Breaking News

ನದಿಗೆ ಕಲುಷಿತ ನೀರು: ಕಂಪನಿ ವಿರುದ್ದ ಕ್ರಮಕ್ಕೆ ಮಾಜಿ ಶಾಸಕ ಪೂಜಾರ ಒತ್ತಾಯ

Spread the love

ರಾಣೆಬೆನ್ನೂರು: ತಾಲ್ಲೂಕಿನ ಹನುಮನಹಳ್ಳಿ ಹಾಗೂ ತೆರದಹಳ್ಳಿ ಬಳಿಯಿರುವ ಗೋಲ್ಡನ್ ಹ್ಯಾಚರೀಸ್‌ನ ಗ್ರೀನ್ ಎನರ್ಜಿ ಬಯೋ ರಿಫೈನ್‌ರೈಜ್ ಕಂಪನಿಯ ಪೆಟ್ರೋಲಿಯಂ ಉತ್ಪನ್ನಗಳು ಹೊರಸೂಸುವ ರಾಸಾಯನಿಕ ಕಲ್ಮಶಯುಕ್ತ ನೀರು ಸಮೀಪದ ಹಳ್ಳದಿಂದ ಕುಮಧ್ವತಿ ನದಿಗೆ ಹರಿದು ಸುತ್ತಮುತ್ತಲಿನ ರೈತರಿಗೆ ತೊಂದರೆಯಾಗುತ್ತಿದೆ.

ಶುಕ್ರವಾರ ಹನುಮನಹಳ್ಳಿ ಗ್ರಾಮಕ್ಕೆ ಭೇಟಿ ನೀಡಿದ ಮಾಜಿ ಶಾಸಕ ಅರುಣಕುಮಾರ ಪೂಜಾರ ಅವರು ಸಮಸ್ಯೆ ಪರಿಶೀಲಿಸಿದರು.ನದಿಗೆ ಕಲುಷಿತ ನೀರು: ಕಂಪನಿ ವಿರುದ್ದ ಕ್ರಮಕ್ಕೆ ಮಾಜಿ ಶಾಸಕ ಪೂಜಾರ ಒತ್ತಾಯ

ನಂತರ ರೈತರ ಜೊತೆಗೆ ಕೆಲಕಾಲ ಚರ್ಚಿಸಿ ರೈತರಿಗೆ ಆಗುವ ತೊಂದರೆಗಳನ್ನು ಆಲಿಸಿದರು.

ನಂತರ ಹಾವೇರಿ ಜಿಲ್ಲಾಧಿಕಾರಿ ಹಾಗೂ ಅಪರ ಜಿಲ್ಲಾಧಿಕಾರಿಗಳಿಗೆ ದೂರವಾಣಿ ಕರೆ ಮಾಡಿ, ಸೂಕ್ತ ಕ್ರಮ ಕೈಗೊಳ್ಳಲು ಸೂಚಿಸಿದರು.

‘ಕಂಪನಿಯ ಕಾಲುವೆ ಮುಖಾಂತರ ಕುಮದ್ವತಿ ನದಿಗೆ ವಿಷಪೂರಿತ ನೀರನ್ನು ಹರಿಸಿದ್ದು, ಅದು ಮುಂದೆ ಕುಮಧ್ವತಿ ನದಿ ಮೂಲಕ ತಾಲ್ಲೂಕಿನ ಜೀವನದಿ ತುಂಗಭದ್ರಾ ನದಿಗೆ ಸೇರುತ್ತದೆ. ಮುಂದೆ ರಾಣೆಬೆನ್ನೂರ ಹಾಗೂ ಬ್ಯಾಡಗಿ ಪಟ್ಟಣಗಳಿಗೆ ಕುಡಿಯುವ ನೀರು ಪೂರೈಕೆ ಮಾಡುವ ಜಾಗದಲ್ಲಿ ತಲುಪಲಿದೆ. ಇದರಿಂದ ಪಟ್ಟಣದ ಜನರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತದೆ. ಕಂಪನಿಯವರು ಜನರ ಜೀವನ ಜೊತೆಗೆ ಚೆಲ್ಲಾಟವಾಡುತ್ತಿದ್ದಾರೆ ಎಂದು ಈ ಭಾಗದ ರೈತರು ಆರೋಪಿಸಿದ್ದಾರೆ. ಕೂಡಲೇ ಕಂಪನಿ ವಿರುದ್ದ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು’ ಒತ್ತಾಯಿಸಿದರು


Spread the love

About Laxminews 24x7

Check Also

ರಾಯಬಾಗ: ರೇಬಿಸ್ ಲಸಿಕಾ ಅಭಿಯಾನಕ್ಕೆ ಚಾಲನೆ

Spread the love ರಾಯಬಾಗ: ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ ಹಾಗೂ ರಾಮಕೃಷ್ಣ ಪಬ್ಲಿಕ್ ಸ್ಕೂಲ್ ಬೆಕ್ಕೇರಿ ಇವರ ಸಹಯೋಗದಲ್ಲಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ