ಬೆಂಗಳೂರು: ನಟ ಧ್ರುವ ಸರ್ಜಾರ ಡೈಲಾಗ್ ಮೆಮೊರಿ ಪವರ್‌ಗೊಂದು ಸಲಾಂ ಎಂದು ನಟಿ ಹರಿಪ್ರಿಯಾ ಅವರು ಹೇಳಿದ್ದಾರೆ.
ಲಾಕ್‍ಡೌನ್‍ನಿಂದ ಸಿನಿಮಾ ಶೂಟಿಂಗ್ ಇಲ್ಲದೇ ಮನೆಯಲ್ಲೇ ಕುಳಿತಿರುವ ಹರಿಪ್ರಿಯಾ ಅವರು, ತಮ್ಮ ಬ್ಲಾಗ್‍ನಲ್ಲಿ ಕಥೆಗಳನ್ನು ಅವರ ಅನುಭವಗಳನ್ನು ಬರೆಯುತ್ತಿರುತ್ತಾರೆ. ಹೀಗೆ ಹರಿಪ್ರಿಯಾ ತಮ್ಮ ಬ್ಲಾಗ್‍ನಲ್ಲಿ ನಟ ಧ್ರುವ ಸರ್ಜಾ ಅವರ ಬಗ್ಗೆ ಬರೆದಿದ್ದು, ಧ್ರುವ ಸಿಂಪಲ್ ಹುಡುಗ ಎಂದು ಹಾಡಿಹೊಗಳಿದ್ದಾರೆ.
ಜೊತೆಗೆ ಲಾಕ್‍ಡೌನ್ ನಡುವೆ ಧ್ರುವ ಸರ್ಜಾಗೆ ಕರೆ ಮಾಡಿ ಮಾತನಾಡಿರುವ ಹರಿಪ್ರಿಯಾ, ಆ ಸಂಭಾಷಣೆಯನ್ನು ತಮ್ಮ ಬ್ಲಾಗ್‍ನಲ್ಲಿ ಬರೆದುಕೊಂಡಿದ್ದಾರೆ. ನಾನು ನನ್ನ ಫೋನಿಗೆ ಯಾವುದೇ ಅಂಜನೇಯನ ಫೋಟೋ ಬಂದ್ರೆ ಅದನ್ನು ಧ್ರುವಗೆ ಕಳುಹಿಸುತ್ತೇನೆ. ಹಾಗೇ ಇತ್ತೀಚೆಗೆ ಧ್ರುವಗೆ ಒಂದು ಅಂಜನೇಯನ ಫೋಟೋ ಕಳುಹಿಸಿದೆ. ಆಗ ಅವರು ಥ್ಯಾಂಕ್ಸ್ ರೀ ಎಂದು ರಿಪ್ಲೆ ಮಾಡಿದರು. ಅವರು ರೀ ಎಂದು ರೇಗಿಸುತ್ತಾರೆ ಎಂದು ಹರಿಪ್ರಿಯಾ ಹೇಳಿದ್ದಾರೆ.
ಧ್ರುವ ರೀ ಎಂದು ಯಾಕೆ ರೇಗಿಸುತ್ತಾರೆ ಎಂದು ಹೇಳಿರುವ ಹರಿಪ್ರಿಯಾ, ಒಂದು ದಿನ ಶೂಟಿಂಗ್‍ನಲ್ಲಿ ನಾವಿಬ್ಬರೂ ಫೋಟೋಶೂಟ್‍ಗೆ ಹೋಗಬೇಕಿತ್ತು. ನಾನು ಫೋನಿನಲ್ಲಿ ಬ್ಯುಸಿ ಇದ್ದೇ ಫೋಟೋಗ್ರಾಫರ್ ಧ್ರುವ ಸರ್ಜಾ ಅವರು ಬಂದ ಮೇಲೆ ಅವರನ್ನು ಕರೆದುಕೊಂಡು ಬನ್ನಿ ಎಂದು ಹೇಳಿ ಹೋದರು. ನಂತರ ಬಂದ ಧ್ರುವಗೆ ನಾನು ಫೋನ್ ನೋಡಿಕೊಂಡೇ ಫೋಟೋಶೂಟ್‍ಗೆ ಹೋಗಬೇಕಂತೆ ಬನ್ರಿ ಎಂದೆ, ಆಗಿನಿಂದ ಅವರು ನನ್ನನ್ನು ರೀ ಎಂದು ರೇಗಿಸುತ್ತಾರೆ ಎಂದು ಹರಿಪ್ರಿಯ ತಿಳಿಸಿದ್ದಾರೆ.
ನನಗೆ ಜಿರಳೆ ಕಂಡರೆ ಭಯ ಹಾಗೇ ಧ್ರುವ ಅವರಿಗೆ ಎತ್ತರ ಜಾಗ ಎಂದರೆ ಭಯಪಡುತ್ತಾರೆ ಎಂದು ಹೇಳಿರುವ ಹರಿಪ್ರಿಯಾ, ನಾವು ಭರ್ಜರಿ ಸಿನಿಮಾದಲ್ಲಿ ಒಟ್ಟಿಗೆ ನಟಿಸಿದ್ದೆವು. ಆ ಸಿನಿಮಾದ ಹಾಡಿನ ಶೂಟಿಂಗ್ ಮಾಡಲು ನಾವು ಸ್ಲೋವೇನಿಯಾಗೆ ಹೋಗಿದ್ದೇವು. ಅಲ್ಲಿ ಎತ್ತರ ಪ್ರದೇಶದ ತುದಿಯಲ್ಲಿ ನಿಂತು ನಟಿಸಬೇಕಿತ್ತು. ಆಗ ಧ್ರುವ ಅವರು ಭಯದಿಂದ ನಡುಗುತ್ತಿದ್ದರು ಎಂದು ಹರಿಪ್ರಿಯ ತಮ್ಮ ಬ್ಲಾಗ್‍ನಲ್ಲಿ ಬರೆದುಕೊಂಡಿದ್ದಾರೆ.
ಜೊತೆಗೆ ನನಗೆ ಅಂಜನೇಯ ಸ್ವಾಮಿ ಫೋಟೋ ಕಾಣಿಸಿದಾಗ ತಕ್ಷಣ ಧ್ರುವ ಅವರು ನೆನಪಾಗುತ್ತಾರೆ. ನನಗೂ ನಂಬರ್ 6 ಎಂದರೆ ಇಷ್ಟ ಅವರಿಗೂ ಆ ಸಂಖ್ಯೆಯೇ ಇಷ್ಟ. ಈ ವಿಚಾರವಾಗಿ ನಾವೂ ಕಿತ್ತಾಡಿದ್ದೂ ಇದೆ. ಆದರೆ ಧ್ರುವ ಅವರು ಬಂಡಲ್ ಆಫ್ ಟ್ಯಾಲೆಂಟ್ ಆ್ಯಂಡ್ ಎನರ್ಜಿ. ಅವರ ವೈಯಕ್ತಿಕ ಮತ್ತು ವೃತ್ತಿ ಜೀವನಕ್ಕೆ ನನ್ನ ಬೆಸ್ಟ್ ವಿಶಸ್ ಎಂದು ಹೇಳುವ ಮೂಲಕ ತಮ್ಮ ಬ್ಲಾಗ್ ಅನ್ನು ಹರಿಪ್ರಿಯಾ ಅಂತ್ಯ ಮಾಡಿದ್ದಾರೆ.