Breaking News

ಮೂರನೇ ಮದುವೆಗೆ ಆಮಿರ್ ಖಾನ್ ರೆಡಿ, ಹುಡುಗಿ ಯಾರ್ ಗೊತ್ತಾ?

Spread the love

ಬಾಲಿವುಡ್​(Bollywood)ನಲ್ಲಿ ಖಾನ್(Khan)​ಗಳದ್ದೇ ಅಬ್ಬರ. ಅದು ಆಗಿನಿಂದಲೂ. ಶಾರುಖ್​ ಖಾನ್(Shah Rukh Khan)​, ಸಲ್ಮಾನ್​ ಖಾನ್(Salman Khan)​, ಆಮಿರ್​ ಖಾನ್(Aamir Khan)​ ಈ ಮೂರು ಖಾನ್​ಗಳೇ ಬಾಲಿವುಡ್(Bollywood)​ನ ಪಿಲ್ಲರ್(Pillar)​.

ಇವರಲ್ಲಿ ಸಲ್ಮಾನ್​ ಖಾನ್​ ಇನ್ನೂ ಬ್ಯಾಚುಲರ್​​.ಮದುವೆ ಸಹವಾಸವೇ ಬೇಡ ಅಂತ ಸುಮ್ಮನಿದ್ದಾರೆ. ಶಾರುಖ್​ ಖಾನ್​ ಮದುವೆಯಾಗಿ ಅನೋನ್ಯವಾಗಿದ್ದಾರೆ. ಇನ್ನೂ ಇತ್ರೀಚೆಗೆ ಆಮಿರ್​​ ಖಾನ್​ ತಮ್ಮ 2ನೇ ಪತ್ನಿಗೆ ವಿಚ್ಛೇದನ ನೀಡಿದ್ದರು. ಆಮಿರ್​ ಖಾನ ತಮ್ಮ ಸಿನಿಮಾ(Movie)ದಿಂದ ಎಷ್ಟು ಸುದ್ದಿಯಲ್ಲಿ ಇರುತ್ತಾರೋ, ಅಷ್ಟೇ ಅವರ ವೈವಾಹಿಕ ಜೀವನದಿಂದಲೂ ಸುದ್ದಿಯಲ್ಲಿದ್ದಾರೆ. ಕಳೆದ ಆಗಸ್ಟ್ ತಿಂಗಳಲ್ಲಿ ಆಮಿರ್ ಖಾನ್ ತಮ್ಮ ಎರಡನೇ ಪತ್ನಿ ಕಿರಣ್ ರಾವ್‌(Kiran Rao)ಗೆ ಡಿವೋರ್ಸ್(Divorce) ನೀಡಿದ್ದರು. ಇದು ಬಾಲಿವುಡ್​ನಲ್ಲಿ ಮಿ.ಪಫೆಕ್ಟ್​ ಎನಿಸಿಕೊಂಡಿದ್ದ ಆಮಿರ್​ ಖಾನ್​ ಏಕಾಏಕಿ ಯಾಕೆ ಹೀಗೆ ಮಾಡಿದರು ಎಂಬ ಪ್ರಶ್ನೆ ಮೂಡಿತ್ತು. ಆಮಿರ್ ಖಾನ್​ ಹಾಗೂ ಕಿರಣ್​ರಾವ್​ ಇಬ್ಬರು ಒಮ್ಮತದಿಂದ ವಿಚ್ಚೇದನ ಪಡೆದು ಬೇರೆಯಾಗಿದ್ದಾರು. ಇವಾಗ ಏನಪ್ಪ ಹೊಸ ಸುದ್ದಿ ಅಂದರೆ ಆಮಿರ್​ ಖಾನ್​ 3ನೇ ಮದುವೆ(Marriage)ಗೆ ಸಜ್ಜಾಗಿದ್ದಾರಂತೆ. ಅದು ಬಾಲಿವುಡ್​ನ ಫೇಮಸ್​ ನಟಿ(Famous Heroin)ಯನ್ನೇ ಮದುವೆಯಾಗಲಿದ್ದಾರೆ ಅನ್ನೊ ಟಾಕ್(Talk)​ ಬಾಲಿವುಡ್​ ಅಂಗಳದಲ್ಲಿ ಕೇಳಿಬಂದಿದೆ. ನಿಜಕ್ಕೂ ಮೂರನೇ ಮದುವೆ ಆಗುತ್ತಾರಾ ಆಮಿರ್​ ಖಾನ್​? ಯಾವ ನಟಿಯನ್ನು ಮದುವೆಯಾಗುತ್ತಿದ್ದಾರೆ ಗೊತ್ತಾ? ಈ ಎಲ್ಲ ಪ್ರಶ್ನೆಗಳಿಗೆ ಉತ್ತರ ಇಲ್ಲಿದೆ..

ಆಮಿರ್​ 3ನೇ ಮದುವೆ ಸದ್ದಿಲ್ಲದೆ ಸಜ್ಜು

ಕಳೆದ ಮೂರು ದಿನಗಳಿಂದ ಆಮಿರ್ ಖಾನ್​ ಹೆಸರು ಭಾರಿ ಸಂಚಲನ ಮೂಡಿಸಿದೆ. ಮದುವೆ ವಿಚಾರಕ್ಕೆ ಅಲ್ಲ. ಕೆಜಿಎಫ್​ 2 ಸಿನಿಮಾದ ಜೊತೆ ಆಮಿರ್​ ಖಾನ್​ ನಟನೆಯ ಲಾಲ್​ ಸಿಂಗ್​ ಚಡ್ಡ ಸಿನಿಮಾ ಬಿಡುಗಡೆ ಮಾಡೋದಾಗಿ ಹೇಳಿತ್ತು. ಆದರೆ ರಾಕಿ ಭಾಯ್​ ಅಬ್ಬರದ ನಡುವೆ ತಮ್ಮ ಬೆಳೆ ಬೇಯಲ್ಲ ಎಂದು ತಿಳಿದ ಲಾಲ್​ ಸಿಂಗ್​ ಚಡ್ಡ ತಮ್ಮ ಸಿನಿಮಾದ ಬಿಡುಗಡೆ ದಿನಾಂಕವನ್ನು ಮಂದೂಡಲಿದ್ದಾರೆ ಅನ್ನುವ ಮಾತು ಕೇಳಿ ಬರುತ್ತಿದೆ. ಈ ನಡುವೆ ಆಮಿರ್​ ಮತ್ತೊಂದು ಮದುವೆ ವಿಚಾರ ಸಖತ್​ ಸೌಂಡ್​ ಮಾಡುತ್ತಿದೆ.

ಇದನ್ನು : ಏ.14ರಂದು Yashಗೆ ಟಕ್ಕರ್​ ಕೊಡಲಿರುವ ​Aamir Khan

ಲಾಲ್​ಸಿಂಗ್​ ಚಡ್ಡಾ ರಿಲೀಸ್ ಆಗ್ತಿದ್ದಂತೆ ಮದುವೆ

ಬಹು ನಿರೀಕ್ಷಿತ ಸಿನಿಮಾ ಲಾಲ್ ಸಿಂಗ್ ಚಡ್ಡ ಬಿಡುಗಡೆಯಾಗುತ್ತಿದ್ದಂತೆ ಆಮಿರ್ ಖಾನ್ ಮೂರನೇ ಮದುವೆ ಆಗುತ್ತಾರೆ ಅನ್ನುವ ಮಾತು ಕೇಳಿಬರುತ್ತಿದೆ. ಬಾಲಿವುಡ್‌ನಲ್ಲಿ ಆಮಿರ್ ಮದುವೆ ಬಗ್ಗೆನೇ ಸಾಕಷ್ಟು ಚರ್ಚೆ ಆಗುತ್ತಿದ್ಯಂತೆ. ಅಲ್ಲದೆ ಸೋಶಿಯಲ್ ಮೀಡಿಯಾದಲ್ಲೂ 3ನೇ ಮದುವೆ ಬಗ್ಗೆನೇ ಚರ್ಚೆಯಾಗುತ್ತಿದೆ. ಸಿನಿಮಾ ಬಿಡುಗಡೆಗೂ ಮುನ್ನ 3ನೇ ಮದುವೆ ಆದರೆ, ಜನ ಸಿನಿಮಾ ನೋಡುವುದಿಲ್ಲವೆಂಬ ಭಯ ಕಾಡುತ್ತಿದೆಯಂತೆ. ಈ ಕಾರಣಕ್ಕೆ ಲಾಲ್ ಸಿಂಗ್ ಚಡ್ಡಾ ತೆರೆಕಂಡ ಬಳಿಕ ಮದುವೆ ಆಗಲು ನಿರ್ಧರಿಸಿದ್ದಾರೆಂಬ ಗುಲ್ಲೆದ್ದಿದೆ. ಆದರೆ ಆಮಿರ್​ ಖಾನ್ ಅಭಿಮಾನಿಗಳೇ ಕೆಜಿಎಫ್​ 2 ಸಿನಿಮಾ ಎದುರು ಸಿನಿಮಾ ಬಿಡುಗಡೆ ಮಾಡದಂತೆ ಮನವಿ ಮಾಡಿಕೊಂಡಿದ್ದಾರೆ.

ಇದನ್ನು : ಬಾಯ್​ಫ್ರೆಂಡ್​ಗೆ Tattoo ಹಾಕಿ ಟ್ರೋಲ್​ ಆಗಿದ್ದ ಅಮೀರ್ ಖಾನ್​ ಮಗಳು Ira Khan

ಆಮಿರ್ ಮದುವೆ ಆಗಲಿರೋ ನಟಿ ಯಾರು ಗೊತ್ತಾ?

ಆಮಿರ್ ಖಾನ್ 2ನೇ ಪತ್ನಿ ಕಿರಣ್ ರಾವ್‌ಗೆ ವಿಚ್ಛೇದನ ನೀಡಿದ ದಿನದಿಂದಲೂ ನಟಿ ಫಾತಿಮಾ ಸನಾ ಶೇಕ್ ವಿರುದ್ಧ ಟ್ರೋಲ್ ಮಾಡಲಾಗಿತ್ತು. ಆಮಿರ್​ ಖಾನ್​ ಜೊತೆ ದಂಗಲ್​ ಸಿನಿಮಾದಲ್ಲಿ ಮಗಳಾಗಿ ಫಾತಿಮಾ ಸನಾ ಸೇಕ್​ ಕಾಣಿಸಿಕೊಂಡಿದ್ದರು. ಇದಾದ ಬಳಿಕ ಥಗ್ಸ್ ಆಫ್ ಹಿಂದೂಸ್ತಾನ್ ಸಿನಿಮಾದಲ್ಲಿ ಇಬ್ಬರು ಒಟ್ಟಿಗೆ ನಟಿಸಿದ್ದರು. ಈಕೆಯೊಂದಿಗೆ ಆಮಿರ್​ ಖಾನ್​ ಹೆಸರು ಕೇಳಿಬಂದಿದ್ದಕ್ಕೆ ಕಿರಣ್​ ರಾವ್​ ವಿಚ್ಚೇದನ ನೀಡಿದ್ದರು ಎಂಬ ಮಾತುಗಳು ಕೇಳಿಬಂದಿದೆ. ಇದೀಗ ಆಮಿರ್​ ಹಾಗೂ ಫಾತಿಮಾ ಮದುವೆಯಾಗಲು ಸಿದ್ಧರಾಗಿದ್ದಾರೆ. ಕೆಲವೇ ದಿನಗಳಲ್ಲಿ ವಿವಾಹವಾಗಲಿದ್ದಾರೆ ಅನ್ನುವ ಸುದ್ಧಿ ಸಖತ್​ ವೈರಲ್​ ಆಗುತ್ತಿದೆ.


Spread the love

About Laxminews 24x7

Check Also

ಅಂಗನವಾಡಿ ನೇಮಕಾತಿ ಇನ್ನಷ್ಟು ಸರಳ ಪಾರದರ್ಶಕವಾಗಲು ಕ್ರಮಕೈಗೊಳ್ಳಿ: ಅಧಿಕಾರಿಗಳಿಗೆ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಸೂಚನೆ

Spread the love ಅಂಗನವಾಡಿ ನೇಮಕಾತಿ ಇನ್ನಷ್ಟು ಸರಳ ಪಾರದರ್ಶಕವಾಗಲು ಕ್ರಮಕೈಗೊಳ್ಳಿ: ಅಧಿಕಾರಿಗಳಿಗೆ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಸೂಚನೆ ಕಲಬುರಗಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ