ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಅಬ್ಬರ ಮುಂದುವರೆದಿದ್ದು ಇಂದು 30 ಮಂದಿ ಸೋಂಕಿಗೆ ಬಲಿಯಾಗಿದ್ದಾರೆ. ಒಟ್ಟು ಸಾವಿನ ಸಂಖ್ಯೆ 401ಕ್ಕೇರಿದೆ. ಬೆಂಗಳೂರಲ್ಲಿ 10 ಮಂದಿ ಸಾವನ್ನಪ್ಪಿದ್ದು, ಇದುವರೆಗೂ ಒಟ್ಟು 155 ಮಂದಿ ಸಾವನ್ನಪ್ಪಿದ್ದಾರೆ.
ಆರೋಗ್ಯ ಇಲಾಖೆ ಬಿಡುಗಡೆ ಮಾಡಿರುವ ಬುಲೆಟಿನ್ ಅನ್ವಯ, ಬೆಂಗಳೂರಿನಲ್ಲಿ 10, ಬೀದರ್ 8, ಮೈಸೂರು 3, ದಕ್ಷಿಣ ಕನ್ನಡ 2, ದಾವಣಗೆರೆ, ಬಳ್ಳಾರಿ, ಹಾಸನ, ಕೊಡಗು, ತುಮಕೂರು, ಚಿಕ್ಕಬಳ್ಳಾಪುರ, ಬಾಗಲಕೋಟೆಯಲ್ಲಿ ತಲಾ ಒಂದು ಸಾವಿನ ಪ್ರಕರಣ ವರದಿಯಾಗಿದೆ. ಬೆಂಗಳೂರು ನಗರವೊಂದರಲ್ಲೇ 166 ಮಂದಿ ಸೇರಿದಂತೆ ರಾಜ್ಯದಲ್ಲಿ ಒಟ್ಟು 279 ಮಂದಿ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಸಾವನ್ನಪ್ಪಿದವರ ವಿವರ:
1) ರೋಗಿ-10010: ಬೆಂಗಳೂರಿನ 65 ವರ್ಷದ ವೃದ್ಧ. ಕೆಮ್ಮು ಮತ್ತು ವಿಷಮ ಶೀತ ಜ್ವರದಿಂದ ಬಳಲುತ್ತಿದ್ದರು. ಜೂನ್ 21 ರಂದು ಸ್ವ-ನಿವಾಸದಲ್ಲೇ ಸಾವನ್ನಪ್ಪಿದ್ದರು.
2) ರೋಗಿ-10477: ಬೆಂಗಳೂರಿನ 44 ವರ್ಷದ ಪುರುಷ. ತೀವ್ರ ಉಸಿರಾಟದ ಸಮಸ್ಯೆ, ಜ್ವರ, ಕೆಮ್ಮನಿಂದ ಬಳುತ್ತಿದ್ದರು. ಜೂನ್ 20 ರಂದು ಆಸ್ಪತ್ರೆಗೆ ದಾಖಲಾಗಿದ್ದು, ಜುಲೈ 1 ರಂದು ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದ್ದರು.
3) ರೋಗಿ-10480: ಬೆಂಗಳೂರಿನ 58 ವರ್ಷದ ವೃದ್ಧೆ. ತೀವ್ರ ಉಸಿರಾಟದ ಸಮಸ್ಯೆ, ಜ್ವರ, ಕೆಮ್ಮನಿಂದ ಬಳಲುತ್ತಿದ್ದರು. ಮಧುಮೇಹ, ಅಧಿಕ ರಕ್ತದೊತ್ತಡದಿಂದ ಜೂನ್ 22 ರಂದು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಜುಲೈ 4 ರಂದು ಸಾವನ್ನಪ್ಪಿದ್ದರು.
4) ರೋಗಿ-10504: ಬೆಂಗಳೂರಿನ 54 ವರ್ಷದ ಪುರುಷ. ತೀವ್ರ ಉಸಿರಾಟದ ಸಮಸ್ಯೆ, ಜ್ವರ ಮತ್ತು ಕೆಮ್ಮಿನಿಂದ ಜೂನ್ 26 ರಂದು ಆಸ್ಪತ್ರೆಗೆ ದಾಖಲಾಗಿದ್ದರು. ಜುಲೈ 03 ರಂದು ಸಾವನ್ನಪ್ಪಿದ್ದರು.
5) ರೋಗಿ-10897: ಬೆಂಗಳೂರಿನ 79 ವರ್ಷದ ವೃದ್ಧ. ತೀವ್ರ ಉಸಿರಾಟದ ಸಮಸ್ಯೆ, ಜ್ವರ ಮತ್ತು ಕೆಮ್ಮು, ಅಧಿಕ ರಕ್ತದೊತ್ತಡ ಸಮಸ್ಯೆಯಿಂದ ಜೂನ್ 28 ರಂದು ಆಸ್ಪತ್ರೆಗೆ ದಾಖಲಾಗಿದ್ದರು. ಜುಲೈ 02 ರಂದು ಸಾವನ್ನಪ್ಪಿದ್ದರು.
6) ರೋಗಿ-13302: ದಕ್ಷಿಣ ಕನ್ನಡದ 62 ವರ್ಷದ ವೃದ್ಧ. ತೀವ್ರ ಉಸಿರಾಟದ ಸಮಸ್ಯೆ, ಅಧಿಕ ರಕ್ತದೊತ್ತಡ, ಮಧುಮೇಹ ಸಮಸ್ಯೆಯಿಂದ ಜೂನ್ 30 ರಂದು ಆಸ್ಪತ್ರೆಗೆ ದಾಖಲಾಗಿದ್ದರು. ಜುಲೈ 20 ಸಾವನ್ನಪ್ಪಿದ್ದರು.
7) ರೋಗಿ-13951: ಬೆಂಗಳೂರಿನ 59 ವರ್ಷದ ವೃದ್ಧೆ. ವಿಷಮ ಶೀತ ಜ್ವರದಿಂದ ಬಳಲುತ್ತಿದ್ದರು. ಮಧುಮೇಹ, ಅಧಿಕ ರಕ್ತದೊತ್ತಡ ಮತ್ತು ಹೃದಯ ಸಂಬಂಧಿ ಸಮಸ್ಯೆಯಿಂದ ಬಳಲುತ್ತಿದ್ದವರನ್ನು ಜೂನ್ 19 ರಂದು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಜೂನ್ 26 ರಂದು ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದ್ದರು.
8) ರೋಗಿ-14,023: ಬೆಂಗಳೂರಿನ 59 ವರ್ಷದ ವೃದ್ಧ. ತೀವ್ರ ಉಸಿರಾಟದ ಸಮಸ್ಯೆ, ಕೆಮ್ಮು, ಜ್ವರ ಹಾಗೂ ಮಧುಮೇಹದಿಂದ ಬಳಲುತ್ತಿದ್ದವರನ್ನು ಜೂನ್ 19 ರಂದು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಜುಲೈ 01 ರಂದು ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದ್ದರು.
9) ರೋಗಿ-14145: ಬೆಂಗಳೂರಿನ 74 ವರ್ಷದ ವೃದ್ಧ. ತೀವ್ರ ಉಸಿರಾಟದ ಸಮಸ್ಯೆ, ಕೆಮ್ಮು, ಜ್ವರದಿಂದ ಬಳಲುತ್ತಿದ್ದರು. ಜೂನ್ 21 ರಂದು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಜೂನ್ 28 ರಂದು ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದ್ದರು.
10) ರೋಗಿ-14168: ಬೆಂಗಳೂರಿನ 68 ವರ್ಷದ ಪುರುಷ. ತೀವ್ರ ಉಸಿರಾಟದ ಸಮಸ್ಯೆ, ಮಧುಮೇಹ, ಅಧಿಕ ರಕ್ತದೊತ್ತಡ ಸಮಸ್ಯೆಯಿಂದ ಜೂನ್ 21 ರಂದು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಜೂನ್ 28 ರಂದು ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದ್ದರು.
11) ರೋಗಿ-14465: ಬೆಂಗಳೂರಿನ 73 ವರ್ಷದ ವೃದ್ಧ. ವಿಷಮ ಶೀತ ಜ್ವರ (ಐಎಲ್‍ಐ), ಕೆಮ್ಮಿನಿಂದ ಬಳಲುತ್ತಿದ್ದರು. ಜೂನ್ 22 ರಂದು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಿಸದೆ ಜೂನ್ 25 ರಂದು ಸಾವನ್ನಪ್ಪಿದ್ದರು.
12) ರೋಗಿ-17075: ದಕ್ಷಿಣ ಕನ್ನಡದ 52 ವರ್ಷದ ಪುರುಷ. ತೀವ್ರ ಉಸಿರಾಟದ ಸಮಸ್ಯೆ, ಕೆಮ್ಮು, ಮಧುಮೇಹದಿಂದ ಬಳಲುತ್ತಿದ್ದವರನ್ನು ಜೂನ್ 30 ರಂದು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಜುಲೈ 6 ರಂದು ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದ್ದರು.
13) ರೋಗಿ-18103: ದಾವಣಗೆರೆಯ 49 ವರ್ಷದ ಪುರುಷ. ತೀವ್ರ ಉಸಿರಾಟದ ಸಮಸ್ಯೆ, ಜ್ವರ, ಕೆಮ್ಮು, ಮಧುಮೇಹದಿಂದ ಬಳಲುತ್ತಿದ್ದವರನ್ನು ಜೂನ್ 30 ರಂದು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಜುಲೈ 4 ರಂದು ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದ್ದರು.
14) ರೋಗಿ-21497: ಬಳ್ಳಾರಿಯ 60 ವರ್ಷದ ವೃದ್ಧೆ. ಉಸಿರಾಟದ ಸಮಸ್ಯೆ, ರಕ್ತಹೀನತೆಯಿಂದ ಬಳಲುತ್ತಿದ್ದವನರನ್ನು ಜುಲೈ 2 ರಂದು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಜುಲೈ 2 ರಂದು ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದ್ದರು.
15) ರೋಗಿ-21581: ಮೈಸೂರಿನ 50 ವರ್ಷದ ಪುರುಷ. ಉಸಿರಾಟದ ಸಮಸ್ಯೆ, ಜ್ವರ ಮತ್ತು ಕೆಮ್ಮಿನಿಂದ ಬಳಲುತ್ತಿದ್ದರು. ಜುಲೈ 2 ರಂದು ಆಸ್ಪತ್ರೆಗೆ ದಾಖಲಾಗಿದ್ದ ಇವರು ಜುಲೈ 5 ರಂದು ಸಾವನ್ನಪ್ಪಿದ್ದರು.
16) ರೋಗಿ-23375: ಬೀದರ್ 64 ವರ್ಷದ ವೃದ್ಧ. ತೀವ್ರ ಉಸಿರಾಟದ ಸಮಸ್ಯೆಯಿಂದ ಜುಲೈ 3 ರಂದು ಆಸ್ಪತ್ರೆಗೆ ದಾಖಲಾಗಿದ್ದ ಇವರು ಜುಲೈ 5 ರಂದು ಸಾವನ್ನಪ್ಪಿದ್ದರು.
17) ರೋಗಿ-23577: ತುಮಕೂರಿನ 78 ವರ್ಷದ ವೃದ್ಧ. ತೀವ್ರ ಉಸಿರಾಟದ ಸಮಸ್ಯೆ, ನೆಗಡಿ, ಜ್ವರ, ಮಧುಮೇಹ, ಕೆಮ್ಮನಿಂದ ಬಳಲುತ್ತಿದ್ದವರನ್ನು ಜುಲೈ 4 ರಂದು ಆಸ್ಪತ್ರೆಗೆ ದಾಖಲಾಗಿತ್ತು. ಇವರು ಜುಲೈ 5 ರಂದು ಸಾವನ್ನಪ್ಪಿದ್ದರು.
18) ರೋಗಿ-23622: ಚಿಕ್ಕಬಳ್ಳಾಪುರದ 60 ವರ್ಷದ ವೃದ್ಧ. ತೀವ್ರ ಉಸಿರಾಟದ ಸಮಸ್ಯೆ, ಜ್ವರದಿಂದ ಬಳಲುತ್ತಿದ್ದವರನ್ನು ಜುಲೈ 4 ರಂದು ಆಸ್ಪತ್ರೆಗೆ ದಾಖಲಾಗಿದ್ದು, ಅಂದೇ ಸಾವನ್ನಪ್ಪಿದ್ದರು.
19) ರೋಗಿ-24617: ಬಾಗಲಕೋಟೆಯ 80 ವರ್ಷದ ವೃದ್ಧ. ಮಧುಮೇಹದ ಸಮಸ್ಯೆಯಿಂದ ಬಳಲುತ್ತಿದ್ದರು. ಸೋಂಕಿನ ಮೂಲವನ್ನು ಪತ್ತೆ ಮಾಡಲಾಗುತ್ತಿದೆ. ಜೂನ್ 30 ರಂದು ಸ್ವ-ನಿವಾಸದಲ್ಲೇ ಸಾವನ್ನಪ್ಪಿದ್ದರು.
20) ರೋಗಿ-24917: ಬೀದರ್ 90 ವರ್ಷದ ವೃದ್ಧೆ. ಜೂನ್ 28 ರಂದು ಸಾವನ್ನಪ್ಪಿದ ಬಳಿಕ ಆಸ್ಪತ್ರೆಗೆ ಕರೆತರಲಾಗಿತ್ತು. ಸೋಂಕಿನ ಮೂಲವನ್ನು ಪತ್ತೆ ಮಾಡಲಾಗುತ್ತಿದೆ.
21) ರೋಗಿ-24918: ಬೀದರ್ 75 ವರ್ಷದ ವೃದ್ಧ. ಜೂನ್ 29 ರಂದು ಸಾವನ್ನಪ್ಪಿದ ಬಳಿಕ ಆಸ್ಪತ್ರೆಗೆ ಕರೆತರಲಾಗಿತ್ತು. . ಸೋಂಕಿನ ಮೂಲವನ್ನು ಪತ್ತೆ ಮಾಡಲಾಗುತ್ತಿದೆ.
22) ರೋಗಿ-24921: ಬೀದರ್ 70 ವರ್ಷದ ವೃದ್ಧ. ಅಧಿಕ ರಕ್ತದೊತ್ತಡ, ಮಧುಮೇಹದಿಂದ ಬಳಲುತ್ತಿದ್ದವರನ್ನು ಜುಲೈ 2 ರಂದು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಂದೇ ಸಾವನ್ನಪ್ಪಿದ್ದರು. ತೆಲಂಗಾಣದ ಪ್ರಯಾಣ ಹಿನ್ನೆಲೆ ಹಿಂದಿದ್ದರು.
23) ರೋಗಿ-24920: ಬೀದರ್ 22 ವರ್ಷದ ಯುವಕ. ತೀವ್ರ ಉಸಿರಾಟದ ಸಮಸ್ಯೆ, ಹೊಟ್ಟೆ ನೋವಿನಿಂದ ಜೂನ್ 01 ರಂದು ಆಸ್ಪತ್ರೆ ದಾಖಲಾಗಿದ್ದರು. ಜೂನ್ 02 ರಂದು ಚಿಕಿತ್ಸೆ ಫಲಿಸದೆ ಸಾವನ್ನಪಿದ್ದರು.
24) ರೋಗಿ-24921: ಬೀದರ್ 65 ವರ್ಷದ ವೃದ್ಧೆ. ಅಧಿಕ ರಕ್ತದೊತ್ತಡ ಸಮಸ್ಯೆಯಿಂದ ಬಳಲುತ್ತಿದ್ದರು. ಜುಲೈ 2 ರಂದು ಸಾವಿನ ಬಳಿಕ ಆಸ್ಪತ್ರೆಗೆ ಕರೆತರಲಾಗಿತ್ತು.
25) ರೋಗಿ-24922: ಬೀದರ್ 65 ವರ್ಷದ ವೃದ್ಧೆ. ಎದೆ ನೋವು ಮತ್ತು ಮಧುಮೇಹ, ಅಧಿಕ ರಕ್ತದೊತ್ತಡ ಸಮಸ್ಯೆಯಿಂದ ಜುಲೈ 2 ರಂದು ಆಸ್ಪತ್ರೆ ಕರೆತರಲಾಗಿತ್ತು. ಜುಲೈ 3 ರಂದು ಸಾವನ್ನಪ್ಪಿದ್ದರು.