Breaking News

30 ಅಡಿ ಆಳದ ಬಾವಿಗೆ ಮೆಟ್ಟಿಲುಗಳೇ ಇಲ್ಲ! ಜೀವ ಭಯದಲ್ಲೇ ಜೀವ ಜಲ ತುಂಬಿಸಿಕೊಳ್ಳುವ ಅನಿವಾರ್ಯತೆ ಈ ಮಹಿಳೆಯರದ್ದು

Spread the love

ಚಿಕ್ಕೋಡಿ ತಾಲೂಕಿನ ಗೌಡೇನವಾಡಿ ಗ್ರಾಮದಲ್ಲಿ – 30 ಅಡಿ ಆಳದ ಬಾವಿಗೆ ಮೆಟ್ಟಿಲುಗಳೇ ಇಲ್ಲ! ಜೀವ ಭಯದಲ್ಲೇ ಜೀವ ಜಲ ತುಂಬಿಸಿಕೊಳ್ಳುವ ಅನಿವಾರ್ಯತೆ ಈ ಮಹಿಳೆಯರದ್ದು. ಶಾಸಕ ಗಣೇಶ್ ಹುಕ್ಕೇರಿಗೂ ಮನವಿ ಮಾಡಿದ್ದರೂ ಈ ವರೆಗೂ ನೀರು ಕೊಡಿಸುವ ಕೆಲಸ ಆಗಿಲ್ಲ.ಅದು ಕೃಷ್ಣಾ ನದಿಯ ಕೂಗಳತೆ ದೂರದಲ್ಲಿರುವ ಗ್ರಾಮ.

ಇನ್ನೂರು ಮನೆಗಳಿರುವ ತೋಟದೂರಿನಲ್ಲಿ ಬೇಸಿಗೆ ಮುನ್ನವೇ ನೀರಿಗಾಗಿ (drinking water) ಹಾಹಾಕಾರ ಶುರುವಾಗಿದೆ. ಜೀವ ಜಲಕ್ಕಾಗಿ ಜನ ಜೀವ ಕೈಯಲ್ಲಿ ಹಿಡಿದುಕೊಂಡು ಬಾವಿಗಿಳಿದು ನೀರು‌ ತುಂಬ್ತಾರೆ. ಬೆಳಗಾವಿ ಜಿಲ್ಲೆಯಲ್ಲಿ (Chikodi) ನೀರಿಗಾಗಿ ಜನ ಪರಿತಪ್ಪಿಸುತ್ತಿರುವುದು ಹೇಗೆ? ಈ ಕುರಿತು ಒಂದು ರಿಪೋರ್ಟ್ ಇಲ್ಲಿದೆ ನೋಡಿ… ಮೂವತ್ತು ಅಡಿ ಆಳದ ಬಾವಿಗೆ ಜೀವ ಕೈಯಲ್ಲಿ, ಡೊಂಕದಲ್ಲಿ (ಸೊಂಟ) ಕೊಡ ಹಿಡಿದು ಇಳಿಯುತ್ತಿರುವ ಮಹಿಳೆಯರು, ಅಳಿದುಳಿದ ನೀರನ್ನೇ ತುಂಬಿ ಕಿಮೀ ಗಟ್ಟಲೆ ಹೊತ್ತು ತರುತ್ತಿರುವ ಜನ. ನೀರು ಕೊಡದ ಜನಪ್ರತಿನಿಧಿ ಅಧಿಕಾರಿಗಳ ವಿರುದ್ಧ ವೃದ್ಧರ ಆಕ್ರೋಶ. ಅಷ್ಟಕ್ಕೂ ಈ ಎಲ್ಲ ದೃಶ್ಯ ಕಂಡು ಬಂದಿದ್ದು ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಗೌಡೇನವಾಡಿ ಗ್ರಾಮದಲ್ಲಿ.

ಹೌದು ಇಲ್ಲಿ ಕೊಳಾಯಿ ವ್ಯವಸ್ಥೆ ಇಲ್ಲ. ಬೋರ್ ವೆಲ್ ನಿಂದ ಜನ ನೀರು ಕುಡಿಯುತ್ತಾರೆ. ಆದ್ರೇ ಇದೀಗ ಬೋರ್ ವೆಲ್ ಬತ್ತಿ ಹೋಗಿದ್ದರಿಂದ ನೀರಿಗಾಗಿ ಪರಿತಪ್ಪಿಸುವ ಸ್ಥಿತಿ ನಿರ್ಮಾಣ ಆಗಿದೆ. ಊರಿನಿಂದ ಎರಡು ಕಿಮೀ ದೂರದಲ್ಲಿರುವ ಬಾವಿಯೊಂದಕ್ಕೆ‌ ಹೋಗಿ ನೀರು ತರುವ ಸ್ಥಿತಿ ಇದೆ.‌ ನಿತ್ಯ ಮನೆಗೆ ಒಬ್ಬರಂತೆ ನೀರು ತರುವ ಕೆಲಸವನ್ನೇ ಇಲ್ಲಿ ಮಾಡಬೇಕಾಗಿದೆ. ಇನ್ನು ಬಾವಿಯಲ್ಲೂ ನೀರು ಬತ್ತುವ ಹಂತಕ್ಕೆ ಬಂದಿದ್ದು ಅಳಿದುಳಿದ ನೀರನ್ನೇ ತಂದು ಜನ ಕುಡಿಯುತ್ತಿದ್ದಾರೆ. ಇಷ್ಟೆ ಆಗಿದ್ರೆ ಓಕೆ ಆದ್ರೇ ಇಲ್ಲಿ ತಮ್ಮ ಜೀವವನ್ನೇ ಕೈಯಲ್ಲಿ ಹಿಡಿದುಕೊಂಡು ನೀರು ತರ್ತಿರುವುದು ಬರಗಾಲದ ಭೀಕರತೆ ಹೇಳುತ್ತಿದೆ. ಮೂವತ್ತು ಅಡಿ ಆಳದ ಬಾವಿಗೆ ಮೆಟ್ಟಿಲುಗಳೇ ಇಲ್ಲ. ಇದರಿಂದ ಜೀವ ಭಯದಲ್ಲೇ ಕೊಡಗಳನ್ನ ಹಿಡಿದು ಕೆಳಗಿಳಿದು ಬಿಂದಿಗೆ ತುಂಬಿಕೊಂಡು ಮೇಲೆ ಬರಬೇಕು. ಸ್ವಲ್ಪ ಯಾಮಾರಿದ್ರೂ ಕಾಲು ಜಾರಿದ್ರೂ ಅನಾಹುತವೇ ಆಗುತ್ತೆ. ಇದು ಗೊತ್ತಿದ್ರೂ ಹನಿ ನೀರಿಗಾಗಿ ಜನ ಅದನ್ನ ಲೆಕ್ಕಿಸದೆ ಬಾವಿಗಿಳಿದು ನೀರು ತರ್ತಿದ್ದಾರೆ.


Spread the love

About Laxminews 24x7

Check Also

ಬಸವ‌ ಸಂಸ್ಕೃತಿ ಯಾತ್ರೆ ಹೆಸರಲ್ಲಿ ಸಮಾಜ ಒಡೆಯೋ ಕೆಲಸ ಮಾಡುತ್ತಿದ್ದಾರೆ

Spread the love ಬಸವ‌ ಸಂಸ್ಕೃತಿ ಯಾತ್ರೆ ಹೆಸರಲ್ಲಿ ಸಮಾಜ ಒಡೆಯೋ ಕೆಲಸ ಮಾಡುತ್ತಿದ್ದಾರೆ ಬಸವಣ್ಣನ ಹೆಸರಲ್ಲಿ ಕೆಲವರಿಂದ ಸಮಾಜ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ