ನವದೆಹಲಿ: ಕೋವಿಡ್ 19 ನಿಂದಾಗಿ ಆಗಿರುವ ನಷ್ಟವನ್ನು ತುಂಬಲು ವಿಮಾನಯಾನ ಕಂಪನಿಗಳು ದುಬಾರಿ ಟಿಕೆಟ್ ದರವನ್ನು ವಿಧಿಸುತ್ತಿರುವ ಆರೋಪ ಕೇಳಿ ಬಂದ ಹಿನ್ನೆಲೆಯಲ್ಲಿ ಈಗ ನಾಗರಿಕ ವಿಮಾನಯಾನ ನಿರ್ದೇಶನಾಲಯ ದರವನ್ನು ನಿಗದಿ ಪಡಿಸಿದೆ.
ಲಾಕ್‍ಡೌನ್ ಘೋಷಣೆಯಾದ ಬಳಿಕ ದೇಶಿಯ ವಿಮಾನ ಸಂಚಾರ ಮೇ 25ರಿಂದ ಆರಂಭವಾಗಲಿದೆ. ವಿಮಾನ ಸೇವೆಗೆ ವಿಮಾನಯಾನ ಸಚಿವಾಲಯ ಗ್ರೀನ್ ಸಿಗ್ನಲ್ ನೀಡುತ್ತಿದ್ದಂತೆ ಕಂಪನಿಗಳು ವಿಮಾನದ ಒಳಗಡೆ ಸಾಮಾಜಿಕ ಆಂತರ ಕಾಪಾಡುವ ನಿಟ್ಟಿನಲ್ಲಿ ದುಬಾರಿ ಟಿಕೆಟ್ ದರ ವಿಧಿಸುತ್ತಿವೆ ಎಂದು ಗ್ರಾಹಕರು ದೂರು ನೀಡಿದ್ದರು.
ವರ್ಗ ಹೇಗೆ?
ನಾಗರಿಕ ವಿಮಾನಯಾನ ನಿರ್ದೇಶನಾಲಯ ವಿಮಾನ ಹಾರಾಟದ ಮಾರ್ಗವನ್ನು ಎ,ಬಿ,ಸಿ,ಡಿ,ಇ,ಎಫ್,ಜಿ ವಿಂಗಡಿಸಿ ಗರಿಷ್ಠ ಮತ್ತು ಕನಿಷ್ಠ ದರವನ್ನು ನಿಗದಿ ಪಡಿಸಿದೆ. 40 ನಿಮಿಷ ಪ್ರಯಾಣದ ಅವಧಿ ಹೊಂದಿರುವ ಮಾರ್ಗಗಳು ‘ಎ’ ವರ್ಗದಲ್ಲಿ ಬರುತ್ತವೆ. 180 -210 ನಿಮಿಷ ಪ್ರಯಾಣ ಅವಧಿ ಹೊಂದಿರುವ ಮಾರ್ಗಗಳು ‘ಜಿ’ ವರ್ಗದಲ್ಲಿ ಬರುತ್ತದೆ.
ದರ ಎಷ್ಟು?
ಎ ವರ್ಗ – ಕನಿಷ್ಠ 2,000 ರೂ. ಗರಿಷ್ಠ 6,000 ರೂ.
ಮಾರ್ಗಗಳು : ಬೆಂಗಳೂರು – ಚೆನ್ನೈ, ಬೆಂಗಳೂರು – ಕೊಚ್ಚಿ, ಬೆಂಗಳೂರು – ಮಂಗಳೂರು.
ಬಿ ವರ್ಗ – ಕನಿಷ್ಠ 2,500 ರೂ. ಗರಿಷ್ಠ 7,500
ಮಾರ್ಗಗಳು: ಬೆಂಗಳೂರು – ಕ್ಯಾಲಿಕಟ್, ಬೆಂಗಳೂರು – ಕೊಯಮತ್ತೂರ್, ಬೆಂಗಳೂರು – ಹೈದರಾಬಾದ್, ಬೆಂಗಳೂರು – ತಿರುವನಂತಪುರಂ.
ಸಿ ವರ್ಗ – ಕನಿಷ್ಠ 3,000 ರೂ. ಗರಿಷ್ಠ 9,000 ರೂ.
ಮಾರ್ಗಗಳು: ಬೆಂಗಳೂರು – ಮುಂಬೈ, ಬೆಂಗಳೂರು – ನಾಗ್ಪುರ, ಬೆಂಗಳೂರು – ಪೋರ್ಟ್‍ಬ್ಲೇರ್, ಬೆಂಗಳೂರು – ಪುಣೆ, ಬೆಂಗಳೂರು – ವಿಶಾಖಪಟ್ಟಣ.
ಡಿ ವರ್ಗ – ಕನಿಷ್ಠ 3,500 ರೂ., ಗರಿಷ್ಠ 10,000 ರೂ.
ಮಾರ್ಗಗಳು : ಬೆಂಗಳೂರು – ಅಹಮದಾಬಾದ್, ಬೆಂಗಳೂರು – ಭೋಪಾಲ್, ಬೆಂಗಳೂರು – ಭುವನೇಶ್ವರ, ಬೆಂಗಳೂರು – ಇಂದೋರ್, ಬೆಂಗಳೂರು – ರಾಯ್‍ಪುರ.
ಇ ವರ್ಗ – ಕನಿಷ್ಠ 4,500 ರೂ. ಗರಿಷ್ಠ 13,000 ರೂ.
ಮಾರ್ಗಗಳು: ಬೆಂಗಳೂರು – ದೆಹಲಿ, ಬೆಂಗಳೂರು – ಜೈಪುರ, ಬೆಂಗಳೂರು – ಲಕ್ನೋ, ಬೆಂಗಳೂರು – ಪಾಟ್ನಾ, ಬೆಂಗಳೂರು- ರಾಂಚಿ.
ಎಫ್ ವರ್ಗ – ಕನಿಷ್ಠ 5,500 ರೂ., ಗರಿಷ್ಠ 15,700 ರೂ.
ಮಾರ್ಗಗಳು: ಬೆಂಗಳೂರು – ಚಂಡೀಗಢ, ಬೆಂಗಳೂರು ಗುವಹಾಟಿ, ಬೆಂಗಳೂರು – ಇಂಫಾಲ್, ಬೆಂಗಳೂರು- ವಾರಣಾಸಿ.
ಜಿ ವರ್ಗ – ಕನಿಷ್ಠ 6,500 ರೂ., ಗರಿಷ್ಠ 18,500 ರೂ.
ಮಾರ್ಗಗಳು: ದೆಹಲಿ – ಕೊಯಮತ್ತೂರು, ದೆಹಲಿ – ತಿರುವನಂತಪುರಂ, ದೆಹಲಿ – ಪೋರ್ಟ್ ಬ್ಲೇರ್.