Breaking News

ಸತೀಶ ಶುಗರ್ಸ್ ಕಾರ್ಖಾನೆಯಲ್ಲಿ 74ನೇ ಸ್ವಾತಂತ್ರ್ಯ ದಿನಾಚರಣೆ

Spread the love

ಗೋಕಾಕ: ಭಾರತದ ಇತಿಹಾಸದಲ್ಲಿ ಮೈಲುಗಲ್ಲನ್ನು ಸೃಷ್ಟಿಸಿದ ದಿನ ಮತು ಭಾರತ ದೇಶದ ಎಲ್ಲ ಪ್ರಜೆಗಳು ಸಂಭ್ರಮ ಪಡುವ ದಿನ ಅದುವೇ ನಮ್ಮ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟ ಸುದಿನ ಅಗಸ್ಟ 15. ದಿನಾಂಕ 15.08.2020 ರಂದು ಬೆಳಿಗ್ಗೆ 7.45ಕ್ಕೆ ಸತೀಶ ಶುಗರ್ಸ ಕಾರ್ಖಾನೆಯಲ್ಲಿ ಪ್ರತಿ ವರ್ಷದಂತೆ ಈ ವರ್ಷವು ಕಾರ್ಖಾನೆಗೆ ಅತಿ ಹೆಚ್ಚು ಕಬ್ಬು ಪೂರೈಸಿದ  ರೈತರುಗಳಾದ ಯಲ್ಲಪ್ಪಾ ರಂಗಪ್ಪಾ ಮಳಲಿ ಸಾ.ಮಲ್ಲಾಪೂರ ,ಈರಪ್ಪಾ ಸಿದ್ದಪ್ಪಾ ಕಿತ್ತೂರ ಇವರಿಂದ 74 ನೇಯ ಸ್ವಾತಂತ್ರ್ಯ ದಿನಾಚರಣೆಯನ್ನು ನೆರವೇರಿಸಲಾಯಿತು.

ಕಾರ್ಖಾನೆಯ ಮ್ಯಾನೇಜಿಂಗ್ ಡೈರೆಕ್ಟರರಾದ ಶ್ರೀ. ಸಿದ್ದಾರ್ಥ ವಾಡೆನ್ನವರ ಅವರು ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡುತ್ತಾ ಸ್ವಾತಂತ್ರ್ಯ ನಂತರದಲ್ಲಿ ಭಾರತವು ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದು ಜಗತ್ತಿನ ಭೂಪಟದಲ್ಲಿ ತನ್ನದೇ ಆದ ಛಾಪು ಮೂಡಿಸಿದ್ದು, ಕಾರ್ಖಾನೆಯ ಎಲ್ಲ ಸಿಬ್ಬಂದಿ ವರ್ಗದವರು ತಮ್ಮ ಮಕ್ಕಳ ಶಿಕ್ಷಣಕ್ಕೆ ಉತ್ತಮ ಪ್ರೋತ್ಸಾಹ ನೀಡುವ ಮುಖಾಂತರ ಅವರಲ್ಲಿ ದೇಶದ ಪ್ರಗತಿಗೆ ಕೊಡುಗೆ ನೀಡುವಂತೆ ವ್ಯಕ್ತಿತ್ವವನ್ನು ರೂಪಿಸಬೇಕು ಎಂದರು.

ಅಲ್ಲದೇ, ಪ್ರಸ್ತುತ ದೇಶದಲ್ಲಿ ತಾಂಡವವಾಡುತ್ತಿರುವ ಕೊರೊನಾ ಎಂಬ ಸಾಂಕ್ರಾಮಿಕ ರೋಗದ ವಿರುದ್ದ ಹೋರಾಡಲು ಆರೋಗ್ಯ ಕ್ಷೇತ್ರದಲ್ಲಿ ಮತ್ತಷ್ಟು ಸುಧಾರಣೆ ಹಾಗೂ ಸಂಶೋಧನೆಗಳ ಅನಿವಾರ್ಯತೆ ಇದೆ. ಜನರು ಆರೋಗ್ಯದ ಕಾಳಜಿ ವಹಿಸಿ ತಮ್ಮನ್ನು ತಾವು ಸಂರಕ್ಷಿಸಿಕೊಳ್ಳಬೇಕು ಮತ್ತು ಸಾಮಾಜಿಕ ಪರಿವರ್ತನೆಯ ಹರಿಕಾರರಾದ ಹಾಗೂ ಮಾಜಿ ಸಚಿವರು ಮತ್ತು ನಮ್ಮ ಸಂಸ್ಥೆಯ ಸಂಸ್ಥಾಪಕ ಅದ್ಯಕ್ಷರಾದ ಸನ್ಮಾನ್ಯ ಸತೀಶ ಜಾರಕಿಹೊಳಿ ಯವರು ಸಾಂಕ್ರಾಮಿಕ ರೋಗದ ವಿರುದ್ದ ಹೋರಾಡುವ ನಿಟ್ಟಿನಲ್ಲಿ ಎಲ್ಲ ಸರ್ಕಾರಿ ಮತ್ತು ಖಾಸಗಿ ಸಂಘ – ಸಂಸ್ಥೆಗಳಿಗೆ ಸ್ಯಾನಿಟಾಯ್ಜರ್ ಮತ್ತು ಮಾಸ್ಕಗಳನ್ನು ವಿತರಿಸಿರುವುದಲ್ಲದೇ, ಹೊರ ರಾಜ್ಯಗಳಿಂದ ಆಗಮಿಸಿದ ಸುಮಾರು 1 ಸಾವಿರ ವಲಸೆ ಕಾರ್ಮಿಕರನ್ನು ಮಹಾರಾಷ್ಟ್ರ-ಕರ್ನಾಟಕ ಗಡಿ ಭಾಗದ ಅಲದಾಳ ಗ್ರಾಮದಲ್ಲಿರುವ ತಮ್ಮ ಅಥಿತಿ ಗೃಹಕ್ಕೆ ತಮ್ಮ ವಾಹನದಲ್ಲಿ ಕರೆತಂದು ಅವರಿಗೆ ಊಟ ಮತ್ತು ವಸತಿ ವ್ಯವಸ್ಥೆಯನ್ನು ಮಾಡುವ ಮೂಲಕ ನಿರಂತರವಾಗಿ ಜನರ ಸೇವೆಗೆ ಹಗಲಿರುಳು ಶ್ರಮಿಸುತ್ತಿದ್ದಾರೆ ಎಂದು ಪ್ರಶಂಸಿದರು.

ಕಾರ್ಖಾನೆಯ ಹಿರಿಯ ಉಪಾದ್ಯಕ್ಷರುಗಳಾದ ಪಿ.ಡಿ ಹಿರೇಮಠ ಹಾಗೂ ಕಾರ್ಖಾನೆಯ ಉಪಾದ್ಯಕ್ಷರುಗಳಾದ ಡಿ.ಆರ್.ಪವಾರ,  ವಿ.ಎಮ್. ತಳವಾರ ಮತ್ತು  ಪ್ರಧಾನ ವ್ಯವಸ್ಥಾಪಕರುಗಳಾದ. ಎ.ಪಿ.ಹಲಕರ್ಣಿ, ಎಸ್.ಬಿ.ಕೊಟಗಿ, ಎಮ್.ಬಿ.ಸಸಾಲಟ್ಟಿ ಹಾಗೂ ರೈತಬಾಂಧವರು ಮತ್ತು ಕಾರ್ಖಾನೆಯ ಕಾರ್ಮಿಕ ವ ಸಿಬ್ಬಂದಿಯವರು ಉಪಸ್ಥಿತರಿದ್ದರು.


Spread the love

About Laxminews 24x7

Check Also

ಚಿಕ್ಕೋಡಿ ಸಾರ್ವಜನಿಕ ಆಸ್ಪತ್ರೆ ‌ಅವ್ಯವಸ್ಥೆ ಕಂಡು ಗರಂ ಆದ ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮೀ

Spread the love ಚಿಕ್ಕೋಡಿ ಸಾರ್ವಜನಿಕ ಆಸ್ಪತ್ರೆ ‌ಅವ್ಯವಸ್ಥೆ ಕಂಡು ಗರಂ ಆದ ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮೀ ಚಿಕ್ಕೋಡಿ: …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ