Breaking News
Home / ಜಿಲ್ಲೆ / ಬೆಳಗಾವಿ / ಅಥಣಿ / ಲಕ್ಷ್ಮಣ ಸವದಿಯವರು ತಿಳಿಗೇಡಿತನದ ಹೇಳಿಕೆಯನ್ನು ತಿದ್ದಿಕೊಳ್ಳಲಿ – ಸಿದ್ಧಾರ್ಥ ಸಿಂಗೆ

ಲಕ್ಷ್ಮಣ ಸವದಿಯವರು ತಿಳಿಗೇಡಿತನದ ಹೇಳಿಕೆಯನ್ನು ತಿದ್ದಿಕೊಳ್ಳಲಿ – ಸಿದ್ಧಾರ್ಥ ಸಿಂಗೆ

Spread the love

ಮಾನ್ಯ ಶ್ರೀ ಲಕ್ಷ್ಮಣ ಸವದಿಯವರು ತಿಳಿಗೇಡಿತನದ ಹೇಳಿಕೆಯನ್ನು ತಿದ್ದಿಕೊಳ್ಳಲಿ – ಸಿದ್ಧಾರ್ಥ ಸಿಂಗೆ

🔴 ಮಾನ್ಯ ಶ್ರೀ ಲಕ್ಷ್ಮಣ ಸವದಿಯವರು ವಿಧಾನ ಪರಿಷತ್ ವಾಯುವ್ಯ ಶಿಕ್ಷಕ ಹಾಗೂ ಪದವಿಧರ ಮತಕ್ಷೇತ್ರದ ಚುನಾವಣೆಯ ತಮ್ಮ ಪಕ್ಷದ ಪ್ರಚಾರ ಸಭೆ ಬೆಳಗಾವಿಯಲ್ಲಿ ಕೆಲವು ಹಾಸ್ಯಾಸ್ಪದ ಮಾತುಗಳನ್ನಾಡಿ ನಗೆಪಾಟಲಿಗೆ ಈಡಾಗಿರುವದು ಕೆಲವರಿಗೆ ಸೋಜಿಗ ಎನಿಸಿದರೂ ನಿಜವಾಗಿಯೂ ಅವರೊಬ್ಬ ನಗೆಪಾಟಲಿನ ವ್ಯಕ್ತಿತ್ವ ಹೊಂದಿರುವವರು ಎಂದೆ ಹೇಳಬೇಕಾಗುತ್ತದೆ

🟠 ಚುನಾವಣಾ ಪ್ರಚಾರದಲ್ಲಿ ಅಂಗವೈಕಲ್ಯವನ್ನು ಅವಹೇಳನಕ್ಕೆ ಉಪಯೋಗಿಸಿ ಎಲ್ಲ ವಿಕಲಚೇತನರಿಗೆ ಲಕ್ಷ್ಮಣ ಸವದಿ ಅವರು ಅವಮಾನ ಮಾಡಿದ್ದಾರೆ. ಕಾಲು ಇಲ್ಲದವರು, ಸರಿಯಾಗಿ ನಡೆಯಲು ಬಾರದವರು ಶಾಸಕ ಸಂಸದರಾಗಲು, ಆಡಳಿತ ನಡೆಸಲು ನಮ್ಮ ಸಂವಿಧಾನವೇ ಅವಕಾಶ ನೀಡಿರುವಾಗ ಯಾವುದೊ ಕಾಲ್ಪನಿಕ ಕಥೆ ಕಟ್ಟಿ ಕಾಲಿಲ್ಲದವರನ್ನು ಅಸಮರ್ಥರು ಎಂದು ಬಿಂಬಿಸುವುದು ಎಷ್ಟು ಸರಿ ? ಇಷ್ಟೊಂದು ಕುಬ್ಜ್ ಮನಸ್ಸಿನವರಾ ಮಾನ್ಯ ಲಕ್ಷ್ಮಣ ಸವದಿಯವರು ?

🟡 ವಾಯುವ್ಯ ಪದವಿಧರ ಮತಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಕುಟುಂಬ ಸವದಿಯವರು ಹುಟ್ಟುವುದಕ್ಕೆ ಮುಂಚೆ ರಾಜಕೀಯ ಕ್ಷೇತ್ರದಲ್ಲಿ ಇದೆ.ಭಾರತಕ್ಕೆ ಸ್ವಾತಂತ್ರ್ಯ ದೊರಕಿಸಿಕೊಟ್ಟ, ಸ್ವಾತಂತ್ರ್ಯಾನಂತರದಿಂದ ಇಲ್ಲಿಯವರೆಗೆ ಭವ್ಯ ಭಾರತ ನಿರ್ಮಾಣ ಮಾಡಿದ ಕಾಂಗ್ರೆಸ್ ಪಕ್ಷದ ಬಗ್ಗೆ ಅವರಿಗೆ ಹೆಮ್ಮೆ ಇದೆ. ಕಾಂಗ್ರೆಸ್ ಪಕ್ಷದ ಸದಸ್ಯರಾಗಿರುವದೇ ಒಂದು ಗೌರವ ಹಾಗೂ ನಿಜವಾದ ದೇಶಪ್ರೇಮ ಎಂದು ತಿಳಿದಿರುವ ಕುಟುಂಬದಿಂದ ಬಂದು ಪಕ್ಷ ನಿಷ್ಠೆಯ ಮೇಲೆ ಇಂದು ಚುನಾವಣೆಯನ್ನು ಪ್ರಾಮಾಣಿಕವಾಗಿ ಹಣಬಲದ ಹಾಗೂ ಕೋಮುವಾದದ ವಿರುದ್ಧ ಎದುರಿಸುತ್ತಿದ್ದಾರೆ.

🟢 ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಶ್ರೀ ಸುನೀಲ ಸಂಕ ವೃತ್ತಿಯಲ್ಲಿ ವಕೀಲರು ಸಂವಿಧಾನ ಹಾಗೂ ಕಾನೂನಿನ ತಿಳುವಳಿಕೆ ಮಾನ್ಯ ಲಕ್ಷ್ಮಣ ಸವದಿ ಅವರಿಗಿಂತ ಹೆಚ್ಚು. ಇಂತಹವರ ತಿಳುವಳಿಕೆ, ಸಾಮಾನ್ಯ ಜ್ಞಾನ ಪ್ರಶ್ನೆ ಮಾಡುವ ಲಕ್ಷ್ಮಣ ಸವದಿಯವರೆ ನಿಮ್ಮ ಇಂತಹ ಉಢಾಪೆಯ ಮಾತುಗಳಿಂದಲೇ 2018 ರಲ್ಲಿ ಜನರಿಂದ ತಿರಸ್ಕ್ರತರಾಗಿ ಹಿಂಬಾಗಿಲ ರಾಜಕಾರಣದ ಮೂಲಕ ಚಿಂತಕರ ಚಾವಡಿ ಎಂದೆನಿಸಿರುವ ವಿಧಾನ ಪರಿಷತ್ ಗೆ ಪ್ರವೇಶ ಪಡೆದಿದ್ದಿರಿ. ನಿಜವಾಗಿಯೂ ನೀವು ಚಿಂತಕರೇ ? ಸದಾ ಹುಡುಗಾಟಿಕೆಯ ಮಾತನಾಡುವ ತಾವು ಹಿರಿಯರ ಮನೆಯ ಸದಸ್ಯರಾಗಿರಲು ಅರ್ಹರೆ ಆತ್ಮವಿಮರ್ಶೆ ಮಾಡಿಕೊಳ್ಳಿ. ಆಮೇಲೆ ಎಲ್ಲ ವಿಧದಲ್ಲೂ ಅರ್ಹರಾಗಿರುವ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯ ಬಗ್ಗೆ ಮಾತನಾಡಿ.

🔵 ರಾಜ್ಯಮಟ್ಟದ ನಾಯಕರಾಗಿ ಗುರುತಿಸಿಕೊಂಡಿರುವ ಶ್ರೀ ಲಕ್ಷ್ಮಣ ಸವದಿಯವರು ಇನ್ನೂ ಮುಂದಾದರೂ ತಮ್ಮ ಘನತೆ ಗೌರವಕ್ಕೆ ತಕ್ಕಂತೆ ಮಾತನಾಡಬೇಕೆಂದು ಆಶಿಸುತ್ತೇನೆ ಇಲ್ಲವಾದಲ್ಲಿ ನಿಮ್ಮ ಮುಖದಲ್ಲಿ ತೋರುವ ಗಾಂಭೀರ್ಯ ನಯವಂಚಕತನದಿಂದ ಕೂಡಿದ್ದು ನಿಮ್ಮ ಹೇಳಿಕೆಗಳನ್ನು ರಾಜ್ಯದ ಜನತೆ ಗಂಭಿರವಾಗಿ ತೆಗೆದುಕೊಳ್ಳದೆ ಹಾಸ್ಯವಾಗಿ ತೆಗೆದುಕೊಂಡು ಹಾಸ್ಯಾಸ್ಪದ ವ್ಯಕ್ತಿ ಎಂದು ಗುರುತಿಸುವರು.

🟣 ಸಿದ್ಧಾರ್ಥ ಸಿಂಗೆ, ಅಧ್ಯಕ್ಷರು,
ಅಥಣಿ ಬ್ಲಾಕ್ ಕಾಂಗ್ರೆಸ್ ಕಮಿಟಿ.


Spread the love

About Laxminews 24x7

Check Also

ಅಥಣಿಯ ಇಬ್ಬರು ವಿದ್ಯಾರ್ಥಿನಿಯರಿಗೆ ತೃತೀಯ ರ್‍ಯಾಂಕ್‌

Spread the love ಬೆಳಗಾವಿ: ಜಿಲ್ಲೆಯ ಅಥಣಿಯ ಬಣಜವಾಡ ವಸತಿ ಪದವಿಪೂರ್ವ ಕಾಲೇಜಿನ ಇಬ್ಬರು ವಿದ್ಯಾರ್ಥಿನಿಯರು ವಿಜ್ಞಾನ ಹಾಗೂ ವಾಣಿಜ್ಯ ವಿಭಾಗದಲ್ಲಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ