Breaking News

BJP ಅಭ್ಯರ್ಥಿ ನರೇಂದ್ರ ಮೋದಿ ಎಂದು ಮತ ಹಾಕಿ: ಜಗದೀಶ ಶೆಟ್ಟರ್

Spread the love

ಬೆನಕಟ್ಟಿ: ನಮ್ಮ ದೇಶದ ಭದ್ರತೆಗೆ ಮತ್ತೊಮ್ಮೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ನಾಯಕತ್ವ ಅವಶ್ಯಕತೆ ಇದೆ ಎಂದು ಮಾಜಿ ಮುಖ್ಯಮಂತ್ರಿ ಬೆಳಗಾವಿ ಕ್ಷೇತ್ರದ ಬಿಜೆಪಿ ಲೋಕಸಭಾ ಅಭ್ಯರ್ಥಿ,ಮಾಜಿ ಸಿಎಂ ಜಗದೀಶ ಶೆಟ್ಟರ್ ಹೇಳಿದರು.

ಶುಕ್ರವಾರ ಬೆನಕಟ್ಟಿ ಗ್ರಾಮದಲ್ಲಿ ಶ್ರೀ ದುರ್ಗಾದೇವಿ ದರ್ಶನವನ್ನು ಪಡೆದು ಸ್ಥಳೀಯ ಬಿಜೆಪಿ ಮುಖಂಡರ ಭೇಟಿ ಮಾಡಿ ಮಾತನಾಡಿದರು, ನರೇಂದ್ರ ಮೋದಿಯವರ ನಾಯಕತ್ವದ ಆಡಳಿತವನ್ನು ನೋಡಿದ ಪಾಕಿಸ್ಥಾನ ದೇಶದಲ್ಲಿ ನಮ್ಮ ಆರ್ಥಿಕ ವ್ಯವಸ್ಥೆಯು ಸುಧಾರಣೆಯಾಗಲು ಭಾರತದ ಮೋದಿಯಂತ ನಾಯಕತ್ವ ಬೇಕು ಎಂದು ಹೇಳುತ್ತಿದ್ದಾರೆ, ಆದ್ದರಿಂದ ಬಿಜೆಪಿ ಅಭ್ಯರ್ಥಿ ನರೇಂದ್ರ ಮೋದಿ ಅಂತ ಮತ ಹಾಕಿ ಹೆಚ್ಚಿನ ಅಂತರ ಗೆಲ್ಲಿಸಿ ಪ್ರಧಾನಿಯವರನ್ನು ಕೈ ಬಲಪಡಿಸಿ ಎಂದು ಮನವಿ ಮಾಡಿದರು.

BJP ಅಭ್ಯರ್ಥಿ ನರೇಂದ್ರ ಮೋದಿ ಎಂದು ಮತ ಹಾಕಿ: ಜಗದೀಶ ಶೆಟ್ಟರ್

ತಾಲೂಕು ಬಿಜೆಪಿ ಮುಖಂಡ ವಿರೂಪಾಕ್ಷಪ್ಪ ಮಾಮನಿ‌ ಮಾತನಾಡಿ, ಬಿಜೆಪಿ ಅಭ್ಯರ್ಥಿಯನ್ನು ಗೆಲ್ಲಿಸಲು ನಮ್ಮ ತಾಲೂಕಿನ ಮತವನ್ನು ಹೆಚ್ಚಿಸಿ ಕೂಡುತ್ತೇವೆ ಎಂದು ಹೇಳಿದರು. ರತ್ನಾ ಆ. ಮಾಮನಿ ಮಾತನಾಡಿ ನಮ್ಮ ತಾಲೂಕಿನ ಮತದಾರರು ಮನೆತನ ಮೇಲೆ ವಿಶ್ವಾಸವಿಟ್ಟು ಸಾಕಷ್ಟು ಭಾರೀ ನಮ್ಮವರನ್ನು ಗೆಲವು ಕೂಡಿಸಿದ್ದಿರಿ, ಹಾಗೇ ಜಗದೀಶ ಶೆಟ್ಟರಿಗೆ ಮತ ಹಾಕಿ ಪ್ರಧಾನಮಂತ್ರಿ ನರೇಂದ್ರ ಮೋದಿ ಬೆಂಬಲಿಸಿ ನಮ್ಮ ಮನೆತನ ಗೌರವ ಹೆಚ್ಚಿಸಿ ಎಂದು ಮನವಿ ಮಾಡಿದರು. ರಾಜಶೇಖರ ಗಯ್ಯಾಳಿ ಮಾತನಾಡಿದರು.


Spread the love

About Laxminews 24x7

Check Also

ಗಣೇಶ ಜನ್ಮ ಕಥೆ, ಸಂಕೇತಗಳ ಅರ್ಥ ಮತ್ತು ಆಚರಣೆ

Spread the love ಗಣೇಶ ಜನ್ಮ ಕಥೆ, ಸಂಕೇತಗಳ ಅರ್ಥ ಮತ್ತು ಆಚರಣೆ ಒಂದು ದಿನ ಪಾರ್ವತಿ ದೇವಿಯು ಕೈಲಾಸ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ