Breaking News

ಕೊರೊನಾ ಸೋಂಕು ತಡೆಗಟ್ಟಲು ತಯಾರಿಸಲಾದ ಔಷಧಿಯ ಸ್ಯಾಂಪಲ್​​ ಕುಡಿದು ಸಂಶೋಧಕರೊಬ್ಬರು ಸಾವನ್ನಪ್ಪಿರೋ ಘಟನೆ ತಮಿಳುನಾಡಿನಲ್ಲಿ ನಡೆದಿದೆ

Spread the love

ಚೆನ್ನೈ: ಕೊರೊನಾ ಸೋಂಕು ತಡೆಗಟ್ಟಲು ತಯಾರಿಸಲಾದ ಔಷಧಿಯ ಸ್ಯಾಂಪಲ್​​ ಕುಡಿದು ಸಂಶೋಧಕರೊಬ್ಬರು ಸಾವನ್ನಪ್ಪಿರೋ ಘಟನೆ ತಮಿಳುನಾಡಿನಲ್ಲಿ ನಡೆದಿದೆ.

‘ನಿವಾರಣ್-90’ ಎಂಬ ಕೆಮ್ಮು ಮತ್ತು ಶೀತದ ಔಷಧಿ ಕಂಪನಿಯ ಅಧಿಕಾರಿ ಶಿವನೇಸನ್(47) ಮೃತ ವ್ಯಕ್ತಿ.

ಕೊರೊನಾ ಮಹಾಮಾರಿಗೆ ಔಷಧಿ ಕಂಡುಹಿಡಿಯಲು ದೇಶ-ವಿದೇಶಗಳಲ್ಲಿ ಸಂಶೋಧಕರು ಪೈಪೋಟಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಭಾರತದಲ್ಲೂ ಕೂಡ ಔಷಧಿಗಾಗಿ ಸರ್ಕಾರಿ ಪ್ರಯೋಗಾಲಯಗಳು ಮಾತ್ರವಲ್ಲದೆ ಖಾಸಗಿ ಸಂಸ್ಥೆಗಳಲ್ಲೂ ತೀವ್ರ ಗತಿಯಲ್ಲಿ ಸಂಶೋಧನೆ ನಡೆಸಲಾಗುತ್ತಿದೆ.

ಕೆಮ್ಮು ಮತ್ತು ಶೀತಕ್ಕೆ ಇನ್ಸ್​​ಟೆಂಟ್​​ ಔಷಧಿ ಎಂದೇ ಖ್ಯಾತವಾದ ನಿವಾರಣ್ 90 ಕರ್ತೃ ಸಂಸ್ಥೆ ಸುಜಾತಾ ಬಯೋಟೆಕ್ ಕಂಪನಿ ಕೂಡ ಈ ನಿಟ್ಟಿನಲ್ಲಿ ಕಾರ್ಯನಿರ್ವಹಿಸುತ್ತಿದೆ.

ಸಂಶೋಧಕರೂ ಆದ ಶಿವನೇಸನ್ ಲಾಕ್​ಡೌನ್ ಘೋಷಣೆಯಾದ ಸಂದರ್ಭದಲ್ಲಿ ಚೆನ್ನೈನಲ್ಲಿ ಇದ್ದ ಕಾರಣ ಉತ್ತರಾಖಂಡ್​ಗೆ ಹೋಗಲು ಸಾಧ್ಯವಾಗಲಿಲ್ಲ. ಹೀಗಾಗಿ ಕೊರೊನಾ ವೈರಸ್ ನಿಗ್ರಹಕ್ಕೆ ಚೆನ್ನೈನ ಕೋಡಂಬಾಕಂನಲ್ಲಿರುವ ತಮ್ಮ ಸಂಸ್ಥೆಯ ಲ್ಯಾಬ್​​​ನಲ್ಲಿ ಔಷಧಿ ಕಂಡುಹಿಡಿಯುವ ಕಾರ್ಯದಲ್ಲಿ ನಿರತರಾದರು.

ಸಂಸ್ಥೆಯ ಮಾಲೀಕ ಡಾ. ರಾಜಕುಮಾರ್ ಒಡಗೂಡಿ ಒಂದು ಮಿಶ್ರಣವನ್ನು ಕೂಡ ತಯಾರಿಸಿದ್ದರು. ಅದರ ಪ್ರಯೋಗಾರ್ಥ ಪರೀಕ್ಷೆಗೆ ಶಿವನೇಸನ್ ಮತ್ತು ರಾಜಕುಮಾರ್ ಇಬ್ಬರೂ ಮುಂದಾಗಿ ಅದನ್ನು ಸೇವಿಸಿದರು.

ಸೋಡಿಯಂ ನೈಟ್ರೇಟ್ ದ್ರಾವಣದ ಈ ಮಿಶ್ರಣ ಸೇವಿಸಿದ ಕೆಲ ಹೊತ್ತಿನಲ್ಲೇ ಇಬ್ಬರಿಗೂ ಅಸ್ವಸ್ಥತೆ ಕಾಡಿ ಆಸ್ಪತ್ರೆಗೆ ದಾಖಲಿಸಲಾಯಿತು. ಅದರಲ್ಲಿ ಶಿವನೇಸನ್ ಮೃತಪಟ್ಟಿದ್ದಾರೆ ರಾಜಕುಮಾರ್ ಚಿಕಿತ್ಸೆಯ ನಂತರ ಸುಧಾರಿಸಿಕೊಂಡಿದ್ದು, ಆರೋಗ್ಯಕರವಾಗಿದ್ದಾರೆ.


Spread the love

About Laxminews 24x7

Check Also

ಧರ್ಮಸ್ಥಳ ಪ್ರಕರಣದ ಮಾಸ್ಟರ್​​ ಮೈಂಡ್ ದಕ್ಷಿಣಕನ್ನಡ ಮಾಜಿ ಡಿಸಿ ಸಸಿಕಾಂತ್ ಸೆಂಥಿಲ್ ಎಂದು ಜನಾರ್ದನ ರೆಡ್ಡಿ ಗಂಭೀರ ಆರೋಪ

Spread the love ಬೆಂಗಳೂರು/ದಕ್ಷಿಣ ಕನ್ನಡ: “ಧರ್ಮಸ್ಥಳದ ವಿರುದ್ಧ ನಡೆಯುತ್ತಿರುವ ಷಡ್ಯಂತರದ ಹಿಂದಿನ ಮಾಸ್ಟರ್​ ಮೈಂಡ್​​ ತಮಿಳುನಾಡಿನ ತಿರುವಲ್ಲೂರಿನ ಕಾಂಗ್ರೆಸ್​ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ