2023ರ ರಾಜ್ಯ ವಿಧಾನಸಭಾ ಚುನಾವಣೆಗೆ ಸಿದ್ದರಾಮಯ್ಯ ಸಜ್ಜಾಗಿದ್ದಾರೆ. ಕಾಂಗ್ರೆಸ್ ಅಧಿಕಾರಕ್ಕೆ ತರೋ ದೃಷ್ಟಿಯಿಂದ ತಮ್ಮದೇ ಆದ ಸೂತ್ರವನ್ನೂ ಹೆಣೆಯೋದಕ್ಕೆ ಮುಂದಾಗಿದ್ದಾರೆ. ಇದರ ಭಾಗವಾಗಿ ಖುದ್ದು ಅಖಾಡಕ್ಕಿಳಿಯೋದಕ್ಕೆ ವಿಪಕ್ಷ ನಾಯಕ ಸಜ್ಜಾಗಿದ್ದು, ಹೈಕಮಾಂಡ್ ಮುಂದೆ ಬೇಡಿಕೆ ಮಂಡಿಸಲು ತಯಾರಿ ನಡೆಸಿದ್ದಾರೆ.
2023ರ ಚುನಾವಣೆಗೆ ಒಂದೇ ವರ್ಷ ಬಾಕಿ ಇದೆ. ಈಗಲೇ ರಾಜಕೀಯ ಪಕ್ಷಗಳ ತಂತ್ರ-ಪ್ರತಿತಂತ್ರಗಳು ಸದ್ದಿಲ್ಲದೇ ಶುರುವಾಗಿದೆ. ಅದರಲ್ಲೂ ಕಾಂಗ್ರೆಸ್ ಅಧಿಕಾರಕ್ಕೆ ತರೋ ದೃಷ್ಟಿಯಿಂದ ಸಿದ್ದರಾಮಯ್ಯ ಸಿದ್ಧವಾಗ್ತಿದ್ದಾರೆ. ನಾಯಕತ್ವ ಗೊಂದಲದ ನಡುವೆಯೇ ರಾಜ್ಯ ಪ್ರವಾಸಕ್ಕೆ ಅಣಿಯಾಗ್ತಿದ್ದಾರೆ. ಪಕ್ಷ ಅಧಿಕಾರಕ್ಕೆ ತರಲು ನಾನ್ ರೆಡಿ, ಆದ್ರೆ, ನಾಯಕತ್ವ ಗೊಂದಲ ಬಗೆಹರಿಸಿ ಅಂತ ವರಿಷ್ಠರ ಮುಂದೆ ಬೇಡಿಕೆ ಮಂಡಿಸಲೂ ವಿಪಕ್ಷ ನಾಯಕ ಸಿದ್ಧತೆ ನಡೆಸಿದ್ದಾರೆ.