Breaking News

ಕಾಂತಾರ 2 ಸಿನಿಮಾಗಾಗಿ ನಟ ರಿಷಬ್ ಶೆಟ್ಟಿ ಕುದುರೆ ಸವಾರಿ ತರಬೇತಿ

Spread the love

ಕಾಂತಾರ 2 ಸಿನಿಮಾಗಾಗಿ ನಟ ರಿಷಬ್ ಶೆಟ್ಟಿ ಕುದುರೆ ಸವಾರಿ ತರಬೇತಿ ಪಡೆಯುತ್ತಿದ್ದಾರೆ ಎಂದು ಹೇಳಲಾಗಿದೆ.

ಕಳೆದ ಸೆಪ್ಟೆಂಬರ್​​ನಲ್ಲಿ ಸಾಮಾನ್ಯ ಚಿತ್ರವಾಗಿ ತೆರೆಕಂಡ ‘ಕಾಂತಾರ’ ಅಭೂತಪೂರ್ವ ಯಶಸ್ಸು ಸಾಧಿಸಿದೆ. ಸುಮಾರು 15 ಕೋಟಿ ರೂ ವೆಚ್ಚದಲ್ಲಿ ನಿರ್ಮಾಣಗೊಂಡ ಸಿನಿಮಾ ಬಾಕ್ಸ್ ಆಫೀಸ್​​ನಲ್ಲಿ ಸಂಪಾದಿಸಿದ್ದು 450 ಕೋಟಿ ರೂ.ಗೂ ಹೆಚ್ಚು.

ಚಿತ್ರತಂಡದ ನಿರೀಕ್ಷೆಗೂ ಮೀರಿ ಯಶಸ್ಸು ಸಾಧಿಸಿದೆ. ಇದೀಗ ಸೂಪರ್ ಹಿಟ್​​ ಕಾಂತಾರದ ಮತ್ತೊಂದು ಭಾಗ ತಯಾರಾಗುತ್ತಿದೆ. ಆದರೆ ಈ ಸಿನಿಮಾ ಸೀಕ್ವೆಲ್ ಅಲ್ಲ ‘ಕಾಂತಾರ’ದ ಮೊದಲ ಭಾಗ ಪ್ರೀಕ್ವೆಲ್ ಎಂದು ನಿರ್ದೇಶಕ ರಿಷಬ್ ಶೆಟ್ಟಿ ಈಗಾಗಲೇ ಘೋಷಿಸಿದ್ದಾರೆ.

ಕುದುರೆ ಸವಾರಿ ತರಬೇತಿ: ಈ ಮಧ್ಯೆ ಕಾಂತಾರ 2ಗೆ ಸಂಬಂಧಿಸಿದ ಸುದ್ದಿಯೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಚಿತ್ರಕ್ಕಾಗಿ ನಿರ್ದೇಶಕ, ನಟ ರಿಷಬ್ ಶೆಟ್ಟಿ ಕುದುರೆ ಸವಾರಿ ತರಬೇತಿ ತೆಗೆದುಕೊಳ್ಳುತ್ತಿದ್ದಾರೆ ಎಂಬ ಮಾತು ಕೇಳಿಬರುತ್ತಿದೆ. ಇದು ಈ ಚಿತ್ರದ ಮೇಲಿನ ಪ್ರೇಕ್ಷಕರ ನಿರೀಕ್ಷೆ ಹೆಚ್ಚಿಸಿದೆ.

ಭೂತಾರಾಧನೆಯುಳ್ಳ ಕಾಂತಾರ 2 ಶೂಟಿಂಗ್ : ಆಗಸ್ಟ್ 27ರಿಂದ ಕಾಂತಾರ 2 ಸಿನಿಮಾದ ಶೂಟಿಂಗ್ ಶುರುವಾಗಲಿದೆ ಎನ್ನುವ ಮಾಹಿತಿ ಇದೆ. ಸದ್ಯ ಸ್ಕ್ರಿಪ್ಟಿಂಗ್ ಕೆಲಸ ಮುಂದುವರಿದಿದೆ. ರಿಷಬ್ ಶೆಟ್ಟಿ ನಿರ್ದೇಶನದಲ್ಲಿ ಮೂಡಿಬಂದ ಕಾಂತಾರ ಭಾಗ 1 ಕಡಿಮೆ ಬಜೆಟ್‌ನಲ್ಲಿ ನಿರ್ಮಿಸಲಾಗಿತ್ತು. ಆದರೆ ಚಿತ್ರದ ಮತ್ತೊಂದು ಭಾಗಕ್ಕೆ ಭಾರಿ ಬಜೆಟ್‌ ಮೀಸಲಿಡಲಾಗಿದೆ ಎನ್ನುವ ಮಾಹಿತಿ ಇದೆ. ಅಲ್ಲದೇ ಭೂತಾರಾಧನೆಯನ್ನು ಸಿನಿಮಾದಲ್ಲಿ ಇನ್ನಷ್ಟು ಆಳವಾಗಿ ತೋರಿಸಲಾಗುವುದು. ಮುಂದಿನ ವರ್ಷ ಸಿನಿಮಾವನ್ನು ಪ್ರೇಕ್ಷಕರ ಮುಂದಿಡುವ ಯೋಚನೆ ಚಿತ್ರತಂಡದ್ದು.

ನಿರ್ದೇಶಕ, ನಟ ರಿಷಬ್ ಶೆಟ್ಟಿ ಈ ಹಿಂದೆ ಸಂದರ್ಶನವೊಂದರಲ್ಲಿ ‘ಕಾಂತಾರ-2’ ಚಿತ್ರಕ್ಕೆ ಸಂಬಂಧಿಸಿದ ಕೆಲ ವಿಷಯಗಳನ್ನು ಹಂಚಿಕೊಂಡಿದ್ದರು. ನಿಸರ್ಗದ ಹಿನ್ನೆಲೆಯಲ್ಲಿ ಚಿತ್ರೀಕರಣಗೊಂಡ ಮೊದಲ ಭಾಗದ ಕಥೆ ಎಲ್ಲಿ, ಹೇಗೆ ಆರಂಭವಾಯಿತು ಎಂದು ‘ಕಾಂತಾರ’ ಪ್ರೀಕ್ವೆಲ್​ನಲ್ಲಿ ತೋರಿಸಲಾಗುವುದು ಎಂದು ತಿಳಿಸಿದ್ದರು. ಇನ್ನೂ ಚಿತ್ರದಲ್ಲಿ ಕರಾವಳಿ ಜನತೆ ಅಪಾರ ನಂಬಿಕೆ ಇಟ್ಟಿರುವ ದೈವ ಪಂಜುರ್ಲಿಗೆ ಸಂಬಂಧಿಸಿದ ದೃಶ್ಯಗಳೂ ಸಹ ಹೆಚ್ಚು ಇರಲಿದೆ ಎನ್ನಲಾಗಿದೆ.


Spread the love

About Laxminews 24x7

Check Also

ಕೆಎಸ್ಆರ್​ಟಿಸಿಯಲ್ಲಿ ಲಂಚಾವತಾರಗೂಗಲ್ ಪೇ, ಫೋನ್ ಪೇ ಮೂಲಕ ಲಂಚ ಪಡೆದ ಅಧಿಕಾರಿಗಳು!

Spread the loveಬೆಂಗಳೂರು, ಆಗಸ್ಟ್ 25: ಈ ಹಿಂದೆ ಬಿಎಂಟಿಸಿಯಲ್ಲಿ ಕರ್ತವ್ಯ ವಹಿಸಲು ಅಧಿಕಾರಿಗಳು ಚಾಲಕ, ನಿರ್ವಾಹಕರಿಂದ ಲಕ್ಷಾಂತರ ರೂಪಾಯಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ