ಚಿಕ್ಕೋಡಿ: ಜಲಾಶಯದ ಬಳಿ ಫೋಟೋಶೂಟ್‍ಗೆ ಹೋಗಿದ್ದ ವಿದ್ಯಾರ್ಥಿ ಈಜಲು ಹೋಗಿ ಆಯತಪ್ಪಿ ನದಿಯಲ್ಲಿ ಬಿದ್ದು, ಮುಳಗಿ ಸಾವನ್ನಪ್ಪಿರುವ ಘಟನೆ ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಹಿಡಕಲ್ಲ ಜಲಾಶಯದ ಬಳಿ ನಡೆದಿದೆ.
ಜಿಹಾದ ಮಸೂದ್ ಶರೀಫ (20) ಮೃತ ಯುವಕ. ಹುಕ್ಕೇರಿ ತಾಲೂಕಿನ ಯಮಕನಮರಡಿ ನಿವಾಸಿಯಾಗಿದ್ದಾನೆ. ನೀಡಸೊಸಿ ಪಾಲಿಟೆಕ್ನಿಕ್ ಕಾಲೇಜ್‍ನಲ್ಲಿ ವ್ಯಾಸಂಗ ಮಾಡುತ್ತಿದ್ದನು.ಇಂದು ಘಟಪ್ರಭಾ ನದಿಯ ಹಿಡಕಲ್ಲ ಜಲಾಶಯದ ಬಳಿ ಗೆಳೆಯರೊಂದಿಗೆ ಫೋಟೋಶೂಟ್ ಮಾಡಲು ಹೋಗಿದ್ದ. ಈ ವೇಳೆ ಯುವಕ ನದಿಯಲ್ಲಿ ಈಜಲು ಹೋಗಿ ನದಿಗೆ ಬಿದ್ದು ಪ್ರಾಣ ಬಿಟ್ಟಿದ್ದಾನೆ ಎಂದು ಹೇಳಲಾಗುತ್ತಿದೆ.