Breaking News
Home / ರಾಜಕೀಯ / ಒಂದು ಕೈ, ಎರಡೂ ಕಾಲು ಕಳೆದುಕೊಂಡ ಛಲದಂಕ ಮಲ್ಲನಿಗೆ UPSC ಪರೀಕ್ಷೆಯಲ್ಲಿ 917ನೇ ರ‍್ಯಾಂಕ್‌!

ಒಂದು ಕೈ, ಎರಡೂ ಕಾಲು ಕಳೆದುಕೊಂಡ ಛಲದಂಕ ಮಲ್ಲನಿಗೆ UPSC ಪರೀಕ್ಷೆಯಲ್ಲಿ 917ನೇ ರ‍್ಯಾಂಕ್‌!

Spread the love

ಉತ್ತರ ಪ್ರದೇಶ : ಕೇಂದ್ರ ಲೋಕಸೇವಾ ಆಯೋಗ (ಯುಪಿಎಸ್‌ಸಿ) ನಡೆಸುವ ಬಹುನಿರೀಕ್ಷಿತ ನಾಗರಿಕ ಸೇವಾ ಪರೀಕ್ಷೆ 2022 ನೇ ಸಾಲಿನ ಫಲಿತಾಂಶ ಈಗಾಗಲೇ ಪ್ರಕಟವಾಗಿದೆ. ಉತ್ತರ ಪ್ರದೇಶದ ಮೈನ್‌ಪುರಿ ಜಿಲ್ಲೆಯ ಕಸ್ವಾ ಕುರವ್ಲಿ ಎಂಬ ಪ್ರದೇಶದ ನಿವಾಸಿ ಸೂರಜ್ ತಿವಾರಿ ಎಂಬವರು 2017 ರಲ್ಲಿ ಸಂಭವಿಸಿದ ಅಪಘಾತದಲ್ಲಿ ತಮ್ಮ ಎರಡೂ ಕಾಲುಗಳು ಮತ್ತು ಒಂದು ಕೈ ಕಳೆದುಕೊಂಡಿದ್ದರೂ ಸಹ ಛಲಬಿಡದೆ ಸತತ ಪರಿಶ್ರಮ ಹಾಕಿ ಓದಿ ಇದೀಗ 917 ನೇ ಸ್ಥಾನ ಪಡೆದುಕೊಂಡಿದ್ದಾರೆ. ಈ ಮೂಲಕ ಅನೇಕ ಪ್ರೇರಣಾಶಕ್ತಿಯಾಗಿದ್ದಾರೆ.

ಜನವರಿ 29, 2017 ರಂದು ದೆಹಲಿಯ ತನ್ನ ಕಾಲೇಜಿನಿಂದ ಸೂರಜ್ ಹಿಂದಿರುಗುತ್ತಿದ್ದಾಗ ರೈಲು ಅಪಘಾತಕ್ಕೊಳಗಾಗಿದ್ದರು. ಈ ವೇಳೆ ತಮ್ಮ ಎರಡೂ ಕಾಲುಗಳು ಮತ್ತು ಬಲಗೈ ಕಳೆದುಕೊಂಡು ಹಾಸಿಗೆ ಹಿಡಿದಿದ್ದರು. ಇದಾದ ನಂತರ ಕೆಲವು ತಿಂಗಳುಗಳ ಕಾಲ ಕುಟುಂಬ ಸದಸ್ಯರ ಮೇಲೆ ಸಂಪೂರ್ಣವಾಗಿ ಅವಲಂಬಿತರಾಗಿದ್ದರು.

 

ಈ ಭೀಕರ ಅಪಘಾತ ನಡೆದಾಡುವ ಮತ್ತು ಬರೆಯುವ ಸಾಮರ್ಥ್ಯವನ್ನೇ ಕಸಿದುಕೊಂಡಿತ್ತು. ಆದರೂ ಇದರಿಂದ ಹೇಗಾದರೂ ಹೊರಬರಬಲೇಬೇಕೆಂದು ಯೋಚಿಸಿದ ಸೂರಜ್​ಗೆ ಕಠಿಣ ಪರಿಶ್ರಮವೊಂದೇ ಉತ್ತಮ ಮಾರ್ಗವೆಂದು ಅರ್ಥವಾಯಿತು. ಇದಾದ ಬಳಿಕ ತಮ್ಮ ಪದವಿ ಶಿಕ್ಷಣವನ್ನು ಪೂರ್ಣಗೊಳಿಸಿದರು. ಈಗ ಜವಾಹರಲಾಲ್ ನೆಹರು ವಿಶ್ವವಿದ್ಯಾಲಯದಲ್ಲಿ ರಷ್ಯನ್ ಭಾಷೆಯಲ್ಲಿ ಎಂಎ ವ್ಯಾಸಂಗ ಮಾಡುತ್ತಿದ್ದಾರೆ.

ದೇಶದಲ್ಲಿ ಕೋವಿಡ್ – 19 ವೈರಸ್​ ಉಲ್ಬಣಗೊಂಡಾಗ ಸೂರಜ್ ಯುಪಿಎಸ್‌ಸಿ ಪರೀಕ್ಷೆಗೆ ತಯಾರಿ ಆರಂಭಿಸಿದ್ದರು. ತಮ್ಮ ಮೊದಲ ಪ್ರಯತ್ನದಲ್ಲಿಯೇ ಪ್ರಿಲಿಮ್ಸ್ ಮತ್ತು ಮೇನ್ಸ್‌ನಲ್ಲಿ ಉತ್ತೀರ್ಣರಾದರು. ಆದರೆ, ಸಂದರ್ಶನದಲ್ಲಿ ಕೆಲವು ಅಂಕಗಳಿಂದ ಹಿನ್ನಡೆಯಾಯಿತು. ಇದೀಗ ಎರಡನೇ ಪ್ರಯತ್ನದಲ್ಲಿ ದೇಶದ ಅತ್ಯಂತ ಕಠಿಣ ಪರೀಕ್ಷೆಯಲ್ಲಿ ದಿಗ್ವಿಜಯ ಸಾಧಿಸಿದ್ದಾರೆ. ಫಲಿತಾಂಶ ಪ್ರಕಟವಾದಾಗಿನಿಂದ ಇವರ ಕುಟುಂಬ ಮತ್ತು ಸ್ನೇಹಿತರಲ್ಲಿ ಸಂತಸದ ಹೊನಲು ಮನೆ ಮಾಡಿದೆ.

“ಇಂದು ನಾವು ತುಂಬಾ ಸಂತೋಷವಾಗಿದ್ದೇನೆ. ನನ್ನ ಮಗ ತುಂಬಾ ಧೈರ್ಯಶಾಲಿ. ಆತ ಎಂದಿಗೂ ಛಲ ಬಿಡಲಿಲ್ಲ. ಜೀವನದಲ್ಲಿ ಯಶಸ್ವಿಯಾಗಲು ಅವನ ಮೂರು ಬೆರಳುಗಳೇ ಸಾಕು” ಎಂದು ಸೂರಜ್ ತಿವಾರಿ ತಂದೆ ರಮೇಶ್ ಕುಮಾರ್ ತಿವಾರಿ ಹಾಗೂ ತಾಯಿ ಆಶಾದೇವಿ ತಿವಾರಿ” ಹೆಮ್ಮೆಯಿಂದ ಹೇಳಿಕೊಂಡರು.

 

ಯುಪಿಎಸ್‌ಸಿ ಪರೀಕ್ಷೆಯಲ್ಲಿ ಇಶಿತಾ ಕಿಶೋರ್ ಅಗ್ರಸ್ಥಾನ ಗಳಿಸಿದ್ದಾರೆ. 26 ವರ್ಷದ ಗ್ರೇಟರ್ ನೋಯ್ಡಾ ನಿವಾಸಿಯಾದ ಇವರು ದೆಹಲಿ ವಿಶ್ವವಿದ್ಯಾಲಯದ ಶ್ರೀ ರಾಮ್ ಕಾಲೇಜ್ ಆಫ್ ಕಾಮರ್ಸ್‌ನ ಅರ್ಥಶಾಸ್ತ್ರ ಪದವೀಧರೆ. ಇದರ ನಂತರ, ಅರ್ನ್ಸ್ಟ್ ಮತ್ತು ಯಂಗ್ ಕಂಪನಿಯಲ್ಲಿ ರಿಸ್ಕ್‌ ಅಡ್ವೈಸರ್‌ ಆಗಿ ಕೆಲ ಕಾಲ ಕೆಲಸ ಮಾಡಿದ್ದರು. ತಮ್ಮ ಮೂರನೇ ಪ್ರಯತ್ನದಲ್ಲಿ ಯುಪಿಎಸ್‌ಸಿ ಪರೀಕ್ಷೆಯಲ್ಲಿ ಪಾಸ್‌ ಆಗಿದ್ದಾರೆ.


Spread the love

About Laxminews 24x7

Check Also

ಹಳೆಯ ರಾಜಕೀಯ ದ್ವೇಷವನ್ನು ಇಟ್ಟುಕೊಂಡು ಕಾಗವಾಡ ಶಾಸಕ ರಾಜು ಕಾಗೆ ಅವರು ನಮ್ಮ ಕುಟುಂಬದ ವಿರುದ್ಧ ಷಡ್ಯಂತ್ರ

Spread the loveಚಿಕ್ಕೋಡಿ: ಹಳೆಯ ರಾಜಕೀಯ ದ್ವೇಷವನ್ನು ಇಟ್ಟುಕೊಂಡು ಕಾಗವಾಡ ಶಾಸಕ ರಾಜು ಕಾಗೆ ಅವರು ನಮ್ಮ ಕುಟುಂಬದ ವಿರುದ್ಧ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ