Breaking News

ಹುಬ್ಬಳ್ಳಿ

ಹೆಸ್ಕಾಂ ನೂತನ ಎಂ.ಡಿಯಾಗಿ ವೈಶಾಲಿ

ಹುಬ್ಬಳ್ಳಿ : ಹುಬ್ಬಳ್ಳಿ ವಿದ್ಯುತ್ ಸರಬರಾಜು ಕಂಪನಿ ನಿಯಮಿತದ ( ಹೆಸ್ಕಾಂ) ನೂತನ ವ್ಯವಸ್ಥಾಪಕ ನಿರ್ದೇಶಕರಾಗಿ ವೈಶಾಲಿ ಎಂ.ಎಲ್ (ಐಎಎಸ್) ಗುರುವಾರ ಅಧಿಕಾರ ವಹಿಸಿಕೊಂಡರು. ಈ ಹಿಂದಿನ ಹೆಸ್ಕಾಂ ವ್ಯವಸ್ಥಾಪಕ ನಿರ್ದೇಶಕರಾಗಿದ್ದ ಮೊಹಮ್ಮದ್ ರೋ‍‍ಷನ್ ( ಐಎಎಸ್) ಅವರು ಬೆಳಗಾವಿ ಜಿಲ್ಲೆಯ ಜಿಲ್ಲಾಧಿಕಾರಿಯಾಗಿ ವರ್ಗಾವಣೆ ಹೊಂದಿದ್ದರು.ಈ ಹಿನ್ನೆಲೆ ತೆರವಾಗಿದ್ದ ಎಂ.ಡಿ ಹುದ್ದೆಗೆ ವೈಶಾಲಿ ಎಂ.ಎಲ್ ಅವರನ್ನು ನೇಮಿಸಿ ಸರಕಾರ ಆದೇಶ ಹೊರಡಿಸಿದೆ. ಇವರು ಗದಗ ಜಿಲ್ಲೆಯ ಜಿಲ್ಲಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿದ್ದಾರೆ.

Read More »

ಕನ್ನಡಮ್ಮ ಮಡಿಲಿಗೆ ಪಾಪು‌ ಪ್ರಶಸ್ತಿ

ಧಾರವಾಡ : ಪಾಟೀಲ್ ಪುಟ್ಟಪ್ಪನವರ ಪತ್ರಿಕೋದ್ಯಮದಲ್ಲಿ ಕನ್ನಡದ ಯೋಧರು. ಅವರ ಹೆಸರಿನಲ್ಲಿ ‌ನೀಡುವ ಪ್ರಶಸ್ತಿಯನ್ನು ಕನ್ನಡಮ್ಮ ದಿನಪತ್ರಿಕೆಗೆ ಕೊಡುತ್ತಿರುವುದು‌‌‌ ಅಭಿಮಾನದ ಸಂಗತಿ ಎಂದು ಉನ್ನತ ಶಿಕ್ಷಣ ಅಕಾಡೆಮಿ ವಿಶ್ರಾಂತ ನಿರ್ದೇಶಕ ಡಾ. ಎಂ.ಎಸ್.ಶಿವಪ್ರಸಾದ ಹೇಳಿದರು. ಭಾನುವಾರ ಕರ್ನಾಟಕ ವಿಧ್ಯಾವರ್ಧಕ ಸಂಘದ 135ನೇ ಸಂಸ್ಥಾಪನಾ ದಿನಾಚರಣೆಯ ಅಂಗವಾಗಿ ಕನ್ನಡದ ಪ್ರಪಂಚ ನಾಡೋಜ ಡಾ. ಪಾಟೀಲ್ ಪುಟ್ಟಪ್ಪನವರ ಸವಿ ನೆನಪಿನಲ್ಲಿ ಕೊಡಮಾಡುವ ಡಾ. ಪಾಟೀಲ್ ಪುಟ್ಟಪ್ಪನವರ ಪ್ರಶಸ್ತಿಯನ್ನು ಕನ್ನಡಮ್ಮ ದಿನಪತ್ರಿಕೆಯ ಸಂಪಾದಕ ರಾಜಕುಮಾರ ಟೋಪಣ್ಣವರ …

Read More »

ಮರಕ್ಕೆ ಡಿಕ್ಕಿ ಹೊಡೆದ ಸರ್ಕಾರಿ ಬಸ್: ಚಾಲಕನ ಎರಡೂ ಕಾಲು ಕಟ್

ಧಾರವಾಡ: ಸರ್ಕಾರಿ ಬಸ್ ವೊಂದು ಚಾಲಕನ ನಿಯಂತ್ರಣ ತಪ್ಪಿ ಮರಕ್ಕೆ ಡಿಕ್ಕಿ ಹೊಡೆದ ಪರಿಣಾಮ ಚಾಲಕನ ಎರಡೂ ಕಾಲು ಕಟ್ ಆಗಿದ್ದು, ಅಪಘಾತದಲ್ಲಿ ನಾಲ್ವರು ಪ್ರಯಾಣಿಕರ ಸ್ಥಿತಿ ಗಂಭೀರವಾಗಿರುವ ಘಟನೆ ಹುಬ್ಬಳ್ಳಿ-ಧಾರವಾಡ ಜಿಲ್ಲೆಯ ಕಲಘಟಗಿ ತಾಲೂಕಿನಲ್ಲಿ ನಡೆದಿದೆ. ಕಲಘಟಗಿಯ ರಾಮನಾಳ ಕ್ರಾಸ್ ಬಳಿ ಬಸ್ ಅಪಘಾತಕ್ಕೀಡಾಗಿದೆ. ದುರಂತದಲ್ಲಿ ಬಸ್ ಚಾಲಕನ ಎರಡೂ ಕಾಲುಗಳು ಕಟ್ ಆಗಿದ್ದು, ನಾಲ್ವರು ಪ್ರಯಾಣಿಕರು ಗಂಭೀರವಾಗಿ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಹುಬ್ಬಳ್ಳಿಯಿಂದ ಕುಮಟಾಗೆ …

Read More »

ನಕಲಿ ಖಾತೆ ತೆರೆದು ಬ್ಯಾಂಕ್ ಗಳಲ್ಲಿ ಅವ್ಯವಹಾರ: ಮೂವರು ಆರೋಪಿಗಳು ಅರೆಸ್ಟ್

ಹುಬ್ಬಳ್ಳಿ: ವಿವಿಧ ಬ್ಯಾಂಕ್ ಗಳಲ್ಲಿ ನಕಲಿ ಖಾತೆ ತೆರೆದು ಅವ್ಯವಹಾರ ನಡೆಸುತ್ತಿದ್ದ ಮೂವರು ಆರೋಪಿಗಳನ್ನು ಹುಬ್ಬಳ್ಳಿ ಸೈಬರ್ ಕ್ರೈಂ ಪೊಲೀಸರು ಬಂಧಿಸಿದ್ದಾರೆ. ಆರೋಪಿಗಳು ದೇಶದ ವಿವಿಧ ರಾಜ್ಯಗಳ ಬ್ಯಾಂಕ್ ಗಳಲ್ಲಿ ನಕಲಿ ಖಾತೆ ತೆರೆದು ಅವ್ಯವಹಾರ ನಡೆಸುತ್ತಿದ್ದರು. ಇದೀಗ ಮೂವರು ಆರೋಪಿಗಳನ್ನು ಬಂಧಿಸಲಾಗಿದೆ. ಬಂಧಿತರನ್ನು ದೆಹಲಿ ಮೂಲದ ನಿಖಿಲ್ ಕುಮಾರ್ ರೌನಿ, ಸಚಿನ್ ಬೋಲಾ, ಮುಂಬೈ ಮೂಲದ ನಿಗಮ್ ಎಂದು ಗುರುತಿಸಲಾಗಿದೆ. ಬಂಧಿತ ಅರೋಪಿಗಳಲ್ಲಿ ಇಬ್ಬರು ಸಪಹ್ಟ್ ವೇರ್ ಇಂಜಿನಿಯರ್ ಗಳಾಗಿದ್ದು, …

Read More »

ಧಾರವಾಡ | ಮಹಿಳಾ ಕಾಲೇಜು ಕಟ್ಟಡ ಕಾಮಗಾರಿಗೆ ಮೀನಮೇಷ: ಸೋರುವ ಕೊಠಡಿಗಳಲ್ಲೇ ಪಾಠ

ಧಾರವಾಡ: ನಗರದ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿಗೆ ಕಟ್ಟಡ ನಿರ್ಮಾಣಕ್ಕೆ ಅನುದಾನ, ಜಾಗ ಮಂಜೂರಾದರೂ ಕಾಮಗಾರಿ ಆರಂಭವಾಗಿಲ್ಲ. ಶಿಥಿಲಸ್ಥಿತಿಗೆ ತಲುಪಿರುವ ಸೋರುವ ಕಟ್ಟಡದಲ್ಲಿಯೇ ವಿದ್ಯಾರ್ಥಿನಿಯರು ಪಾಠ ಕೇಳುವ ಸ್ಥಿತಿ ಇದೆ. ಆರ್‌.ಎನ್‌. ಶೆಟ್ಟಿ ಕ್ರೀಡಾಂಗಣದ ಮುಂಭಾಗದ ಇಎಲ್‌ಟಿಸಿ (ಇಂಗ್ಲಿಷ್‌ ಲಾಂಗ್ವೆಜ್‌ ಲರ್ನಿಂಗ್‌ ಕೋರ್ಸ್‌ ಫಾರ್‌ ಟೀಚರ‍್ಸ್‌) ಕಟ್ಟಡದಲ್ಲಿ ಈ ಕಾಲೇಜು ಇದೆ. ಕಾಲೇಜು ಆರಂಭವಾಗಿ ದಶಕ ಕಳೆದರೂ ಸ್ವಂತ ಕಟ್ಟಡ ಇಲ್ಲ, ಶಿಥಿಲವಾಗಿರುವ ಕಟ್ಟಡವೇ ಗತಿಯಾಗಿದೆ. ಕಳೆದ ವರ್ಷ ಮಳೆಗಾಲದಲ್ಲಿ …

Read More »

KSRTC ಬಸ್​ ಚಾಲಕನ ರೀಲ್ಸ್​ ಶೋಕಿಗೆ ಎತ್ತುಗಳು ಬಲಿ, ರೈತನ ಸ್ಥಿತಿ ಗಂಭೀರ

ಹುಬ್ಬಳ್ಳಿ: ಇತ್ತೀಚಿನ ವರ್ಷಗಳಲ್ಲಿ ಜನರ ರೀಲ್ಸ್​ ಹುಚ್ಚಾಟಕ್ಕೆ ಅಮೂಲ್ಯ ಜೀವಗಳು ಬಲಿಯಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗುವ ಭರದಲ್ಲಿ ಒಂದಿಲ್ಲೊಂದು ಕೆಲಸಕ್ಕೆ ಕೈ ಹಾಕಿ ಜನರು ಇನ್ನಿಲ್ಲದ ಪೇಚಿಗೆ ಸಿಲುಕುತ್ತಾರೆ. ಇದೀಗ ಹುಬ್ಬಳ್ಳಿಯಲ್ಲಿ KSRTC ಚಾಲಕನೋರ್ವ ಬಸ್​ ಚಾಲನೆ ವೇಳೆ ರೀಲ್ಸ್​ ಮಾಡಲು ಹೋಗಿ ಎರಡು ಎತ್ತು ಹಾಗೂ ರೈತನ ಜೀವಕ್ಕೆ ಕುತ್ತು ತಂದಿರುವ ಘಟನೆ ಹುಬ್ಬಳ್ಳಿ ತಾಲೂಕಿನ ಕುಸುಗಲ್ ಬಳಿ ನಡೆದಿದೆ.   ಸರ್ಕಾರಿ ಬಸ್ ಚಾಲಕನ ರೀಲ್ಸ್ ಹುಚ್ಚಾಟಕ್ಕೆ …

Read More »

ಆತ್ಮಹತ್ಯೆಗೆ ಮುಂದಾಗಿದ್ದ ವ್ಯಕ್ತಿಯ ಜೀವ ಉಳಿಸಿದ ಪೊಲೀಸರು

ಹುಬ್ಬಳ್ಳಿ,ಜು.14- ಧಾರವಾಡ ಜಿಲ್ಲೆಯ ಕಲಘಟಗಿ ತಾಲೂಕಿನ ನೆಲ್ಲಿಹರವಿ ಗ್ರಾಮದಲ್ಲಿ ಆತಹತ್ಯೆಗೆ ಮುಂದಾಗಿದ್ದ ವ್ಯಕ್ತಿಯನ್ನು ಉಳಿಸಿ ಕಲಘಟಗಿ ಪೊಲೀಸರು ಮಾನವೀಯತೆ ಮೆರೆದಿದ್ದಾರೆ. ತಾಲ್ಲೂಕಿನ ನೆಲ್ಲಿಹರವಿ ಗ್ರಾಮದ ಶಂಭುಲಿಂಗಯ್ಯ ಹುಲಸೋಗಿ ಕುಡಿದ ಮತ್ತಿನಲ್ಲಿ ನೇಣಿ ಹಾಕಿಕೊಳ್ಳಲು ಮುಂದಾಗಿದ್ದ,ಮನೆಯಲ್ಲಿ ನೇಣು ಬಿಗಿದು ಆತಹತ್ಯೆ ಮಾಡಿಕೊಳ್ಳುತ್ತಿದ್ದಾಗ ಏಕಾಏಕಿ 112ಗೆ ಕರೆ ಬಂದ ಹಿನ್ನಲೆ ಅಲರ್ಟ್ ಆದ ಪೊಲೀಸ್ ಸಿಬ್ಬಂದಿ ಗಣೇಶ್ ಹಾಗೂ ಸಂಗನಗೌಡರ ಅವರು ಸ್ಥಳಕ್ಕೆ ದೌಡಾಯಿಸಿ ನೇಣಿಗೆ ಕೊರಳೊಡ್ಡಿದ ಶಂಭುಲಿಂಗಯ್ಯ ಪ್ರಾಣ ಉಳಿಸಿದ್ದಾರೆ. ಸದ್ಯ ಕಲಘಟಗಿ …

Read More »

ಸಿದ್ದರಾಮಯ್ಯ ಸರ್ಕಾರ ಪರಮ ಕಡು ಭ್ರಷ್ಟ ಸರ್ಕಾರ: ಪ್ರಲ್ಹಾದ್ ಜೋಶಿ

ಹುಬ್ಬಳ್ಳಿ: ಒಂದೂವರೆ ವರ್ಷದಲ್ಲಿ ಸರ್ಕಾರ ಹಾಗೂ ರಾಹುಲ್ ಗಾಂಧಿ, ಇನ್ನಿತರ ನಾಯಕರಿಂದ ಭಯಂಕರ ಭ್ರಷ್ಟಾಚಾರ ಶುರುವಾಗಿದೆ ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಗಂಭೀರ ಆರೋಪ ಮಾಡಿದರು. ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯ ಸರ್ಕಾರ‌ ಸಾವಿರಾರು ಕೋಟಿ ರೂ. ಸಂಗ್ರಹ ಮಾಡಿ ತೆಲಂಗಾಣಕ್ಕೆ ಕೊಟ್ಟಿದೆ ಎಂದಾಗ ಕಾಂಗ್ರೆಸ್ ನಾಯಕರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದರು. ವಾಲ್ಮೀಕಿ ಅಭಿವೃದ್ಧಿ ನಿಗಮದ ಹಣ ನೂರಾರು ಜನರಿಗೆ ವರ್ಗಾವಣೆ ಮಾಡಿದ್ದಾರೆ. ನಿನ್ನೆ ಬೆಂಗಳೂರಿನಲ್ಲಿ ಕೆಲ …

Read More »

ಹುಬ್ಬಳ್ಳಿ | ನಗರಲ್ಲೊಂದು ಹಳ್ಳಿ ಸೊಗಡು

ಹುಬ್ಬಳ್ಳಿ: ನೋಡಲಷ್ಟೇ ಪುಟ್ಟ ಪುಟ್ಟ ಮನೆಗಳು. ಒಳ ಪ್ರವೇಶಿಸಿದರೆ ವಿಶಾಲ ಪಡಶಾಲೆ, ಅದಕ್ಕೆ ಹೊಂದಿಕೊಂಡು ಅಷ್ಟೇ ದೊಡ್ಡ ಕೊಟ್ಟಿಗೆಗಳು. ನೂರಾರು ದನ-ಕರುಗಳ ಜೊತೆಗೆ, ಆಡು-ಮೇಕೆಗಳ ಸಹ ಜೀವನ… ಇದು ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ವ್ಯಾಪ್ತಿಗೆ ಒಳಪಟ್ಟ ಗೋಪನಕೊಪ್ಪ ಗ್ರಾಮದ ಸಿದ್ದರಾಮೇಶ್ವರ ಬಡಾವಣೆಯ ಹಳ್ಳಿ ಸೊಗಡು. ಹೇಳಿಕೊಳ್ಳಲಷ್ಟೇ ಕಂದಾಯ ಗ್ರಾಮವಾಗಿ, ನಗರ ಪ್ರದೇಶ ಎಂದು ಗುರುತಿಸಿಕೊಂಡಿದೆ. ಆದರೆ, ಜನರ ಜೀವನಶೈಲಿ, ಆಚಾರ-ವಿಚಾರಗಳೆಲ್ಲ ಈಗಲೂ ಪುಟ್ಟ ಗ್ರಾಮೀಣ ಪ್ರದೇಶದಂತಿದೆ. ಮನೆ ಎದುರಿಗೆ ಇರುವ …

Read More »

ಹುಬ್ಬಳ್ಳಿ: ಆಗದ ವಲಯ ವರ್ಗಾವಣೆ; ಶಿಕ್ಷಕರಿಗೆ ನಿರಾಸೆ

ಹುಬ್ಬಳ್ಳಿ: ವಲಯ ವರ್ಗಾವಣೆ ನಡೆಸದಿರಲು ಶಾಲಾ ಶಿಕ್ಷಣ ಇಲಾಖೆ ನಿರ್ಧರಿಸಿರುವುದು ಬಹುತೇಕ ಶಿಕ್ಷಕರಲ್ಲಿ ನಿರಾಸೆ ಮೂಡಿಸಿದೆ. ಗ್ರಾಮೀಣ ಭಾಗದಿಂದ ನಗರ ಪ್ರದೇಶಕ್ಕೆ ವರ್ಗಾವಣೆ ಆಗುವ ಅವರ ನಿರೀಕ್ಷೆ ಹುಸಿಯಾಗಿದೆ. ಕರ್ನಾಟಕ ಶಿಕ್ಷಕರ ವರ್ಗಾವಣೆ ಮತ್ತು ನಿಯಂತ್ರಣ ಕಾಯ್ದೆ (ತಿದ್ದುಪಡಿ)-2022ರ ಪ್ರಕಾರ, ಹೆಚ್ಚುವರಿ ವರ್ಗಾವಣೆ ನಂತರದ ವರ್ಷದಲ್ಲಿ ವಲಯ (ಕಡ್ಡಾಯ) ವರ್ಗಾವಣೆ ಮಾಡಬೇಕು. ಈ ಪ್ರಕ್ರಿಯೆಯಲ್ಲಿ 10 ವರ್ಷಕ್ಕೂ ಹೆಚ್ಚು ಸಮಯದಿಂದ ನಗರ ಪ್ರದೇಶದಲ್ಲಿ (ಎ-ವಲಯ) ಕೆಲಸ ಮಾಡುತ್ತಿರುವ ಶಿಕ್ಷಕರನ್ನು ಗ್ರಾಮೀಣ (ಸಿ-ವಲಯ) …

Read More »