ಸರ್ಕಾರ ವತಿಯಿಂದ ಜಯಂತಿ ಆಚರಿಸುವಂತೆ ಮನವಿ.
12ನೇ ಶತಮಾನದಲ್ಲಿ ಬಸವಾದಿ ಶರಣರಲ್ಲಿ ಒಬ್ಬರಾದ ಕಾಯಕಯೋಗಿ ಶ್ರೀ ಶಿವಶರಣ ಮೇದಾರ ಕೇತೇಶ್ವರ ಜಯಂತಿಯನ್ನು ಬೆಳಗಾವಿ ನಗರದಲ್ಲಿ ಆಚರಿಸಲಾಯಿತು.
12ನೇ ಶತಮಾನದಲ್ಲಿ ವಿಶ್ವಗುರು ಬಸವಣ್ಣನವರ ಬಳಗದಲ್ಲಿದ್ದ ಶ್ರೀ ಮೇದಾರ ಕೇತೇಶ್ವರ ಅವರ 892 ನೇ ಜಯಂತಿಯನ್ನು ಬೆಳಗಾವಿ ನಗರದ ಮೇದಾರ ಓಣಿಯಲ್ಲಿ ಆಚರಣೆ ಮಾಡಲಾಯಿತು.ಶ್ರೀ ಕೇತಯ್ಯ ಮೇದಾರ ಸಮಾಜದ ಅಧ್ಯಕ್ಷರಾದ ಪ್ರಕಾಶ ನೇಸರಿಕರ ಅವರು ಕೇತೇಶ್ವರ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಪುಷ್ಟ ಅರ್ಪಿಸಿದರು.ನಂತರ ಎಲ್ಲ ಮೇದಾರ ಸಮಾಜದ ಕುಲಬಾಂಧವರಿಗೆ ಸಿಹಿ ವಿತರಿಸಿದರು.
ಈ ಸಂದರ್ಭದಲ್ಲಿ ಜಯಂತಿ ಉದ್ದೇಶಿಸಿ ಮಾತಾನಾಡಿದ ಮೇದಾರ ಸಮಾಜದ ಹಿರಿಯರೊಬ್ಬರು ನಮ್ಮ ಕುಲಗುರುಗಳಾಸ ಮೇದಾರ ಕೇತೇಶ್ವರ ಅವರು ಬಿದಿರಿನಿಂದ, ಮೊರ,ಬುಟ್ಟಿ,ಮಾಡಿ ಬಂದ ಹಣದಿಂದ ಇಷ್ಟ ಲಿಂಗವ ಪೂಜೆ ಹಾಗೂ ಶರಣರ ದಾಸೋಹ ಮಾಡುತ್ತಾ ಇದ್ದರು. ಇವರ ಭಕ್ತಿ, ಕಾಯಕ. ದಾಸೋಹ ಮೆಚ್ಚಿ. “ಶರಣರಲ್ಲಿ ಮಹಾ ಶರಣ “ಎಂಬ ಬಿರುದನ್ನುವಿಶ್ವಗುರು ಬಸವಣ್ಣನವರು ಕೊಟ್ಟು ಗೌರವಿಸಿ ಸನ್ಮಾನಿಸಿದ್ದರು.ಇಂತಹ ಮಹಾನ್ ಗುರುಗಳನ್ನು ನಾವು ಹೊಂದಿರುವುದು ನಮ್ಮ ಭಾಗ್ಯ ಎಂದು ಭಾವಿಸುತ್ತ ಇವತ್ತು ಎಲ್ಲರೂ ಸೇರಿ ಜಯಂತಿ ಆಚರಿಸುತ್ತಿದ್ದೆವೆ ಎಂದರು.ಇನ್ನು ಮುಂದಿನ ದಿನಗಳಲ್ಲಿ ಕೇತೇಶ್ವರ ಜಯಂತಿಯನ್ನು ಸರ್ಕಾರದ ವತಿಯಿಂದ ಆಚರಿಸುವ ನಿರ್ಧಾರವನ್ನು ಮುಖ್ಯಮಂತ್ರಿಗಳು ಕೈಗೊಳ್ಳಬೇಕೆಂದು ಮನವಿ ಮಾಡಿಕೊಂಡರು.
ಈ ಸಂದರ್ಭದಲ್ಲಿ ಮೇದಾರ ಸಮಾಜದ ಮುಖಂಡರಾದ ಮಲ್ಲೇಶಿ ಕೊರಡೆ,ವಿಜಯ ಕಾಕತಿಕರ,ರಾಜು ಗೋಕಾಕ್, ಪ್ರಕಾಶ ಹಜಗೊಳಕರ,ನಾಗೇಶ ಕಾಕತಿಕರ,ಸಾಗರ ಬೆಳಗಾವಕರ,ಸೇರಿದಂತೆ ರಾಜು ನೇಸಕರಿಕರ,ಶೆಟ್ಟೆಪ್ಪ ಸಾಳುಂಕೆ,ಲಕ್ಷ್ಮಣ ಬುರುಡ,ಉಮೇಶ ಕುಕಡೆ,ಉತ್ತಮ್ಮ ಮುಚ್ಚಂಡಿ,ರವಿ ದೇಗನೊಳ್ಳಿ,ಹಾಗೂ ಮೇದಾರ ಸಮಾಜದ ಬಾಂಧವರು ಉಪಸ್ಥಿತರಿದ್ದರು.