ರಾಜ್ಯ ಸರ್ಕಾರವು ಜನತೆಗೆ ಮತ್ತೊಂದು ಭರ್ಜರಿ ಸಿಹಿಸುದ್ದಿ ನೀಡಿದ್ದು, ನಾಗರಿಕರ ಮನೆ ಬಾಗಿಲಿಗೇ ಸರ್ಕಾರದ ಸೇವೆಗಳಿಗೆ ಇಂದು ಸಿಎಂ ಬಸವರಾಜ ಬೊಮ್ಮಾಯಿ ಅವರು ಚಾಲನೆ ನೀಡಲಿದ್ದಾರೆ.
ಇಂದು ಬೆಂಗಳೂರು ಮಹಾನಗರದ 27 ವಿಧಾನಸಭಾ ಕ್ಷೇತ್ರಗಳ 198 ವಾರ್ಡ್ ಗಳಲ್ಲಿ ಜನಸೇವಕ ಯೋಜನೆಗೆ ಇಂದು ಬೆಳಗ್ಗೆ 11 ಗಂಟೆಗೆ ಸಿಎಂ ಬಸವರಾಜ ಬೊಮ್ಮಾಯಿ ಅವರು ಚಾಲನೆ ನೀಡಲಿದ್ದಾರೆ.
ಜನಸೇವಕ ಯೋಜನೆಯಲ್ಲಿ ಸರ್ಕಾರದ ಯಾವುದೇ ಯೋಜನೆಗಳ ಬಗ್ಗೆ ಕುಂದುಕೊರತೆ ದಾಖಲೆ, ವೆಬ್ ಪೋರ್ಟಲ್/ಮೊಬೈಲ್ ಆಯಪ್. ಸಹಾಯವಾಣಿ 1902 ಮುಖಾಂತರ ಕುಂದುಕೊರತೆ ದಾಖಲಿಸಲು ಅವಕಾಶ ನೀಡಲಾಗಿದೆ.
ಜನಸೇವಕ ಯೋಜನೆ ಲಾಭಗಳು
ಸರ್ಕಾರಿ ಕಚೇರಿಗೆ ಅನಗತ್ಯವಾಗಿ ತಿರುಗಾಡುವ ಅವಶ್ಯಕತೆ ಇಲ್ಲ
ಸೇವೆಗಳನ್ನು ಪಡೆಯಲು ಸರ್ಕಾರಿ ಕಚೇರಿಗಳಿಗೆ ಭೇಟಿ ನೀಡುವ ಅಗತ್ಯವಿಲ್ಲ
ಹಿರಿಯ ನಾಗರಿಕರುಉ/ ವಿಶೇಷ ಚೇತನರಿಗೆ ಸರ್ಕಾರದಿಂದ ಸೇವೆ ಪಡೆಯಲು ಮತ್ತಷ್ಟು ಸುಲಭ
ಲಭ್ಯವಿರುವ ಸೇವೆಗಳು
ಆಧಾರ್ ಕಾರ್ಡ್
ಆರೋಗ್ಯ ಕಾರ್ಡ್
ಕಾರ್ಮಿಕ ಇಲಾಖೆ
ಎಪಿಎಲ್ ಪಡಿತರ ಕಾರ್ಡ್
ಹಿರಿಯ ನಾಗರಿಕರ ಕಾರ್ಡ್
ಬಿಬಿಎಂಪಿ ಖಾತಾ ಸೇವೆಗಳು
ಪೊಲೀಸ್ ಪರಿಶೀಲನಾ ಪ್ರಮಾಣ ಪತ್ರ
ವೃದ್ಯಾಪ್ಯ ವೇತನ
ವಿಧವಾ ವೇತನ
ಆದಾಯ/ಜಾತಿ ಪ್ರಮಾಣ ಪತ್ರ ಸೇರಿದಂತೆ 50 ಕ್ಕೂ ಹೆಚ್ಚು ಸೇವೆಗಳು ಇರಲಿವೆ.