Breaking News

ಎಐಸಿಸಿ ಅಧ್ಯಕ್ಷ ಸ್ಥಾನ ಸ್ವೀಕರಿಸಿ ವರ್ಷ ಪೂರೈಸಿದ್ದು, ಅದನ್ನು ದಕ್ಷತೆಯಿಂದ ನಿಭಾಯಿಸಿರುವೆ: ಮಲ್ಲಿಕಾರ್ಜುನ ‌ಖರ್ಗೆ

Spread the love

ಕಲಬುರಗಿ: ಎಐಸಿಸಿ ಅಧ್ಯಕ್ಷರಾಗಿ ಒಂದು ವರ್ಷ ಪೂರೈಸಿದ್ದು, ನನಗೆ ಕೊಟ್ಟ ಕೆಲಸವನ್ನು ನಾನು ಪ್ರಾಮಾಣಿಕತೆ ಮತ್ತು ದಕ್ಷತೆಯಿಂದ ನಿಭಾಯಿಸಿದ್ದೇನೆ. ಯಾರಿಗೂ ಸಹ ಕೆಟ್ಟ ಹೆಸರು ಬರುವಂತ ಕೆಲಸ ಮಾಡಿಲ್ಲ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ‌ಖರ್ಗೆ ತಿಳಿಸಿದ್ದಾರೆ.

ಪಂಚ ರಾಜ್ಯಗಳಲ್ಲಿ ಕಾಂಗ್ರೆಸ್​ಗೆ ಒಳ್ಳೆಯ ವಾತಾವರಣ: ಕಲಬುರಗಿ ಏರ್​ಪೋರ್ಟ್​ನಲ್ಲಿ ಇಂದು ಮಾಧ್ಯಮದವರ ಜೊತೆ ಮಾತನಾಡಿದ ಅವರು, ಎರಡನೇ ವರ್ಷದಲ್ಲಿ ತೆಲಂಗಾಣ ಸೇರಿದಂತೆ ಪಂಚರಾಜ್ಯಗಳಿಗೆ ಚುನಾವಣೆ ಎದುರಾಗಿದೆ. ಈ ವರ್ಷದಲ್ಲಿ ಹಲವು ಸವಾಲುಗಳಿದ್ದು, ಅವನ್ನು ಕೂಡ ಎದುರಿಸುತ್ತೇನೆ. ಆಗ ಮಾತ್ರ ನನಗೆ ಹೆಸರು ಬರುತ್ತದೆ. ಯಾವ ಸಮಸ್ಯೆ ಕೂಡ ನನಗೆ ಕಠಿಣ ಅನ್ನಿಸುತ್ತಿಲ್ಲ. ಪಂಚ ರಾಜ್ಯ ಚುನಾವಣೆಯಲ್ಲಿ ಎಲ್ಲಾ ಕಡೆ ಕಾಂಗ್ರೆಸ್​ಗೆ ಒಳ್ಳೆ ವಾತಾವರಣವಿದೆ. ಚುನಾವಣೆಯಲ್ಲಿ ಗೆಲುವು ಸಾಧಿಸುವ ಎಲ್ಲಾ ಲಕ್ಷಣಗಳು ಕಂಡು ಬರುತ್ತಿವೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಮೋದಿ ಸರ್ಕಾರ ಇಡಿ ರಾಜಕೀಯ ಅಸ್ತ್ರವಾಗಿ ಬಳಕೆ: ಮೋದಿ ಸರ್ಕಾರ ಇಡಿಯನ್ನು ರಾಜಕೀಯ ಅಸ್ತ್ರವಾಗಿ ಬಳಕೆ ಮಾಡಿಕೊಳ್ಳುತ್ತಿದೆ. ನಮ್ಮ ರಾಜ್ಯದ ಕಾಂಗ್ರೆಸ್ ಅಧ್ಯಕ್ಷರ ಮೇಲೆ, ಮಂತ್ರಿಗಳ ಮೇಲೆ, ಕಾಂಗ್ರೆಸ್ ಮುಖಂಡರ ಮೇಲೆ ಪದೇ ಪದೆ ಇಡಿ ದಾಳಿ ಮಾಡಿಸುವ ಮೂಲಕ ಅವರ ಶಕ್ತಿ ಕುಂದಿಸಲು ಪ್ರಯತ್ನಿಸುತ್ತಿದೆ. ಮೋದಿ ತಮ್ಮ ಬಳಿ ಇರುವ ಎಲ್ಲ ಅಸ್ತ್ರಗಳನ್ನು ರಾಜಕೀಯವಾಗಿ ಬಳಸುತ್ತಿದ್ದಾರೆ. ಆದರೆ, ಅವುಗಳಿಗೆ ನಾವು ಹೆದರಲ್ಲ, ಪ್ರಜಾಪ್ರಭುತ್ವ ವ್ಯವಸ್ಥೆ ಇದು. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನಮ್ಮ ತತ್ವಗಳೊಂದಿಗೆ ಹೋರಾಟ ಮಾಡುತ್ತೇವೆ. ಈ ಚುನಾವಣೆ ಬಳಿಕ ಎಲ್ಲದಕ್ಕೂ ಸಹ ಜನ ಉತ್ತರ ಕೊಡ್ತಾರೆ ಎಂದು ತಿರುಗೇಟು ನೀಡಿದರು.

ನನಗೆ ಕಾಂಗ್ರೆಸ್ ಪಕ್ಷ ಕೊಟ್ಟಂತ ಕೆಲಸವನ್ನು ಮೊದಲಿನಿಂದಲೂ ಮಾಡಿಕೊಂಡು ಬಂದಿದ್ದೇನೆ. ಯಾವುದೇ ಮಂತ್ರಿ ಪದವಿ, ರಾಜ್ಯದ ಅಧ್ಯಕ್ಷ ಸ್ಥಾನ, ಈಗ ಎಐಸಿಸಿ ಅಧ್ಯಕ್ಷ ಸ್ಥಾನವನ್ನು ನೀಡಿದರೂ ಅಚ್ಚುಕಟ್ಟಾಗಿ ನಿಭಾಯಿಸಿಕೊಂಡು ಬಂದಿದ್ದೇನೆ. ಯಾರಿಗೂ ಕೆಟ್ಟ ಹೆಸರು ತರದೇ, ಕಲಬುರಗಿ, ಕರ್ನಾಟಕ ಜನರಿಗೆ ಒಳ್ಳೆಯ ಹೆಸರು ತರಬೇಕೆನ್ನುವ ನಿಟ್ಟಿನಲ್ಲಿ ಕಾಂಗ್ರೆಸ್​ದಲ್ಲಿ ಕೆಲಸ ಮಾಡಿರುವೆ ಎಂದು ಖರ್ಗೆ ನುಡಿದರು.

ಇದೇ ವೇಳೆ ರಾಜ್ಯದಲ್ಲಿ ಎರಡೂವರೆ ವರ್ಷದ ಬಳಿಕ ಸಿಎಂ ಬದಲಾವಣೆ ಚರ್ಚೆ ವಿಚಾರಕ್ಕೆ ಸಂಬಂಧಿಸಿದಂತೆ ಮಾಧ್ಯಮದವರು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಮಲ್ಲಿಕಾರ್ಜುನ ಖರ್ಗೆ, ಅದನ್ನು ಸಿಎಂ‌ ಸಿದ್ದರಾಮಯ್ಯ ಹೇಳ್ತಾರೆ. ಅವರನ್ನೇ ಕೇಳಿ ಎಂದು ಹಾರಿಕೆ ಮತ್ತು ಜಾಣ್ಮೆಯ ಉತ್ತರ ಕೊಟ್ಟು ಮುಂದೆ ಸಾಗಿದರು.


Spread the love

About Laxminews 24x7

Check Also

1200 ರೈತರ ಆತ್ಮಹತ್ಯೆ: ಕಾಂಗ್ರೆಸ್ ಆಡಳಿತದಲ್ಲಿ ರೈತರ ಜೀವಕ್ಕಿಲ್ಲ ಬೆಲೆ- ಪ್ರಹ್ಲಾದ್ ಜೋಶಿ

Spread the love ಬೆಂಗಳೂರು ಜುಲೈ 26: ರಾಜ್ಯದಲ್ಲಿ ಕಳೆದ 15 ತಿಂಗಳಲ್ಲಿ 1200ಕ್ಕೂ ಹೆಚ್ಚು ರೈತರು ಆತ್ಮಹತ್ಯೆಗೆ ಶರಣಾಗಿದ್ದಾರೆ. …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ