ಬೆಂಗಳೂರು: ಕೆಜಿ ಹಳ್ಳಿ ಮತ್ತು ಡಿಜೆ ಹಳ್ಳಿ ಗಲಭೆಗೆ ಸಂಬಂಧಿಸಿದಂತೆ ಪೊಲೀಸರು ಇಬ್ಬರು ಕಾಂಗ್ರೆಸ್ ಕಾರ್ಪೋರೇಟರ್ ಗಳಿಗೆ ನೋಟಿಸ್ ನೀಡಿದ್ದಾರೆ. ಮಾಜಿ ಮೇಯರ್ ಸಂಪತ್‍ರಾಜ್ ಮತ್ತು ಪುಲಕೇಶಿನಗರ ಕಾರ್ಪೋರೇಟರ್ ಅಬ್ದುಲ್ ರಕೀಬ್ ಝಾಕೀರ್ ವಿಚಾರಣೆಗೆ ಹಾಜರಾಗುವಂತೆ ಸೂಚಿಸಲಾಗಿದೆ.ಶಾಸಕ ಅಖಂಡ ಶ್ರೀನಿವಾಸ್‍ಮೂರ್ತಿ ಮನೆ ಮೇಲಿನ ದಾಳಿ, ಡಿ ಜೆ ಹಳ್ಳಿ, ಕೆಜಿಹಳ್ಳಿ ಮತ್ತು ಕಾವಲ್‍ಬೈರಸಂದ್ರದಲ್ಲಿ ನಡೆದಿದ್ದ ದಳ್ಳುರಿ ಹಿಂದೆ ರಾಜಕೀಯ ದ್ವೇಷದ ಕಾರಣವಿದೆ ಎಂಬ ಕಾರಣಕ್ಕಾಗಿ ಇಬ್ಬರು ಕಾಂಗ್ರೆಸ್ ಪಾಲಿಕೆ ಸದಸ್ಯರನ್ನ ವಿಚಾರಣೆಗೆ ಕರೆಯಲಾಗಿದೆ. ಗಲಭೆ ಸಂಬಂಧ ಸಂಪತ್‍ರಾಜ್ ಆಪ್ತ ಅರುಣ್ ಅವರನ್ನು ಸಿಸಿಬಿ ಪೊಲೀಸರು ವಶಕ್ಕೆ ಪಡೆದಿದ್ದಾರೆ.
https://www.facebook.com/105350550949710/videos/1603268693183822/?sfnsn=wiwspmo&extid=61M2w0rsAgl3cU6X&d=n&vh=e
ಅರುಣ್ ಬಳಿ ಇದ್ದ ಮೊಬೈಲ್‍ನ್ನು ಸಂಪತ್‍ರಾಜ್ ಬಳಸುತ್ತಿದ್ದರು ಮತ್ತು ಆ ಮೊಬೈಲ್‍ನಲ್ಲಿ ಗಲಭೆಗೆ ಸಂಬಂಧಿಸಿದ ಮಹತ್ವದ ಸಾಕ್ಷ್ಯಗಳಿರಬಹುದು ಎಂಬ ಶಂಕೆಯಿಂದ ಖಾಕಿಗಳು ವಶಕ್ಕೆ ಪಡೆದಿದ್ದಾರೆ. ಮೊಬೈಲ್‍ನಲ್ಲಿರುವ ಮಾಹಿತಿಗಳನ್ನು ಪೊಲೀಸರು ಕಲೆ ಹಾಕಿದ್ದು ಅದರಲ್ಲಿನ ಸಾಕ್ಷ್ಯಗಳನ್ನ ಆಧರಿಸಿ ಕಾರ್ಪೋರೇಟರ್ ಗಳ ವಿಚಾರಣೆ ನಡೆಸಲಿದ್ದಾರೆಅವಹೇಳನಕಾರಿ ಪೋಸ್ಟ್ ಹಾಕಿದ್ದ ನವೀನ್ ವಿರುದ್ಧ ದೂರು ನೀಡಿದ್ದ ಫಿದೋಸ್ ಪಾಷಾ ಅನ್ನೋರ ಸ್ಕೂಟರ್‍ಗೂ ಡಿಜೆ ಹಳ್ಳಿ ಠಾಣೆ ಎದುರು ಬೆಂಕಿ ಹಚ್ಚಲಾಗಿತ್ತು. ದಂಗೆ ಸಂಬಂಧ ಮಧ್ಯರಾತ್ರಿ ಮತ್ತೆ 30 ಮಂದಿಯನ್ನು ಡಿಜೆ ಹಳ್ಳಿ ಮತ್ತು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಇದರೊಂದಿಗೆ ಗಲಭೆಯಲ್ಲಿ ಬಂಧಿತರಾದವರ ಸಂಖ್ಯೆ 380ಕ್ಕೆ ಏರಿಕೆ ಆಗಿದೆ