ವಿಜಯಪುರ : ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹೇಳಿಕೆಗೆ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಪ್ರತಿಕ್ರಿಯಿಸಿದ್ದು ”ದೇವೇಗೌಡರ ಧೂಳಿಗೂ ಸಮಾನವಲ್ಲದ ನೀವು ಮಾತನಾಡಬೇಕಿದ್ದರೆ ಎಚ್ಚರಿಕೆ ಇರಲಿ” ಎಂದು ಕಿಡಿ ಕಾರಿದ್ದಾರೆ.
ದೇವೇಗೌಡರ ಕುಟುಂಬ ಅಧಿಕಾರಕ್ಕಾಗಿ ಚಪ್ಪಲಿಯಲ್ಲಿ ಹೊಡೆದಾಡುತ್ತಿದೆ ಎಂದು ಹೇಳಿಕೆ ನೀಡಿದ್ದ ನಳಿನ್ ಕುಮಾರ್ ವಿರುದ್ಧ ವಿಜಯಪುರ ನಗರದಲ್ಲಿ ಪಂಚರತ್ನ ರಥಯಾತ್ರೆಯಲ್ಲಿ ವಾಗ್ದಾಳಿ ನಡೆಸಿ, ದೇವೇಗೌಡರ ಕುಟುಂಬದ ಬಗ್ಗೆ ಲಘುವಾಗಿ ಮಾತನಾಡಲು ನಿಮಗೆ ಯೋಗ್ಯತೆ ಇಲ್ಲ ಎಂದು ಹರಿಹಾಯ್ದರು.
ದೇವೇಗೌಡರ ಧೂಳಿಗೂ ಸಮಾನವಿಲ್ಲದ ನೀವು ವಿಜಯಪುರ ಶಾಸಕ ಹಾಗೂ ಬಾಗಲಕೋಟೆ ಮಂತ್ರಿ ಹೊಡೆದಾಡಿಕೊಳ್ಳುತ್ತಿದ್ದಾರೆ ಮೊದಲು ಅದನ್ನು ಗಮನಿಸಿ ಎಂದು ವಾಗ್ದಾಳಿ ನಡೆಸಿದರು.
ನಿಮ್ಮ ದುರಂಹಕಾರದಿಂದ ರಾಜ್ಯದಿಂದ ನಿಮಗೆ ಟೆಂಟ್ ಕಿತ್ತುಕೊಂಡು ಹೋಗುವ ದುಸ್ಥಿತಿ ಬರಲಿದೆ. ರಾಜ್ಯದ ಭವಿಷ್ಯದ ಹಿತದೃಷ್ಟಿಯಿಂದ ಇಂತಹ ದುರಂಹಕಾರಿ ರಾಷ್ಟ್ರೀಯ ಪಕ್ಷಗಳನ್ನು ನೆರೆಯ ರಾಜ್ಯಗಳ ಮತದಾರರಂತೆ ದೂರ ಇಡುವುದಕ್ಕಾಗಿ ರಾಜ್ಯದ ಮತದಾರರು ನಮ್ಮನ್ನು ಹಾರೈಸಬೇಕು ಎಂದು ಮನವಿ ಮಾಡಿದರು.
Laxmi News 24×7