Breaking News

ಕಛೇರಿಯ ಅನುಮತಿ ಪತ್ರ ಇಲ್ಲದೇ ಯಾವುದೇ ರೀತಿಯ ಪ್ರತಿಭಟನೆ ಮತ್ತು ಮನವಿ ಸಲ್ಲಿಸಲು ಅವಕಾಶ ಇರುವುದಿಲ್ಲ.

Spread the love

ಡಿಸೆಂಬರ್ 13ರಿಂದ 24ರ ವರೆಗೆ ಬೆಳಗಾವಿಯಲ್ಲಿ ನಡೆಯಲಿರುವ ಚಳಿಗಾಲದ ವಿಧಾನ ಮಂಡಲ ಅಧಿವೇಶನ ಕಾಲಕ್ಕೆ ಪ್ರತಿಭಟನೆ ಕೈಗೊಳ್ಳಲು ಹಾಗೂ ಮನವಿಯನ್ನು ಸಲ್ಲಿಸುವವರು ಮುಂಚಿತವಾಗಿಯೇ ಬೆಳಗಾವಿ ಪೊಲೀಸ್ ಕಮೀಷನರ ಕಛೇರಿಯಲ್ಲಿ, ಈ ಕೆಳಗೆ ನಮೂದಿಸಿದ ವಿಳಾಸಕ್ಕೆ ಸಂಪರ್ಕಿಸಿ ತಮ್ಮ ಅರ್ಜಿಯನ್ನು ನೀಡಿ ಪೂರ್ವಾನುಮತಿಯನ್ನು ಪಡೆದುಕೊಳ್ಳುವಂತೆ ಸಾರ್ವಜನಿಕರಲ್ಲಿ ತಿಳಿಸಲಾಗಿದೆ.

ಮೊದಲು ಬಂದವರಿಗೆ ಪ್ರಾಶಸ್ತ್ಯ ನೀಡಲಾಗುವುದು. (ಅರ್ಜಿ ಸಲ್ಲಿಸುವವರು ಸಂಘಟನೆಯ ಅಧ್ಯಕ್ಷರು/ಮುಖ್ಯಸ್ಥರ ಪೂರ್ಣ ಹೆಸರು, ವಿಳಾಸ, ಮೋಬೈಲ್ ಸಂಖ್ಯೆ ಮತ್ತು ಇ-ಮೇಲ್ ವಿಳಾಸವನ್ನು ಕಡ್ಡಾಯವಾಗಿ ನಮೂದಿಸುವುದು.) ಪ್ರತಿಭಟನೆ ನಡೆಸಲು ಹಾಗೂ ಮನವಿ ಸಲ್ಲಿಸುವವರಿಗೆ ಸುವರ್ಣ ಸೌಧದ ಪಕ್ಕದಲ್ಲಿರುವ ಸುವರ್ಣ ಗಾರ್ಡನ್ ಪ್ರತಿಭಟನಾ ಸ್ಥಳ ಹಾಗೂ ನಿಗಧಿಪಡಿಸಿದ ಟೆಂಟ್‌ಗಳಲ್ಲಿ ಸ್ಥಳವಕಾಶ ನೀಡಿ, ದಿನಾಂಕವನ್ನು ಪೊಲೀಸ್ ಆಯುಕ್ತರು, ಬೆಳಗಾವಿ ನಗರ ಕಛೇರಿಯಿಂದ ನಿಗಧಿಪಡಿಸಲಾಗುವುದು.

ಈ ಕಛೇರಿಯ ಅನುಮತಿ ಪತ್ರ ಇಲ್ಲದೇ ಯಾವುದೇ ರೀತಿಯ ಪ್ರತಿಭಟನೆ ಮತ್ತು ಮನವಿ ಸಲ್ಲಿಸಲು ಅವಕಾಶ ಇರುವುದಿಲ್ಲ. ಇದನ್ನು ಹೊರತುಪಡಿಸಿ ಧರಣಿ /ಉಪವಾಸ ಸತ್ಯಾಗೃಹ/ ರ‍್ಯಾಲಿ/ ಇತ್ಯಾದಿಗಳಿಗೆ ಅವಕಾಶ ಇರುವುದಿಲ್ಲವೆಂದು ಈ ಮೂಲಕ ತಿಳಿಸಲಾಗಿದೆ.

ಸಂಪರ್ಕಿಸ ಬೇಕಾದ ವಿಳಾಸ ಮತ್ತು ಫೋನ್ ನಂಬರ್: ಸಹಾಯಕ ಪೊಲೀಸ್ ಆಯುಕ್ತರು, ಅಪರಾಧ, ಬೆಳಗಾವಿ ನಗರ
ದೂ. ಸಂ. 0831-2471577 & ಮೋಬೈಲ್ ಸಂಖ್ಯೆ-9480804109

ಪೊಲೀಸ್ ಇನ್ಸಪೆಕ್ಟರ್, ಸಿಸಿಆರ್‌ಬಿ ವಿಭಾಗ, ಬೆಳಗಾವಿ ನಗರಮೋಬೈಲ್ ಸಂಖ್ಯೆ-9448185837

ಪೊಲೀಸ್ ಕಂಟ್ರೋಲ್ ರೂಂ. ಬೆಳಗಾವಿ ನಗರ ದೂ. ಸಂ. 0831-2405233, 2452131

ಪೊಲೀಸ್ ಆಯುಕ್ತರು, ಬೆಳಗಾವಿ ನಗರ ಈ ವಿಳಾಸ ಸಂಪರ್ಕಿಸಲು ಕೋರಲಾಗಿದೆ.


Spread the love

About Laxminews 24x7

Check Also

ಬೆಳಗಾವಿಯಲ್ಲಿ ಭಾರಿ ಮಳೆಗೆ ಮನೆ ಕುಸಿತ

Spread the love ಬೆಳಗಾವಿಯಲ್ಲಿ ಭಾರಿ ಮಳೆಗೆ ಮನೆ ಕುಸಿತ ಕಳೆದ ಮೂರ್ನಾಲ್ಕು ದಿನಗಳಿಂದ ಸುರಿಯುತ್ತಿರುವ ಮಳೆಯಿಂದ ಬೆಳಗಾವಿಯಲ್ಲಿ ಒಂದು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ