Breaking News

ಸತ್ತೇ ಹೋದ ಅಂದವನು 7 ಗಂಟೆ ಬಳಿಕ ಎದ್ದು ಕೂತಿದ್ದ: ಇಲ್ಲಿದೆ ಎದೆ ಝಲ್ ಎನಿಸುವ ವಿಡಿಯೋ

Spread the love

ಕೆಲವೊಮ್ಮೆ ತುಂಬಾ ಅಪರೂಪವಾಗಿ ಸತ್ತಂತಹ ವ್ಯಕ್ತಿಗಳು(Dead Person) ಮತ್ತೆ ಜೀವಂತ(Alive)ವಾಗಿರುವ ಘಟನೆಗಳನ್ನು ನಾವು ಟಿವಿ(TV)ಯಲ್ಲಿ ನೋಡಿರುತ್ತೇವೆ ಅಥವಾ ದಿನಪತ್ರಿಕೆ(News Paper)ಗಳಲ್ಲಿ ರುತ್ತೇವೆ.

ಕೆಲವೊಂದು ಸಮಯದಲ್ಲಿ ಮೃತ ವ್ಯಕ್ತಿಯ ದೇಹವನ್ನು ಅಂತಿಮ ಸಂಸ್ಕಾರ(Last Rituals)ಕ್ಕೆಂದು ತೆಗೆದುಕೊಂಡು ಹೋದಾಗ ಅಲ್ಲಿ ಕೆಲವರಿಗೆ ಜೀವ ಮರಳಿ ಬಂದಿರುವಂತಹ ಘಟನೆಗಳು ನಡೆದಿವೆ. ಇಂತಹ ಘಟನೆಗಳು ಅಲ್ಲಿ ನೆರದ್ದಿದ್ದವರನ್ನು ಭಯಭೀತರನ್ನಾಗಿಸುವುದಲ್ಲದೆ, ಸತ್ತಂತಹ ವ್ಯಕ್ತಿ ಹೇಗೆ ಮತ್ತೆ ಜೀವಂತವಾಗಿದ್ದಾನೆ ಎಂದು ಆಶ್ಚರ್ಯವನ್ನು ಸಹ ಉಂಟು ಮಾಡಿರುತ್ತದೆ. ಇಲ್ಲಿಯೂ ಇಂತಹದ್ದೇ ಒಂದು ವಿಚಿತ್ರ ಘಟನೆಯೊಂದು ನಡೆದಿದ್ದು, 40 ವರ್ಷದ ವ್ಯಕ್ತಿಯು ಮೃತಪಟ್ಟಿದ್ದು ಅವನ ದೇಹವನ್ನು ಶವಾಗಾರದ ಫ್ರೀಜರ್‌(Freezer)ನಲ್ಲಿ ಇರಿಸಲಾಗಿತ್ತು. ಆದರೆ ಅಲ್ಲಿ ಇರಿಸಿದ 7 ಗಂಟೆಗಳ ನಂತರ ಆ ವ್ಯಕ್ತಿಯು ಜೀವಂತವಾಗಿದ್ದಾನೆ. ಈ ಸುದ್ದಿ ನಿಮಗೆ ನಂಬಲು ಅಸಾಧ್ಯವಾಗಬಹುದು. ಆದರೆ ಇದು ನಿಜವಾಗಿಯೂ ನಡೆದ ಘಟನೆಯಾಗಿದೆ.

ಮೃತದೇಹ ಪಡೆಯುವಾಗ ಎದ್ದು ಕೂತ ವ್ಯಕ್ತಿ!

ವರದಿಗಳ ಪ್ರಕಾರ, ಎಲೆಕ್ಟ್ರಿಷಿಯನ್ ಆಗಿ ಕೆಲಸ ಮಾಡುತ್ತಿದ್ದಂತಹ ಶ್ರೀಕೇಶ್ ಕುಮಾರ್ ಎಂಬುವವರಿಗೆ ವೇಗವಾಗಿ ಬರುತ್ತಿದ್ದ ಬೈಕೊಂದು ಡಿಕ್ಕಿ ಹೊಡೆದಿದ್ದು, ಅವರನ್ನು ಗುರುವಾರ ರಾತ್ರಿ ಜಿಲ್ಲಾ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಅಲ್ಲಿ ವೈದ್ಯರು ಅವರು ಸತ್ತಿದ್ದಾರೆ ಎಂದು ಘೋಷಿಸಿದ್ದರು. ಮರುದಿನ, ಆಸ್ಪತ್ರೆಯ ಸಿಬ್ಬಂದಿ ಆ ವ್ಯಕ್ತಿಯ ಶವವನ್ನು ಶವಗಾರದ ಫ್ರೀಜರ್‌ನಲ್ಲಿ ಇರಿಸಿದ್ದರು. ಆದರೆ ಆ ವಿಚಿತ್ರ ನಡೆದದ್ದೇ ಇಲ್ಲಿ ಎನ್ನಬಹುದು, ಸುಮಾರು 7 ಗಂಟೆಗಳ ನಂತರ, ಶವವನ್ನು ಗುರುತಿಸಿ ಶವ ಪರೀಕ್ಷೆಗೆ ಒಪ್ಪಿದ ನಂತರ ಕುಟುಂಬ ಸದಸ್ಯರು ಸಹಿ ಮಾಡಿದ ‘ಪಂಚನಾಮೆ’ ಅಥವಾ ದಾಖಲೆಯನ್ನು ಪೊಲೀಸರಿಗೆ ಸಲ್ಲಿಸಬೇಕಾದಾಗ, ಕುಮಾರ್ ಅತ್ತಿಗೆ ಮಧುಬಾಲಾ ಎಂಬುವವರು ಶ್ರೀಕೇಶ್ ಅವರು ದೇಹದಲ್ಲಿ ಕೊಂಚ ಚಲನೆ ತೋರಿಸುತ್ತಿರುವುದನ್ನು ಗಮನಿಸಿದರು.

https://twitter.com/i/status/1462359762746499073


Spread the love

About Laxminews 24x7

Check Also

ಸರ್ಕಾರ ಸಲ್ಲಿಸಿರುವ ಅರ್ಜಿ ವಿಲೇವಾರಿವರೆಗೂ ಸಿಎಟಿ ಆದೇಶ ಜಾರಿಗೆ ಒತ್ತಾಯಿಸದಂತೆ ವಿಕಾಸ್ ಕುಮಾರ್​ಗೆ ಸೂಚನೆ

Spread the loveಬೆಂಗಳೂರು: ಆರ್​​ಸಿಬಿ ವಿಜಯೋತ್ಸವದ ಸಂದರ್ಭದಲ್ಲಿ ನಡೆದ ಕಾಲ್ತುಳಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಕರ್ತವ್ಯಲೋಪ ಎಸಗಿದ್ದ ಆರೋಪದಡಿ ಕೆಲವು ಅಧಿಕಾರಿಗಳನ್ನು ಅಮಾನತು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ