ರಾಯಬಾಗ: ಚುನಾವಣೆಯಲ್ಲಿ ಗೆದ್ದು, ಶಾಸಕರಾಗುವುದು ಮುಖ್ಯವಲ್ಲ, ಕ್ಷೇತ್ರದ ಜನರೊಂದಿಗೆ ಸ್ಪಂದಿಸಿ, ಅವರ ಸಮಸ್ಯೆಗಳಿಗೆ ಸಹಕರಿಸುವುದು, ಚುನಾಯಿತ ಪ್ರತಿನಿಧಿಗಳ ಆದ್ಯ ಕರ್ತವ್ಯ ಎಂದು ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ಹೇಳಿದರು.
ಪಟ್ಟಣದ ಹೊರಭಾಗದಲ್ಲಿರುವ ಹುಲ್ಯಾಳ ಕೆರೆಯನ್ನು ಶನಿವಾರ ವೀಕ್ಷಣೆ ಮಾಡಿ ಮಾತನಾಡಿದರು.
ನೀರಾವರಿ ಇಲಾಖೆಯ ಅಧಿಕಾರಿಗಳು ಪೊಲೀಸ್ ಇಲಾಖೆ ಸಹಕಾರದೊಂದಿಗೆ ಅಲ್ಲಲ್ಲಿ ನೀರು ಪೋಲಾಗದಂತೆ ಕಾಳಜಿವಹಿಸಬೇಕು ಎಂದರು.