ಯಾದಗಿರಿ(ನ.21): ನಿದ್ದೆ ಮಾತ್ರೆ ನೀಡಿ ಹೆಂಡತಿಯೇ ಗಂಡನನ್ನು ಕೊಲೆ ಮಾಡಲು ಯತ್ನಿಸಿದ ಪ್ರಕರಣ ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ಹೊವಿನಹಳ್ಳಿಯಲ್ಲಿ ನಡೆದಿದೆ. ಪಾಪಿ ಪತ್ನಿ ತನ್ನ ಅಕ್ರಮ ಸಂಬಂಧ ಮುಚ್ಚಿ ಹಾಕಲು ಪತಿಯನ್ನು ಕೊಲೆ ಮಾಡಲು ಯತ್ನಿಸಿದ್ದಾಳೆ ಎಂದು ತಿಳಿದು ಬಂದಿದೆ.
ಚಂದ್ರಕಲಾ ತನ್ನ ಪ್ರಿಯತಮ ಬಸನಗೌಡನ ಜೊತೆ ಸೇರಿ ತನ್ನ ಪತಿ ವಿಶ್ವನಾಥರಡಿಯನ್ನು ಕೊಲೆ ಮಾಡಲು ಯತ್ನಿಸಿದ ಆರೋಪಿ. ಚಂದ್ರಕಲಾ ತನ್ನ ಸಹೋದರಿಯ ಪತಿಯೊಂದಿಗೆ ಅನೈತಿಕ ಸಂಬಂಧ ಹೊಂದಿದ್ದಳು. ನೀರಿನಲ್ಲಿ ನಿದ್ದೆ ಮಾತ್ರೆ ಪುಡಿ ಮಾಡಿ ಪತಿಗೆ ನೀಡಿದ್ದಾಳೆ ನಂತರ ನಿದ್ದೆ ಮಾತ್ರೆ ಸೇವಿಸಿ ಗಂಡ ಘಾಡ ನಿದ್ರೆಗೆ ಜಾರಿದ ಸಮಯದಲ್ಲಿ ಕತ್ತು ಹಿಸುಕಿ ಕೊಲೆ ಮಾಡಲು ಯತ್ನಿಸಿದ್ದಾರೆ.
ಕತ್ತು ಹಿಸುಕಿದಾಗ ಎಚ್ಚರಗೊಂಡ ಪತಿ ಮನೆಯಿಂದ ಪರಾರಿಯಾಗಿದ್ದಾನೆ. ಪರಾರಿಯಾಗುವ ಮುನ್ನ ಪತ್ನಿಯ ಪ್ರಿಯಕರನಿಗೆ ಥಳಿಸಿದ್ದಾರೆ ಎಂದು ತಿಳಿದು ಬಂದಿದೆ.
ದೇವರ ಪ್ರಸಾದ ಎಂದು ನಂಬಿಸಿ ಗಂಡನಿಗೆ ನಿದ್ದೆ ಮಾತ್ರೆ ಪುಡಿ ಮಾಡಿ ಪ್ರಸಾದ ನೀಡಿದ್ದಾರೆ. ಚಂದ್ರಕಲಾ ಪ್ರಿಯತಮ ಬಸನಗೌಡ ಸೇರಿ ನಡೆಸಿದ ಕೊಲೆ ಪ್ರಯತ್ನದ ಪ್ರಕರಣಕ್ಕೆ ಹೊಸ ಟ್ವಿಸ್ಟ್ ಸಿಕ್ಕಿದ್ದು ಆರೋಪಿ ಚಂದ್ರಕಲಾ ಹಾಗೂ ಬಸನಗೌಡನನ್ನು ಪೊಲೀಸರು ಬಂಧಿಸಿದ್ದಾರೆ. ಈ ಕುರಿತು ಕೆಂಭಾವಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇವರಿಬ್ಬ ಸ್ಕೆಚ್ ನ ಆಡಿಯೋ ಕೂಡ ಸಿಕ್ಕಿದೆ ಎಂದು ಹೇಳಲಾಗುತ್ತಿದ್ದು ಪ್ರಕರಣಕ್ಕೆ ರೋಚಕ ತಿರುವು ಸಿಕ್ಕಿದೆ.
Laxmi News 24×7