ದಕ್ಷಿಣ ಕನ್ನಡ, ಫೆ.25: ಚಾರ್ಮಾಡಿ ಅರಣ್ಯಕ್ಕೆ ಟ್ರಕ್ಕಿಂಗ್ಗೆ ಹೋದ ಡಿವೈಎಸ್ಪಿ(DYSP) ಸಂಬಂಧಿಕರು ನಾಪತ್ತೆಯಾದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯಬೆಳ್ತಂಗಡಿತಾಲೂಕಿನಲ್ಲಿ ನಡೆದಿದೆ. ಬೆಂಗಳೂರು ಮೂಲದ ಮೂವರು ಯುವಕರು, ಇಂದು ಸಂಜೆ ಚಿಕ್ಕಮಗಳೂರು(Chikkamagalauru) ಜಿಲ್ಲೆಯ ಕಳಸ ಅರಣ್ಯ ವ್ಯಾಪ್ತಿಯ ದುರ್ಗದಹಳ್ಳಿಯಿಂದ ಚಾರಣಕ್ಕೆ ತೆರಳಿದ್ದರು. ರಾತ್ರಿ ವೇಳೆಗೆ ಇಬ್ಬರು ಯುವಕರು ಮಿಸ್ಸಿಂಗ್ ಆಗಿದ್ದಾರೆ.

ಓರ್ವ ಯುವಕ ನೀಡಿದ ಮಾಹಿತಿ ಮೇರೆಗೆ ಧರ್ಮಸ್ಥಳ ಮತ್ತು ಬೆಳ್ತಂಗಡಿ ಪೊಲೀಸರು, ಅರಣ್ಯಾಧಿಕಾರಿಗಳ ಹುಡುಕಾಟ ನಡೆಸಿದ್ದಾರೆ. ಈ ವೇಳೆ ನಾಪತ್ತೆಯಾದ ಯುವಕರ ಮೊಬೈಲ್ ನೆಟ್ವರ್ಕ್ ಪತ್ತೆಯಾಗಿ ಮತ್ತೆ ಸಂಪರ್ಕ ಕಡಿತವಾಗಿದೆ. ಇನ್ನು ಆ ಪ್ರದೇಶದಲ್ಲಿ ಆನೆ ಸಂಚಾರ ಹೆಚ್ಚಿದೆ ಎನ್ನಲಾಗುತ್ತಿದೆ.
Laxmi News 24×7