Breaking News

ಇವರು ಲಿಂಗಾಯತ ಸಮುದಾಯ ಮುಗಿಸಬೇಕು ಎಂದುಕೊಂಡಿದ್ದಾರೆ: ಬಿಜೆಪಿ ಪ್ರಬಲ ನಾಯಕನ ಹೇಳಿಕೆ

Spread the love

ಬೆಂಗಳೂರು, ಏಪ್ರಿಲ್‌ 20: ಜಗದೀಶ್‌ ಶೆಟ್ಟರ್‌ ಸೇರಿದಂತೆ ಬಿಜೆಪಿಯ ಹಲವು ಪ್ರಬಲ ಲಿಂಗಾಯತ ನಾಯಕರಿಗೆ ಬಿಜೆಪಿ ಟಿಕೆಟ್‌ ನೀಡದ ಬೆನ್ನಲ್ಲೇ ಲಿಂಗಾಯತ ಸಮುದಾಯದ ಬಿಜೆಪಿಯಲ್ಲಿರುವ ಹಲವು ನಾಯಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಇದು ಕರ್ನಾಟಕದ ಬಹುದೊಡ್ಡ ಮತದಾರ ಸಮುದಾಯವಾದ ಯಾವುದೇ ಪಕ್ಷವಾದರೂ ಅದರಲ್ಲೂ ಬಿಜೆಪಿಗೆ ಮುಳುವಾಗಬಹುದು ಎನ್ನಲಾಗಿದೆ.

 

ಈಗಾಗಲೇ ಕರ್ನಾಟಕದ ಬಿಜೆಪಿ ಮುಖವೇ ಆಗಿದ್ದ ಬಿಎಸ್‌ ಯಡಿಯೂರಪ್ಪ ಅವರನ್ನು ರಾಜಕೀಯ ನಿವೃತ್ತಿಗೊಳಿಸಿದ್ದು, ಲಿಂಗಾಯತ ಸಮುದಾಯಕ್ಕೆ ನುಂಗಲಾರದ ತುತ್ತಾಗಿದೆ. ಇದರಿಂದ ಅನೇಕ ಬಿಜೆಪಿಯ ಸ್ಥಳೀಯ ನಾಯಕರು ಹಾಗೂ ಮುಖಂಡರು ಕಾಂಗ್ರೆಸ್‌ ಸೇರುತ್ತಿರುವುದು ಕಣ್ಣ ಮುಂದೆ ಕಾಣುತ್ತಿದೆ. ಮುಂದುವರೆದು ಮಾಸ್‌ ಲೀಡರ್‌ಗಳನ್ನು ಬಲವಂತವಾಗಿ ಬಿಜೆಪಿಯಲ್ಲಿ ಬದಿಗೆ ಸರಿಸಲಾಗುತ್ತಿದೆ. ಈ ಹಿಂದೆ ರಾಷ್ಟ್ರ ರಾಜಕಾರಣದಲ್ಲಿರುವ ಕರ್ನಾಟಕದವರು ನೇತೃತ್ವ ವಹಿಸಲು ಹೀಗೆ ಮಾಡಲಾಗುತ್ತಿದೆ ಎಂಬ ಗುಸುಗುಸು ಚರ್ಚೆ ಬಿಜೆಪಿಯಲ್ಲಿ ಆರಂಭವಾಗುತ್ತಿತ್ತು.

ಇದಕ್ಕೆ ಪೂರಕವಾಗಿ ಮಾಜಿ ಡಿಸಿಎಂ ಕೆಎಸ್‌ ಈಶ್ವರಪ್ಪ ಅವರಿಗೆ ಟಿಕೆಟ್‌ ನೀಡದೆ ಉಳಿಸಿದ್ದು, ಅಲ್ಲದೆ ಮಾಜಿ ಸಿಎಂ ಆಗಿದ್ದ ಜಗದೀಶ್‌ ಶೆಟ್ಟರ್‌ ಅವರಿಗೂ ಪ್ರಸಕ್ತಚುನಾವಣೆಯಲ್ಲಿ ಟಿಕೆಟ್‌ ನೀಡದೆ ಅವಮಾನ ಮಾಡಲಾಗಿದೆ ಎಂಬ ಭಾವನೆಲಿಂಗಾಯತಸಮುದಾಯದಲ್ಲಿ ಬಂದಿರುವುದರಲ್ಲಿನ ಯಾವುದೇ ಹುರುಳಿಲ್ಲ. ಹಿಂದೆ ಇದೇ ಅವಮಾನ ಬಿಎಸ್‌ ಯಡಿಯೂರಪ್ಪ ಅವರಿಗೆ ಆದಾಗ ಅವರು ತಮ್ಮದೇ ಪ್ರಾದೇಶಿಕ ಪಕ್ಷ ಕರ್ನಾಟಕ ಜನತಾ ಪಾರ್ಟಿ (ಕೆಜೆಪಿ) ಕಟ್ಟಿಕೊಂಡಿದ್ದರು.

ಆಗ ಇದರ ದುಷ್ಪರಿಣಾಮ ಅರಿತಬಿಜೆಪಿಅವರನ್ನು ಸಮಾಧಾನಪಡಿಸಿ ಮತ್ತೆ ಪಕ್ಷಕ್ಕೆ ಸೆಳೆದುಕೊಂಡಿತ್ತು. ಒಂದು ವೇಳೆ ಬಿಎಸ್‌ ಯಡಿಯೂರಪ್ಪ ಆಗ ಕೆಜೆಪಿ ಮುಂದುವರೆಸಿದ್ದೇ ಆದರೆ ಕರ್ನಾಟಕ ಮಾತ್ರವಲ್ಲ ಇಡೀ ದಕ್ಷಿಣ ಭಾರತದಲ್ಲಿ ಬಿಜೆಪಿಗೆ ನೆಲೆಯೂ ಇದಂತೆ ಕಾಣುತ್ತಿರಲಿಲ್ಲ. ಆದರೆ ಯಡಿಯೂರಪ್ಪ ಅವರ ಮನಸ್ಸು ಬದಲಾಯಿಸಿದ್ದು, ಬಿಜೆಪಿ ಪುನರ್‌ ಜನ್ಮ ನೀಡಿದಂತೆ ಆಗಿತ್ತು. ಆದರೆ ಬರುತ್ತಾ ಬಿಜೆಪಿಯಲ್ಲಿ ಹೈಕಮಾಂಡ್‌ ಪ್ರಭಾವ ಹೆಚ್ಚಾಗುತ್ತಾ ಬಂದಿತ್ತು.

ಇದು ಮುಂದುವರೆದು ಪ್ರಸ್ತುತ ಚುನಾವಣೆಯಲ್ಲಿ ಅದರ ಕೈವಾಡ ಹೆಚ್ಚಾಗಿ ಅನೇಕ ಹಿರಿಯ ಲಿಂಗಾಯತ ನಾಯಕರನ್ನು ಬಲವಂತವಾಗಿ ಟಿಕೆಟ್ ನೀಡದೆ ಮುನ್ನೆಲೆಯಲ್ಲಿ ಇದ್ದ ನಾಯಕರನ್ನು ಬದಿಗೆ ಸರಿಸಲಾಯಿತು. ಇದರಲ್ಲಿ ಕೆಲವು ಲಿಂಗಾಯತ ನಾಯಕರು ತಮ್ಮ ಮಕ್ಕಳ ಹಾಗೂ ಮತ್ತಾವುದೋ ಕಾರಣಕ್ಕೆ ಒಲ್ಲದ ಮನಸ್ಸಿನಿಂದ ಒಪ್ಪಿಕೊಂಡರೆ ಜಗದೀಶ್‌ ಶೆಟ್ಟರ್‌ ಒಬ್ಬರೇ ತಾವು ಬಿಜೆಪಿ ವಿರುದ್ಧ ಸಿಡಿದು ತಮ್ಮ ವಿರೋಧಿ ಪಕ್ಷವಾದ ಕಾಂಗ್ರೆಸ್‌ ಸೇರಿಕೊಂಡು ಟಿಕೆಟ್‌ ಪಡೆದು ಕಣಕ್ಕೂ ಇಳಿದಿದ್ದಾರೆ.

ಈಗ ಜಗದೀಶ್‌ ಶೆಟ್ಟರ್‌ ಅವರಿಗೆ ಟಿಕೆಟ್‌ ನೀಡದೇ ಇರುವುದರಿಂದ ಹಲವಾರು ಸ್ಥಳೀಯ ಮುಖಂಡರು ಬಿಜೆಪಿಗೆ ರಾಜೀನಾಮೆ ನೀಡಿದ್ದಾರೆ. ಮುಂದುವರೆದು ಉತ್ತರ ಭಾಗದ ಮತ್ತೊಂದು ದೊಡ್ಡ ಧ್ವನಿಯೊಂದು ಬಿಜೆಪಿಯಲ್ಲೇ ಇದ್ದುಕೊಂಡು ಜಗದೀಶ್‌ ಶೆಟ್ಟರ್‌ ಬಗ್ಗೆ ಮಾತನಾಡಿದ್ದಾರೆ, ಅವರು ಬೇರೆ ಯಾರು ಅಲ್ಲ 280ಕ್ಕೂ ಹೆಚ್ಚು ಶಿಕ್ಷಣ ಸಂಸ್ಥೆಗಳನ್ನು ಹೊಂದಿರುವ ಕೆಎಲ್‌ಇ ಸೊಸೈಟಿಯ ಮುಖ್ಯಸ್ಥ ಬಿಜೆಪಿಯ ರಾಜ್ಯಸಭಾ ಮಾಜಿ ಸದಸ್ಯ ಪ್ರಭಾಕರ್‌ ಕೋರೆ ಅವರು.

ಅವರು ಹೀಗೆ ಹೇಳಿದ್ದಾರೆ, ಜಗದೀಶ್‌ ಶೆಟ್ಟರ್‌ ರಾಜೀನಾಮೆಯಿಂದ ಬಿಜೆಪಿಗೆ ನಷ್ಟ. ಪಕ್ಷ ಅವರನ್ನು ಯಾಕೆ ಕಡೆಗಣಿಸಿತು ಎಂದು ತಿಳಿಯುತ್ತಿಲ್ಲ. ಪಕ್ಷೇತರವಾಗಿ ನಿಂತರೂ ಶೆಟ್ಟರ್‌ ಗೆಲ್ಲುತ್ತಾರೆ. ಈ ಎಲ್ಲ ಬೆಳವಣಿಗೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಗೊತ್ತಿಲ್ಲ, ಮಧ್ಯ ಇರುವವರೇ ಮಾಡುತ್ತಿದ್ದಾರೆ. ಇವರು ಲಿಂಗಾಯತ ಸಮಾಜ ಮುಗಿಸುತ್ತೇವೆ ಎಂದುಕೊಂಡಿದ್ದರೆ ಅದು ಎಂದಿಗೂ ಆಗುವುದಿಲ್ಲ ಎಂದು ಬಿಜೆಪಿಯ ಹಿರಿಯ ನಾಯಕ ಪ್ರಭಾಕರ ಕೋರೆ ಅವರು ಹೇಳಿದ್ದಾರೆ.

ಜಗದೀಶ್‌ ಶೆಟ್ಟರ್ ಅವರನ್ನು ಪಕ್ಷ ಕಡೆಗಣಿಸಿದ್ದರ ಹಿಂದೆ ಮೊನ್ನೆ ಸ್ವತಃ ಶೆಟ್ಟರ್‌ ಅವರೇ ನನಗೆ ಟಿಕೆಟ್‌ ಕೈತಪ್ಪಲು ಬಿಎಲ್‌ ಸಂತೋಷ್‌ ಕಾರಣ ಎಂದು ಹೇಳಿದ್ದರು. ಅಲ್ಲದೆ ಲಿಂಗಾಯತ ಸಮುದಾಯವನ್ನು ಹೈಕಮಾಂಡ್‌ ತುಳಿಯುತ್ತಿದೆ ಎಂದು ಸಹ ಹೇಳಿದ್ದರು. ಈ ಬಗ್ಗೆ ಚರ್ಚೆಗಳು ನಡೆದು ಕರ್ನಾಟಕದಲ್ಲಿ ಬ್ರಾಹ್ಮಣ ಸಮುದಾಯದ ಜಗದೀಶ್‌ ಶೆಟ್ಟರ್‌ ಅವರು ಸಿಎಂ ಆಗುತ್ತಾರೆ, ಇಲ್ಲವೆ ಬಿಎಲ್‌ ಸಂತೋಷ್‌ ಆಗುತ್ತಾರೆ ಅದಕ್ಕೆ ಲಿಂಗಾಯತ ನಾಯಕರನ್ನು ಬದಿಗೆ ಸರಿಸಲಾಗುತ್ತಿದೆ ಎಂದು ಮಾತುಗಳು ಕೇಳಿ ಬಂದಿದ್ದವು.

ಆದರೆ ಈಗ ಪ್ರಬಲ ಲಿಂಗಾಯತ ನಾಯಕ ಪ್ರಭಾಕರ್‌ ಕೋರೆ ಅವರು ಮಾತನಾಡಿರುವುದು ಸಮಾನ್ಯವಲ್ಲ. ಲಿಂಗಾಯತರು ಅದರಲ್ಲೂ ಉತ್ತರ ಕರ್ನಾಟಕದಲ್ಲಿ ಸಿಡಿದೆದ್ದಿದ್ದಾರೆ ಎಂದೇ ಅರ್ಥ. ಇದರಲ್ಲಿ ಅಲ್ಲಿನ ಪ್ರಬಲ ಮಠಗಳು ಬೆನ್ನ ಹಿಂದೆ ಇಲ್ಲದೆ ಇಂತಹ ಮಾತುಗಳು ಬಹಿರಂಗವಾಗಿ ಬರುವುದಿಲ್ಲ. ಒಂದೇರಡು ವರ್ಷಗಳ ಕಾಲದ ಅಸಮಾಧಾನ ಸಿಡಿದು ಹೊರ ಬರುತ್ತಿದೆ ಎಂದು ಅರ್ಥ ಎಂದು ಬಿಜೆಪಿಯ ಮೂಲಗಳು ಅಭಿಪ್ರಾಯಪಟ್ಟಿವೆ.


Spread the love

About Laxminews 24x7

Check Also

ಕನ್ನಡ ಕಿರುತೆರೆಯ ಜನಪ್ರಿಯ ನಿರೂಪಕಿ ಅಪರ್ಣಾ ಅವರು ಮೃತರಾಗಿದ್ದಾರೆ. ಕ್ಯಾನ್ಸರ್​​ನಿಂದ ಬಳಲುತ್ತಿದ್ದ ಅವರು ಇಂದು (ಜುಲೈ 11) ನಿಧನರಾಗಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. #AparnaVastarey #Aparna #Death

Spread the loveಕನ್ನಡ ಕಿರುತೆರೆಯ ಜನಪ್ರಿಯ ನಿರೂಪಕಿ ಅಪರ್ಣಾ ಅವರು ಮೃತರಾಗಿದ್ದಾರೆ. ಕ್ಯಾನ್ಸರ್​​ನಿಂದ ಬಳಲುತ್ತಿದ್ದ ಅವರು ಇಂದು (ಜುಲೈ 11) …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ