ಬೆಂಗಳೂರು: ಹಳ್ಳಿಗಳಲ್ಲಿ ಕಾಡು ಪ್ರಾಣಿಗಳ ಹಾವಳಿ ವಿಚಾರಕ್ಕೆ ಸಂಬಂಧಿಸಿ ವಿಧಾನಸಭೆ ಕಲಾಪದಲ್ಲಿ ಜೆಡಿಎಸ್ ಸದಸ್ಯ ಶಿವಲಿಂಗೇಗೌಡ, ರಾಜ್ಯ ಸರ್ಕಾರವನ್ನ ಲೇವಡಿ ಮಾಡಿದರು. ನಮ್ಮಲ್ಲಿ ಚಿರತೆಯನ್ನೇ ಕೊಂದು ಒಬ್ಬ ಹೀರೋ ಆಗಿದ್ದಾರೆ. ಕಾಡು ಪ್ರಾಣಿಗಳನ್ನ ನೀವು ಸರಿಯಾಗಿ ಸಾಕ್ತಿಲ್ಲ. ಅದಕ್ಕೆ ಅವುಗಳು ಊರಿಗೆ ಬರ್ತಿವೆ. ಇದರಿಂದ ಸಾಕು ಪ್ರಾಣಿಗಳು ಉಳಿಯಲ್ಲ. ಕಾಡು ಪ್ರಾಣಿಗಳಿಗೆ, ಆಹಾರ, ನೀರು ಒದಗಿಸಿ ಎಂದು ಆಗ್ರಹಿಸಿದರು.
ಶಿವಲಿಂಗೇಗೌಡರ ಪ್ರಶ್ನೆಗೆ ಅರಣ್ಯ ಸಚಿವ ಉಮೇಶ್ ಕತ್ತಿ ಉತ್ತರಿಸಿ, ಹಾಸನ ಜಿಲ್ಲೆಯಲ್ಲಿ ಚಿರತೆ, ಹುಲಿ ಎಲ್ಲಾ ಪ್ರಾಣಿಗಳಿವೆ. ಹಾಸನ ಜಿಲ್ಲೆಗೆ ನಾನೇ ಹೋಗ್ತೇನೆ. ಅರಣ್ಯಾಧಿಕಾರಿಗಳ ಜೊತೆ ಸಭೆ ನಡೆಸ್ತೇನೆ. ಪರಿಹಾರ ಕಾರ್ಯಕ್ರಮಗಳನ್ನ ತೆಗೆದುಕೊಳ್ತೇನೆ. 3 ವರ್ಷಗಳಿಂದ ಯಾವುದೇ ಪ್ರಾಣ ಹಾನಿಯಾಗಿಲ್ಲ. ಸಾಕು ಪ್ರಾಣಿಗಳ ಮೇಲೆ ಹಾವಳಿಯಾಗಿದೆ. ಇದನ್ನ ತಡೆಯುವ ಕೆಲಸ ಮಾಡ್ತೇವೆ ಎಂದರು.