ಗೋಕಾಕ :ಇಂದು ಗೋಕಾಕ ನಗರದಲ್ಲಿ ನಡೆದ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ರಮೇಶ್ ಜಾರಕಿಹೊಳಿ
ನಗರ ಅಭಿವೃದ್ಧಿಗೆ ಹೆಚ್ಚಿನ್ ಒತ್ತು: ಈಗಾಗಲೇ ನಗರಸಭೆ ಅಧಿಕಾರಿಗಳ ಮತ್ತು ಸದಸ್ಯರ ಸಭೆ ನಡೆಯಿಸಿ ನಗರದ ಸಮಗ್ರ ಅಭಿವೃದ್ಧಿಯನ್ನು ತ್ವರಿತವಾಗಿ ಮುಗಿಸಲು ಸೂಚಿಸಲಾಗಿದೆ ಆದಷ್ಟು ಬೇಗ ನಗಯದಲ್ಲಿ ಪ್ರಗತಿಯಲ್ಲಿರುವ ಎಲ್ಲ ಕಾಮಗಾರಿಗಳನ್ನು ಪೂರ್ಣಗೊಳಿಸಲಾಗುವದು ಎಂದು ರಮೇಶ ಜಾರಕಿಹೊಳಿ ಹೇಳಿದರು
ನಗರಸಭೆ ಅಧಿಕಾರಿಗಳು ಕಛೇರಿಗೆ ಬಂದ ಸಾರ್ವಜನಿಕ ರೊಂದಿಗೆ ಸರಿಯಾಗಿ ವರ್ತಿಸದೆ ಸತಾಯಿಸುತ್ತಿದ್ದಾರೆ ಎಂದು ಪತ್ರಕರ್ತರು ಸಚಿವ ಗಮನ ಸಳೆದಾಗ ಲಾಕಡೌನ ಸಂಧರ್ಭದಲ್ಲಿ ಕೆಲವು ಅವ್ಯವಸ್ಥೆಗಳು ಉಂಟಾಗಿರ ಬಹುದು ಮುಂದೆ ಹಾಗೆ ಆಗದಂತೆ ಕಟ್ಟುನಿಟ್ಟಿನ ಕ್ರಮ ಜರುಗಿಸಲಾಗುವದು ಎಂದು ಸಚಿವರು ಉತ್ತರಿಸಿದರು.
ನಗರಸಭೆ ಪೌರಾಯುಕ್ತ ಶಿವಾನಂದ ಹಿರೇಮಠ , ನಗರಸಭೆ ಸದಸ್ಯ ಎಸ್.ಎ ಕೊತವಾಲ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಹಾಗೇ ಕೆಲವೊಂದು ಡ್ಯಾಮ್ ಗಳ ಬಗ್ಗೆ ಮಾತನಾಡಿದ ರಮೇಶ್ ಜಾರಕಿಹೊಳಿ ನಿನ್ನೆ ಜಿಲ್ಲಾ ಮಟ್ಟದಲ್ಲಿ ನಡೆದ ಸಭೆಯಲ್ಲೂ ಕೂಡ ಚರ್ಚೆ ಮಾಡಿದೀವಿ ,ಪ್ರವಾಹ ಬರುವ ಸಾಧ್ಯತೆ ಗಳಿದ್ದರೂ, ನಾವು ಅದಕ್ಕೆ ಬೇಕಾದಂತಹ ಎಲ್ಲರಿತಿಯ ತಯಾರಿಗಳನ್ನು ಮಾಡಿ ಕೊಂಡಿದ್ದೇವೆ ಎಂದು ಹೇಳಿದ್ರು
ಕೆಲವೊಂದು ಜನರಿಗೆ ಕಳೆದ ಬಾರಿ ಬಂದಂಥ ಪ್ರವಾಹ ಸಂತ್ರಸ್ತರಿಗೆ ಏನೇ ತೊಂದರೆ ಆಗಿದ್ದರು ಇದರ ಬಗ್ಗೆ ಆದಷ್ಟು ಬೇಗ ಕ್ರಮ ಕೈಗೊಳ್ಳುತ್ತೇವೆ ಎಂದು ಹೇಳಿದ್ರು
ಡಿಕೆ ಶಿವಕುಮಾರ್ ಅವರು ಹಾಗೂ ಸಿದ್ದರಾಮಯ್ಯ ಅವರು ರಮೇಶ್ ಜಾರಕಿಹೋಳಿ ಅವರ್ ಬಗ್ಗೆ ಟಾಂಗ್ ಕೊಟ್ಟಿದ್ರು ಅದಕ್ಕೆ ರಮೇಶ್ ಜಾರಕಿಹೊಳಿ, ಕಾಂಗ್ರೆಸ್ ಪಕ್ಷದಲ್ಲಿ ಡಿ.ಕೆ ಶಿವಕುಮಾರ್ ಏಕಾಂಗಿಯಾಗಿದ್ದಾನೆ ಎಂದು ಜಲಸಂಪನ್ಮೂಲ ಸಚಿವ ರಮೇಶ ಜಾರಕಿಹೊಳಿ ಟಾಂಗ್ ನೀಡಿದರು
ಹಾಗೇ ರಾಜ್ಯ ಸಭಾ ಚುನಾವಣೆ ಬಗ್ಗೆ ಮಾತನಾಡಿದ ಅವರು ಖರ್ಗೆ ಹಾಗೂ ದೇವೇಗೌಡ ರಂತಹ ರಾಜಕಾರಣಿ ಗಳು ನಮ್ಮಲಿ ಇರಬೇಕು , ಹಾಗೂ ಬಿಜೆಪಿ ಅಭ್ಯರ್ಥಿ ಬಗ್ಗೆ ಕೇಳಿದಕ್ಕೆ ನಮ್ಮ ಪಕ್ಷವೇ ತೀರ್ಮಾನ ತೆಗೆದು ಕೊಳ್ಳುತ್ತೆ ಅದೇ ಅಂತಿಮ ಎಂದು ಹೇಳಿದ್ರು ಸಚಿವರು..