಾರೆ.

ಆರು ವರ್ಷ ವಯಸ್ಸಿನ ಈ ಎತ್ತಿನ ಮೂಲ ಹೆಸರು ‘ಹಿಂದೂಸ್ತಾನ್‌’.

ಈಗ ರೈತ ಇಟ್ಟ ಹೆಸರು ‘ಟೈಗರ್‌’. ಶರ್ಯತ್ತಿನಲ್ಲಿ ಇದರ ಹೆಸರು ಚಿರತೆ.

ದ್ಯಾವನಗೌಡ ಅವರು ಇದನ್ನು ಮೂರು ವರ್ಷ ವಯಸ್ಸಿನ ಕರು ಇದ್ದಾಗ ₹1 ಲಕ್ಷಕ್ಕೆ ಖರೀದಿಸಿದ್ದರು. ಮೂರೇ ವರ್ಷಗಳಲ್ಲಿ ಅದು ₹17 ಲಕ್ಷ ಲಾಭ ಮಾಡಿಕೊಟ್ಟಿದೆ. ದಿನವೂ ಎರಡು ಹೊತ್ತು ಮೈ ತೊಳೆದು, ಹಾಲು, ಮೊಟ್ಟೆ, ಕಾರೀಖು, ಗೋಡಂಬಿ, ಜವಿಗೋಧಿ, ಗೋವಿನ ಜೋಳ, ಹಸಿರು ಮೇವು ಮುಂತಾದವು ತಿನ್ನಿಸಿ ಪೈಲ್ವಾನನಂತೆ ಬೆಳೆಸಿದ್ದಾರೆ.

ತೆರೆದ ಬಂಡಿ ಓಟದ ಸ್ಪರ್ಧೆಯಲ್ಲಿ ಈ ಎತ್ತು ದಾಖಲೆ ಬರೆದಿದೆ. ಮೂರು ವರ್ಷಗಳಲ್ಲಿ 25 ಮೈದಾನಗಳಲ್ಲಿ ಓಡಿ ಬಹುಮಾನ ಗಿಟ್ಟಿಸಿದೆ. ಈವರೆಗೆ 60 ಗ್ರಾಂ ಚಿನ್ನ, 4 ಬೈಕ್, ₹10 ಲಕ್ಷಕ್ಕೂ ಅಧಿಕ ನಗದು ಗೆದ್ದಿದೆ. ರಾಜ್ಯದ ಬೆಳಗಾವಿ, ಬಾಗಲಕೋಟೆ, ವಿಜಯಪುರ ಹಾಗೂ ಮಹಾರಾಷ್ಟ್ರದ ಜತ್, ಉಮರಾಣಿ, ಬಿಳ್ಳೂರ ಮುಂತಾದ ಕಡೆಗೆ ಮೈದಾನಗಳಲ್ಲಿ ‘ಟೈಗರ್‌’ ದಾಖಲೆ ಬರೆದಿದೆ.


Spread the love

About Laxminews 24x7

Check Also

ಕರ್ನಾಟಕದಲ್ಲಿ 25 ಐಪಿಎಸ್ ಅಧಿಕಾರಿಗಳ ವರ್ಗಾವಣೆ,

Spread the love25 ಐಪಿಎಸ್ ಅಧಿಕಾರಿಗಳ ವರ್ಗಾವಣೆ ಪಟ್ಟಿ * ಎನ್ ಶಶಿಕುಮಾರ್- ಹುಬ್ಬಳ್ಳಿ ಧಾರವಾಡ ಪೊಲೀಸ್ ಕಮಿಷನರ್ ಆಗಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Sahifa Theme License is not validated, Go to the theme options page to validate the license, You need a single license for each domain name.