Home / ಜಿಲ್ಲೆ / ಬೆಳಗಾವಿ / ಚಿಕ್ಕೋಡಿ / ಚಿಕ್ಕೋಡಿ ತಾಲ್ಲೂಕಿನ ಸುಕ್ಷೇತ್ ಕೇರೂರ ಗ್ರಾಮದಲ್ಲಿ ಪ್ರತಿವರ್ಷದಂತೆ ಈ ವರ್ಷವೂ ಕೂಡ 37ನೆಯ ವೇದಾಂತ ಪರಿಷತ್ತು ಕಾರ್ಯಕ್ರಮ

ಚಿಕ್ಕೋಡಿ ತಾಲ್ಲೂಕಿನ ಸುಕ್ಷೇತ್ ಕೇರೂರ ಗ್ರಾಮದಲ್ಲಿ ಪ್ರತಿವರ್ಷದಂತೆ ಈ ವರ್ಷವೂ ಕೂಡ 37ನೆಯ ವೇದಾಂತ ಪರಿಷತ್ತು ಕಾರ್ಯಕ್ರಮ

Spread the love

ಚಿಕ್ಕೋಡಿ ತಾಲ್ಲೂಕಿನ ಸುಕ್ಷೇತ್ ಕೇರೂರ ಗ್ರಾಮದಲ್ಲಿ ಪ್ರತಿವರ್ಷದಂತೆ ಈ ವರ್ಷವೂ ಕೂಡ 37ನೆಯ ವೇದಾಂತ ಪರಿಷತ್ತು ಕಾರ್ಯಕ್ರಮವು ಮಾತನಾಡುವ ನಡೆದಾಡುವ ದೇವರು ಶ್ರೀ ಶಿವಾನಂದ ಭಾರತಿ ಮಹಾಸ್ವಾಮೀಜಿಯವರ ದಿವ್ಯಸಾನಿಧ್ಯದಲ್ಲಿ ಹಾಗೂ ಹುಬ್ಬಳ್ಳಿಯ ಜಡಿ ಮಠದ ಪೀಠಾಧಿಪತಿಗಳಾದ ಶ್ರೀರಾಮಾನಂದ ಭಾರತಿ ಮಹಾಸ್ವಾಮಿಗಳ ನೇತೃತ್ವದಲ್ಲಿ ಹುಬ್ಬಳ್ಳಿಯ ಸಿದ್ಧಾರೂಢ ಮಠದ ಸ್ವಾಮಿಗಳ ಆದ ಶ್ರೀ ಸಚ್ಚಿದಾನಂದ ಮಹಾಸ್ವಾಮಿಗಳು, ಶ್ರೀ ಸಂಪಾದನಾ ಮಹಾಸ್ವಾಮಿಗಳು ಚರಮೂರ್ತಿ ಮಠ ಚಿಕ್ಕೋಡಿ, ಮಾತೋಶ್ರೀ ಶ್ರೀ ಅಕ್ಕಮಹಾದೇವಿ ತಾಯಿಯವರು ಕದಳಿ ಮಠ ಗದಗ್, ನಿಂಗಾನಂದ ಸ್ವಾಮಿಗಳು ಸೌಂಟಗಿ ಹಾಗೂ ಮುಂತಾದ ಶ್ರೀಗಳ ಸಮ್ಮುಖದಲ್ಲಿ ನೆರವೇರಿತು.

ದಿನಾಂಕ 14-01-2020ರಿಂದ17-01-2020 2020 ರವರೆಗೆ ಅತಿ ವಿಜೃಂಭಣೆಯಿಂದ ಜರುಗಿತು ಮೊದಲನೇ ದಿನ ಶ್ರೀ ಶಿವಾನಂದ ಭಾರತಿ ಮಹಾಸ್ವಾಮೀಜಿ ಅವರ ವಿವಿಧ ವಿವಿಧ ವಾದ್ಯ ಮೇಳಗಳೊಂದಿಗೆ ಹಾಗೂ ನೂರಾರು ಮುತ್ತೈದೆ ರಿಂದ ಕುಂಭಮೇಳ ಗಾಂಧಿಗೆ ದೇವರ ಮೆರವಣಿಗೆ ಕಾರ್ಯಕ್ರಮ ಜರುಗಿತು ಈ ಕಾರ್ಯಕ್ರಮದಲ್ಲಿ ಸತತ ನಾಲ್ಕು ದಿನಗಳ ಪರ್ಯಂತ ಜರಗುವ ಈ ಕಾರ್ಯಕ್ರಮದಲ್ಲಿ ಸಾಯಂಕಾಲ ಶಾಲಾ ಮಕ್ಕಳ ಸಾಂಸ್ಕೃತಿಕ ಕಾರ್ಯಕ್ರಮಗಳು ಹಾಗೂ ಭಕ್ತಿಸಂಗೀತ ನಂತರ ಶ್ರೀಗಳ ಆಶೀರ್ವಚನ ಹಾಗೂ ಶಿವಾನಂದ ಭಾರತಿ ಮಹಾಸ್ವಾಮಿಗಳು ಕಿರೀಟ ಪೂಜೆ ಹಾಗೂ ಮಹಾಪ್ರಸಾದ ಜರುಗಿತು
ಕಾರ್ಯಕ್ರಮದ ಕೊನೆಯ ದಿನವಾದ 17-01-2020ರಂದು ಮುಂಜಾನೆ ಶ್ರೀಶಿವಾನಂದ ಭಾರತಿ ಮಹಾಸ್ವಾಮೀಜಿ ಅವರ ಭಾವಚಿತ್ರ ಮೆರವಣಿಗೆ ಹಾಗೂ ಪಲ್ಲಕ್ಕಿ ಉತ್ಸವ ನಂತರ ಸಾಮೂಹಿಕ ವಿವಾಹ ಹಾಗೂ ಮಹಾಪ್ರಸಾದ ದೊಂದಿಗೆ ಕಾರ್ಯಕ್ರಮ ವಿಜೃಂಭಣೆಯಿಂದ ಕೊನೆಗೊಂಡಿತು.

ಈ ಕಾರ್ಯಕ್ರಮದಲ್ಲಿ ಶ್ರೀ ಮಹದೇವ ನೇಜಕರ
ಶ್ರೀ ದತ್ತು ನೇಜಕರ
ಶ್ರೀಮಾಯಗೌಡಾ ಪಾಟೀಲ
ಶ್ರೀ ಅಲಗೌಡ ಪಾಟೀಲ್
ಶ್ರೀ ಅಲಗೌಡಾ ರೆಂದಾಳೆ ಶ್ರೀ ರಾಮಗೌಡ ಪಾಟೀಲ್
ಶ್ರೀ ರಾಮು ನೇಜಕರ
ಶ್ರೀ ತುಕಾರಾಮ ಕೊನಕೇರಿ.
ಶ್ರೀ ರೋಹಿತ್.ಕುಂಬಾರ್ ಶ್ರೀ ಉಜ್ವಲ್ ಪಾಟೀಲ
ಹಾಗೂ ಶ್ರೀ ಶಂಕರಾನಂದ ಪರಮಹಂಸ ಮಠದ ಸರ್ವ ಸದಸ್ಯರು ಹಾಗೂ ಹಿರಿಯರು ಹಾಗೂ ಶ್ರೀ ಭಾರತೀಶ ಸೇವಾದಳದ ಕಾರ್ಯಕರ್ತರು ಹಾಗೂ ಕೇರೂರ ಗ್ರಾಮದ ಸಕಲ ಗ್ರಾಮಸ್ಥರೂ ಉಪಸ್ಥಿತರಿದ್ದರು.


Spread the love

About Laxminews 24x7

Check Also

ಅಥಣಿಯ ಇಬ್ಬರು ವಿದ್ಯಾರ್ಥಿನಿಯರಿಗೆ ತೃತೀಯ ರ್‍ಯಾಂಕ್‌

Spread the love ಬೆಳಗಾವಿ: ಜಿಲ್ಲೆಯ ಅಥಣಿಯ ಬಣಜವಾಡ ವಸತಿ ಪದವಿಪೂರ್ವ ಕಾಲೇಜಿನ ಇಬ್ಬರು ವಿದ್ಯಾರ್ಥಿನಿಯರು ವಿಜ್ಞಾನ ಹಾಗೂ ವಾಣಿಜ್ಯ ವಿಭಾಗದಲ್ಲಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ