Breaking News

ಅತ್ಯಾಚಾರಿಗಳ ಜನನಾಂಗ ಕಟ್ ಮಾಡುವಂತೆಕೂಡಲ ಸಂಗಮ ಧರ್ಮಪೀಠದ ಶ್ರೀ ಬಸವ ಪ್ರಕಾಶ ಸ್ವಾಮೀಜಿ ಆಗ್ರಹ

Spread the love

ಧಾರವಾಡ: ಅತ್ಯಾಚಾರಿಗಳ ಜನನಾಂಗ ಕಟ್ ಮಾಡುವಂತೆ ಬಾಗಲಕೋಟೆಯ ಕೂಡಲ ಸಂಗಮ ಧರ್ಮಪೀಠದ ಶ್ರೀ ಬಸವ ಪ್ರಕಾಶ ಸ್ವಾಮೀಜಿ ಆಗ್ರಹಿಸಿದ್ದಾರೆ.

ಮಾಗಡಿ ತಾಲೂಕಿನ ಅತ್ಯಾಚಾರ ಪ್ರಕರಣ ನಡೆದ ವಿಚಾರವಾಗಿ ಧಾರವಾಡದಲ್ಲಿ ಮಾತನಾಡುವ ವೇಳೆ ಅತ್ಯಾಚಾರಿಗಳ ವಿರುದ್ಧ ಕಿಡಿಕಾರಿದ ಅವರು, ಪೊಲೀಸರು ಬಂಧಿಸೋದು, ಜಾಮೀನು ಕೊಡವುದು ಆಗಬಾರದು. ಅತ್ಯಾಚಾರಿಗಳ ಜನನಾಂಗ ಕಟ್ ಮಾಡುವ ಕಾನೂನು ಬರಬೇಕು ಎಂದರು

ಈ ರೀತಿ ಮಾಡಿದರೆ ಮಾತ್ರ ಭಾರತದಲ್ಲಿ ಅತ್ಯಾಚಾರ ಕಡಿಮೆ ಆಗುತ್ತವೆ ಎಂದ ಅವರು, ಹೆಣ್ಣು ಮಕ್ಕಳು ಉಡುಗೆ ತೊಡುಗೆ ಬಗ್ಗೆಯೂ ಕಾಳಜಿ ವಹಿಸಬೇಕು. ರಾಣಿ ಚನ್ನಮ್ಮ, ಬೆಳವಡಿ ಮಲ್ಲಮ್ಮ ತಲೆ ಮೇಲೆ ಸೆರಗು ಹಾಕಿಕೊಂಡು ಯುದ್ಧ ಮಾಡಿದ್ದಾರೆ. ಆದರೆ ನಮ್ಮ ಯುವತಿಯರು ಹೊಸ ವರ್ಷ ಬಂದರೆ ಎಂಜಿ, ಬ್ರಿಗೆಡ್ ರೋಡ್‍ನಲ್ಲಿ ಇರುತ್ತಾರೆ. ತುಂಡು ಬಟ್ಟೆ ಹಾಕಿಕೊಂಡು ಕುಣಿಯುತ್ತಾರೆ. ಇದರಿಂದ ಪುರುಷರ ಮನುಷ್ಯ ಪ್ರಚೋದನೆಗೊಳಗಾಗಿ ಕೆಲ ಸಂದರ್ಭಗಳಲ್ಲಿ ಅತ್ಯಾಚಾರ ಆಗುತ್ತಿವೆ ಎಂದು ಹೇಳಿದರು.

ಕೆಲವೊಂದು ಸಂದರ್ಭಗಳಲ್ಲಿ ಮಾತ್ರ ಇದರಿಂದ ಅತ್ಯಾಚಾರ ಆಗುತ್ತಿವೆ ಎಂದ ಅವರು, ಸ್ತ್ರೀಯರಿಗೆ ಮೊದಲು ತಾವು ಹೇಗೆ ಇರಬೇಕು ಅನ್ನೋದು ಗೊತ್ತಿರಬೇಕಲ್ವ. ಉಡುಗೆ, ತೊಡುಗೆಯಲ್ಲಿ ಎಚ್ಚೆತ್ತುಕೊಳ್ಳಬೇಕಲ್ಲ ಎಂದು ಪ್ರಶ್ನೆ ಮಾಡಿದರು.


Spread the love

About Laxminews 24x7

Check Also

ಧಾರವಾಡ ನೆಹರು ನಗರದ ಕೊಳಚೆ ಪ್ರದೇಶದ 121 ಕುಟುಂಬಗಳಿಗೆ ಹಕ್ಕುಪತ್ರ ವಿತರಣೆ.. ಹಕ್ಕುಪತ್ರ ಫಲಾನುಭವಿಗಳಿಗೆ ಹಸ್ತಾಂತರಿಸಿದ ವಿಪಕ್ಷ ಉಪನಾಯಕ ಬೆಲ್ಲದ.

Spread the love ಧಾರವಾಡ ನೆಹರು ನಗರದ ಕೊಳಚೆ ಪ್ರದೇಶದ 121 ಕುಟುಂಬಗಳಿಗೆ ಹಕ್ಕುಪತ್ರ ವಿತರಣೆ.. ಹಕ್ಕುಪತ್ರ ಫಲಾನುಭವಿಗಳಿಗೆ ಹಸ್ತಾಂತರಿಸಿದ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ