Breaking News

ಹುಬ್ಬಳ್ಳಿ

ರೈಲ್ವೆಯಲ್ಲಿ ಕೆಲಸ ಕೊಡಿಸುವುದಾಗಿ ಮಹಿಳೆಯ ಮೇಲೆ ದೌರ್ಜನ್ಯಕ್ಕೆ ಮುಂದಾದ ನೌಕರ; ಬಂಧನ

ಹುಬ್ಬಳ್ಳಿ: ರೈಲ್ವೆ ಇಲಾಖೆಯಲ್ಲಿ ಕೆಲಸ ‌ಕೊಡಿಸುವುದಾಗಿ ನಂಬಿಸಿ ಇಲಾಖೆಯ ನೌಕರನೊಬ್ಬ ಮಹಿಳೆ ಮೇಲೆ ಲೈಂಗಿಕ ದೌರ್ಜನ್ಯಕ್ಕೆ ಮುಂದಾಗಿ ಪೊಲೀಸರ ಕೈಗೆ ಸಿಕ್ಕಿ ಬಿದ್ದಿದ್ದಾನೆ. ನದೀಂ ಎಂಬಾತನನ್ನು ಕೇಶ್ವಾಪುರ ಠಾಣೆ ಪೊಲೀಸರು ಬಂಧಿಸಿದ್ದಾರೆ. ನದೀಂ ನೈಋತ್ಯ ರೈಲ್ವೆಯ ಮುಖ್ಯ ಕಚೇರಿಯ ಆರ್ಥಿಕ ವಿಭಾಗದಲ್ಲಿ ಕ್ಲರ್ಕ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾನೆ. ತನಗೆ ರೈಲ್ವೆ ನೇಮಕಾತಿ ವಿಭಾಗದಲ್ಲಿ ಪರಿಚಿತರಿದ್ದಾರೆ. ಕೆಲಸ ಕೊಡಿಸುವೆ, ಅದಕ್ಕಾಗಿ ಹಣ ಕೊಡುವಂತೆ ಹೇಳಿದ್ದಾನೆ. ಕೊಡಲು ಆಗದಿದ್ದರೆ ನಮ್ಮ ಹಿರಿಯ ಅಧಿಕಾರಿಗಳನ್ನು …

Read More »

ಬಿಜೆಪಿಯವರು ‘ಆಪರೇಷನ್ ಕಮಲ’ ಮಾಡಲು ಯತ್ನಿಸಿದ್ದರು : ಹೊಸ ಬಾಂಬ್ ಸಿಡಿಸಿದ ಸಚಿವ ಬೋಸರಾಜ್!

ಹುಬ್ಬಳ್ಳಿ : ಕಳೆದ ಕೆಲವು ದಿನಗಳ ಹಿಂದೆ ಮಂಡ್ಯ ಕಾಂಗ್ರೆಸ್ ಶಾಸಕ ಗಣಿಗ ರವಿಕುಮಾರ್ ಅವರು ಬಿಜೆಪಿ ಅವರು ಕಾಂಗ್ರೆಸ್ ಶಾಸಕರಿಗೆ 100 ಕೋಟಿ ಆಫರ್ ನೀಡಿ ಖರೀದಿಸುತ್ತಿದ್ದಾರೆ ಎಂದು ಸ್ಪೋಟಕ ವಾದಂತಹ ಆರೋಪ ಮಾಡಿದ್ದರು. ಇದಾದ ಬಳಿಕ ಇದೀಗ ಸಚಿವ ಎನ್.ಎಸ್ ಬೋಸರಾಜ್ ಅವರು, ನಮ್ಮ ಪಕ್ಷದ 9 ಜನರನ್ನು ಸಂಪರ್ಕಿಸಿದ್ದು, ಈ ಮೂಲಕ ಬಿಜೆಪಿ ಆಪರೇಷನ್ ಕಮಲಕ್ಕೆ ಯತ್ನಿಸಿದೆ ಎಂದು ಹೊಸ ಬಾಂಬ್ ಸಿಡಿಸಿದ್ದಾರೆ.   ಹುಬ್ಬಳ್ಳಿಯಲ್ಲಿ …

Read More »

ಗೌರಿ-ಗಣೇಶ ಹಬ್ಬಕ್ಕೆ ಮಾರ್ಗಸೂಚಿ ಬಿಡುಗಡೆ: ಅಂಶಗಳು

ಹುಬ್ಬಳ್ಳಿ, ಸೆಪ್ಟಂಬರ್ 03: ಕರ್ನಾಟಕ ರಾಜ್ಯಾದ್ಯಂತ ಗಣೇಶೋತ್ಸವ ಆಚರಣೆಗೆ ಸಕಲ ಸಿದ್ಧತೆಗಳು ಆರಂಭಗೊಂಡಿವೆ. ಮಾರುಕಟ್ಟೆಯಲ್ಲಿ ಖರೀದಿ ಜೋರಾಗಿದೆ. ವಿಜೃಂಭಣೆಯ ಸಂಭ್ರಮಾಚರಣೆಗೆ ಸಜ್ಜಾಗಿರುವ ಛೋಟಾ ಮುಂಬೈ ಹುಬ್ಬಳ್ಳಿ ಮಂದಿಗೆ ‘ಹುಬ್ಬಳ್ಳಿ ವಿದ್ಯುತ್ ಸರಬರಾಜು ಕಂಪನಿ ನಿಯಮಿತ’ (ಹೆಸ್ಕಾಂ) ಮಾರ್ಗ ಸೂಚಿ ಹೊರಡಿಸಿದೆ. ಮುಂಜಾಗೃತೆಗಾಗಿ ಗಣೇಶ ಮಂಡಳಿಗಳಿಗೆ ಸೂಚನೆ ನೀಡಿದೆ. ಹೌದು, ಹುಬ್ಬಳ್ಳಿ ವ್ಯಾಪ್ತಿಯಲ್ಲಿ ಸಾರ್ವಜನಿಕ ಗಣಪತಿ ಪ್ರತಿಷ್ಠಾಪನೆ ಸಂದರ್ಭದಲ್ಲಿ ಕೈಗೊಳ್ಳಬೇಕಾದ ಮಾರ್ಗಸೂಚಿಗಳನ್ನು ಹೆಸ್ಕಾಂ ಮಂಗಳವಾರ ಹೊರಡಿಸಿದೆ. ಹುಬ್ಬಳ್ಳಿ ಗ್ರಾಮೀಣ ವಿಭಾಗದ ಕಾರ್ಯನಿರ್ವಾಹಕ …

Read More »

ರಾಜ್ಯ ಸರ್ಕಾರದಿಂದ ಬಾರದ ಅನುದಾನ: ತಿಂಗಳಿಗೆ ₹2.09 ಕೋಟಿ ನಷ್ಟ

ಹುಬ್ಬಳ್ಳಿ: ಹುಬ್ಬಳ್ಳಿ-ಧಾರವಾಡ ನಡುವೆ ಓಡಾಡುವ ಪ್ರಯಾಣಿಕರಿಗಾಗಿ ರಾಜ್ಯದಲ್ಲಿ ಮೊದಲ ಬಾರಿ ಪರಿಚಯಿಸಲಾದ ತ್ವರಿತ ಬಸ್‌ ಸಾರಿಗೆ ವ್ಯವಸ್ಥೆಯು (ಬಿಆರ್‌ಟಿಎಸ್‌) ಪ್ರತಿ ತಿಂಗಳು ₹2.09 ಕೋಟಿ ನಷ್ಟ ಎದುರಿಸುತ್ತಿದೆ. 2018ರಲ್ಲಿ ಆರಂಭಿಸಲಾದ ಈ ಯೋಜನೆಯಡಿ ಅತಿ ಕಡಿಮೆ ಖರ್ಚಿನಲ್ಲಿ, ಹವಾನಿಯಂತ್ರಿತ ಬಸ್‌ಗಳಲ್ಲಿ ಸಾರ್ವಜನಿಕರು ಪ್ರಯಾಣಿಸಲು ಅವಕಾಶ ಕಲ್ಪಿಸಲಾಯಿತು. ಪ್ರತಿ ದಿನ ಅವಳಿ ನಗರದ ನಡುವೆ 82 ಸಾವಿರ ಮಂದಿ ಪ್ರಯಾಣಿಸುತ್ತಾರೆ. 22 ಕಿ.ಮೀ ಉದ್ದದ ಕಾರಿಡಾರ್‌ನಲ್ಲಿ ವಿಶೇಷ ವಿನ್ಯಾಸದ 32 ನಿಲ್ದಾಣಗಳಿದ್ದು, 100 …

Read More »

ನವೀಕರಣವಾಗದ ಲೀಸ್‌ ಆಸ್ತಿಯಿಂದ ನಷ್ಟ

ಹುಬ್ಬಳ್ಳಿ: ಲೀಸ್‌ಗೆ ನೀಡಿರುವ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ಆಸ್ತಿಗಳ ನವೀಕರಣವಾಗದ ಕಾರಣ ಪಾಲಿಕೆಗೆ ಪ್ರತಿ ವರ್ಷ ₹50 ಕೋಟಿಯಿಂದ ₹100 ಕೋಟಿವರೆಗೆ ನಷ್ಟವಾಗುತ್ತಿದೆ. ಮಹಾನಗರ ಪಾಲಿಕೆಯ ₹2,744 ಆಸ್ತಿಗಳನ್ನು ಲೀಸ್‌ಗೆ ನೀಡಲಾಗಿದೆ. ಸ್ವಾತಂತ್ರ್ಯಪೂರ್ವ ಮತ್ತು ನಂತರದಿಂದ ಒಂದು ವರ್ಷದ ಅವಧಿಯಿಂದ 999 ವರ್ಷಗಳ ಅವಧಿಗೆ ಲೀಸ್‌ಗೆ ನೀಡಿರುವ ಆಸ್ತಿಗಳು ಅದರಲ್ಲಿವೆ.   ಕೆಲವರಿಗೆ 50 ಚದರ ಅಡಿ ಆಸ್ತಿಯನ್ನು ಸಹ ಲೀಸ್ ನೀಡಲಾಗಿದೆ. ರಸ್ತೆ ನಿರ್ಮಾಣ ಕಾಮಗಾರಿಗೆ ಕೆಲವು ಆಸ್ತಿಗಳು …

Read More »

ಆರೋಗ್ಯಯುತ ಜೀವನಕ್ಕೆ ಕ್ರೀಡೆ ಅಗತ್ಯ

ಧಾರವಾಡ: ‘ಕ್ರೀಡಾಸಕ್ತ ಮಕ್ಕಳನ್ನು ಗುರುತಿಸಿ ಅವರಿಗೆ ಪ್ರೋತ್ಸಾಹ ನೀಡಬೇಕು. ಆರೋಗ್ಯಯುತ ಜೀವನಕ್ಕೆ ಕ್ರೀಡಾ ಚಟುವಟಿಕೆಗಳು ಅಗತ್ಯ’ ಎಂದು ಕರ್ನಾಟಕ ಬಾಲ ವಿಕಾಸ ಅಕಾಡೆಮಿ ಅಧ್ಯಕ್ಷ ಸಂಗಮೇಶ ಬಬಲೇಶ್ವರ ಹೇಳಿದರು. ನಗರದ ಆರ್.ಎನ್.ಶೆಟ್ಟಿ ಕ್ರೀಡಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಹಾಗೂ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ವತಿಯಿಂದ ಗುರುವಾರ ಏರ್ಪಡಿಸಿದ್ದ ರಾಷ್ಟ್ರೀಯ ಕ್ರೀಡಾ ದಿನಾಚರಣೆಯಲ್ಲಿ ಅವರು ಮಾತನಾಡಿದರು.   ‘ಹಾಕಿ ಆಟಗಾರ ಧ್ಯಾನ್‌ಚಂದ್ ಅವರ ಜನ್ಮದಿನವನ್ನು ರಾಷ್ಟ್ರೀಯ ಕ್ರೀಡಾದಿನವಾಗಿ ಆಚ‌ರಿಸಲಾಗುತ್ತದೆ. ಅವರ …

Read More »

‘ಭಕ್ತಿ ಸಮರ್ಪಣೆಗೆ ಇಷ್ಟಲಿಂಗ ಪೂಜೆ’

ಧಾರವಾಡ: ‘ಪರಮಾತ್ಮನ ಆರಾಧನೆಗೆ ಇಷ್ಟಲಿಂಗ ಪೂಜೆ ಅವಶ್ಯ’ ಎಂದು ಮುಂಡಗೋಡದ ಅತ್ತಿವೇರಿ ಬಸವಧಾಮದ ಬಸವೇಶ್ವರಿ ಮಾತಾಜಿ ಹೇಳಿದರು. ನಗರದ ಉಳವಿ ಚನ್ನಬಸವೇಶ್ವರ ದೇವಸ್ಥಾನದಲ್ಲಿ ಶ್ರಾವಣ ಮಾಸದ ಅಂಗವಾಗಿ ಬಸವೇಶ್ವರ ಧರ್ಮ ಫಂಡ ವತಿಯಿಂದ ಗುರುವಾರ ಏರ್ಪಡಿಸಿದ್ದ ಇಷ್ಟಲಿಂಗ ಪೂಜೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.   ‘ಇಷ್ಟಲಿಂಗ ಪೂಜೆ ಮಾಡಲು ಜಾತಿ, ಮತ, ಪಂಥ, ಭೇದ ಇಲ್ಲ. ಇದು ದೇವರಿಗೆ ಭಕ್ತಿ ಸಮರ್ಪಿಸುವ ವಿಧಾನ’ ಎಂದರು. ಬಸವೇಶ್ವರ ಧರ್ಮ ಫಂಡ ಅಧ್ಯಕ್ಷ ಎಸ್.ಆರ್. …

Read More »

ಧಾರವಾಡ ಕೇಂದ್ರ ಕಾರಾಗೃಹಕ್ಕೆ ಶಿಫ್ಟ್ ಆದ ಧನರಾಜ್

ಧಾರವಾಡ: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ (Renukaswamy case) ಪ್ರಕರಣದ A9 ಆರೋಪಿ ಧನರಾಜ್‌ ನನ್ನು ಬೆಂಗಳೂರು ಪರಪ್ಪನ ಅಗ್ರಹಾರದಿಂದ ಧಾರವಾಡದ ಕೇಂದ್ರ ಕಾರಾಗೃಹಕ್ಕೆ ಬುಧವಾರ ಶಿಫ್ಟ್ ಮಾಡಲಾಗಿದೆ. ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲು ಪಾಲಾಗಿದ್ದ ನಟ ದರ್ಶನ್ ಅವರಿಗೆ ರಾಜಾತಿಥ್ಯ ನೀಡಿದ ಪ್ರಕರಣ ಬೆಳಕಿಗೆ ಬಂದ ನಂತರ ದರ್ಶನ್ ಸೇರಿ ಆ ತಂಡದ ಮೂವರನ್ನು ಹೊರತುಪಡಿಸಿ ಉಳಿದೆಲ್ಲಾ ಸದಸ್ಯರನ್ನು ರಾಜ್ಯದ ಬೇರೆ ಬೇರೆ ಜಿಲ್ಲೆಗಳ ಕಾರಾಗೃಹಕ್ಕೆ ಸ್ಥಳಾಂತರಿಸಲಾಗಿದೆ.   A9 …

Read More »

ಒಂದೇ ವರ್ಷದಲ್ಲಿ 1.67 ಲಕ್ಷ ಮಂದಿ ಸಾವು,ಮೃತಪಟ್ಟವರಲ್ಲಿ ಬೈಕ್‌ ಸವಾರರೇ ಹೆಚ್ಚು

ಹುಬ್ಬಳ್ಳಿ, ಆಗಸ್ಟ್ 28: ಹುಬ್ಬಳ್ಳಿ ಧಾರವಾಡ ಅವಳಿ ನಗರದಲ್ಲಿ ವ್ಯಾಪ್ತಿಯಲ್ಲಿ ಕಳೆದ ಒಂದೇ ವಾರದಲ್ಲಿ ಕೆಲವು ಕಡೆಗಳಲ್ಲಿ ರಸ್ತೆ ಅಪಘಾತಗಳು ಸಂಭವಿಸಿದೆ. ಈ ಪೈಕಿ ಮೊನ್ನೆ ಹುಬ್ಬಳ್ಳಿ ಗ್ರಾಮೀಣದ ಅಪಘಾತ ನಾಲ್ಕು ಹಾಗೂ ಇಂದು ಬುಧವಾರ ಜರುಗಿದ ಅಪಘಾತದಲ್ಲಿ ಒಬ್ಬರು ಮೃತಪಟ್ಟಿದ್ದಾರೆ. ಆರು ಮಂದಿಯ ಸ್ಥಿತಿ ಚಿಂತಜನಕವಾಗಿದೆ. ರಸ್ತೆಗಳ ಅಪಘಾತಗಳ ಕಡಿಮೆ ಮಾಡುವ ಉದ್ದೇಶದಿಂದ ಫಿಲ್ಡ್‌ಗೆ ಸಂಚಾರ ಮತ್ತು ಕಾನೂನು ಸುವ್ಯವಸ್ಥೆ ವಿಭಾಗದ ಎಡಿಜಿಪಿ ಅಲೋಕ್ ಕುಮಾರ್ ಇಳಿದಿದ್ದಾರೆ. ಬುಧವಾರ …

Read More »

ಸಿದ್ದರಾಮಯ್ಯ ಅವರ ಜನಪ್ರಿಯತೆ ಕುಗ್ಗಿಸಲು ಬಿಜೆಪಿ ಹುನ್ನಾರ.: ಸಂತೋಷ್ ಲಾಡ್

ಹುಬ್ಬಳ್ಳಿ: ಸದೃಢ ಸರಕಾರವನ್ನು ಬೀಳಿಸಬೇಕು ಎಂದು ಬಿಜೆಪಿ ನಾಯಕರು ಸಾಕಷ್ಟು ಯತ್ನಿಸಿದ್ದರು. ಇದಕ್ಕಾಗಿ ಶಾಸಕ ಖರೀದಿಗೂ ಮುಂದಾಗಿದ್ದರು‌. ಆದರೆ ಅದ್ಯಾವುದು ಕೈಗೂಡಲಿಲ್ಲ. ಇದರ ಭಾಗವೇ ರಾಜ್ಯಪಾಲರ ಮೂಲಕ ಮುಖ್ಯಮಂತ್ರಿಗಳ ವಿರುದ್ಧ ಪ್ರಾಸಿಕ್ಯೂಷನ್ ಗೆ ಅನುಮತಿ ಕೊಡಿಸಿರುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ಆರೋಪಿಸಿದರು ‌.   ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹೇಗಾದರೂ ಮಾಡಿ ಸರ್ಕಾರ ಕೆಡವಬೇಕು ಎನ್ನುವ ಉದ್ದೇಶ ಬಿಜೆಪಿಯವರು ಹೊಂದಿದ್ದಾರೆ. ಹಿಂದುಳಿದ ನಾಯಕ ಸಿದ್ದರಾಮಯ್ಯ ಅವರ ಮೇಲಿರುವ …

Read More »