Breaking News

ರಾಷ್ಟ್ರೀಯ

ನರೇಂದ್ರ ಮೋದಿ ಸರಕಾರ ಬಡವರ ವಿರೋಧಿ ಸರಕಾರ ಎನ್ನುವುದನ್ನು ಈ ಬಜೆಟ್ ಮತ್ತೊಮ್ಮೆ ಸಾಬೀತು: ಲಕ್ಷ್ಮಿ ಹೆಬ್ಬಾಳಕರ್

ಬೆಳಗಾವಿ – ಕೇಂದ್ರ ಸರಕಾರ ಸೋಮವಾರ ಮಂಡಿಸಿರುವ ಬಜೆಟ್ ಬಡವರ ಬೆನ್ನಿಗೆ ಚಿನ್ನದ ಚೂರಿ ಹಾಕಿದಂತಿದೆ ಎಂದು ಶಾಸಕಿ, ಕೆಪಿಸಿಸಿ ವಕ್ತಾರೆ ಲಕ್ಷ್ಮಿ ಹೆಬ್ಬಾಳಕರ್ ಪ್ರತಿಕ್ರಿಯಿಸಿದ್ದಾರೆ. ಬಡವರು ಬಳಸುವ ಬಹುತೇಕ ಉತ್ಪನ್ನಗಳ ಮೇಲೆ ಸೆಸ್ ವಿಧಿಸಲಾಗಿದೆ. ಕೊರೋನಾದಿಂದ ಕಂಗೆಟ್ಟಿರುವ ರೈತರು, ಜನಸಾಮಾನ್ಯರಿಗೆ ವಿಶೇಷ ಪ್ಯಾಕೇಜ್ ಏನನ್ನಾದರೂ ಘೋಷಿಸಬಹುದು. ಮುಳುಗಿರುವ ಬಡವರನ್ನು ಮೇಲೆತ್ತುವ ಯೋಜನೆ ಜಾರಿಗೊಳಿಸಬಹುದು ಎನ್ನುವ ನಿರೀಕ್ಷೆ ಇತ್ತು. ಆದರೆ ಈ ಹಿಂದೆ ಘೋಷಿಸಿದ್ದ 20 ಲಕ್ಷ ರೂ. ಕೃಷಿ …

Read More »

ಆರ್ಥಿಕತೆಗೆ ಚೈತನ್ಯ ತುಂಬುವ ಬಜೆಟ್ : ಬಾಲಚಂದ್ರ ಜಾರಕಿಹೊಳಿ

ಗೋಕಾಕ : ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಮಂಡಿಸಿರುವ ಕೇಂದ್ರ ಬಜೆಟ್ ಬಗ್ಗೆ ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಅವರು ಪ್ರಶಂಸೆ ವ್ಯಕ್ತಪಡಿಸಿದ್ದು, ಸಮಾಜದ ಪ್ರತಿಯೊಬ್ಬರಿಗೂ ಈ ಬಜೆಟ್ ಸಹಕಾರಿಯಾಗಿದೆ ಎಂದು ಶ್ಲಾಘಿಸಿದ್ದಾರೆ. ಕೃಷಿ ಹಾಗೂ ರೈತರನ್ನು ಗಮನದಲ್ಲಿಟ್ಟುಕೊಂಡು ಬಜೆಟ್ ಮಂಡಿಸಲಾಗಿದೆ. ಎಲ್ಲ ನಾಗರೀಕರಿಗೂ ಅನುಕೂಲವಾಗುವ ನಿಟ್ಟಿನಲ್ಲಿ ಜನಪರ ಹಾಗೂ ರೈತಪರ ಬಜೆಟ್ ಇದಾಗಿದೆ ಎಂದು ಅವರು ಹೇಳಿದ್ದಾರೆ. ಆರ್ಥಿಕತೆಗೆ ಚೈತನ್ಯ ತುಂಬಲು ಇನ್ನೂ ಎರಡು ಆತ್ಮನಿರ್ಭರ ಪ್ಯಾಕೇಜ್ ಘೋಷಿಸಲಾಗಿದೆ. …

Read More »

“ಆತ್ಮ ಬರ್ಬಾದ್” ಬಜೆಟ್ ಘೋಷಿಸಿದ್ದಾರೆ ನಿರ್ಮಲಾ : ಸಿದ್ದರಾಮಯ್ಯ

ಬೆಂಗಳೂರು : ನಾನು ಬಜೆಟ್ ಬಗ್ಗೆ ಯಾವುದೇ ನಿರೀಕ್ಷೆ ಇಟ್ಟುಕೊಂಡಿರಲಿಲ್ಲ. ನಿರ್ಮಲಾ ಅವರು “ಆತ್ಮ ಬರ್ಬಾದ್” ಬಜೆಟ್ ಕೊಟ್ಟಿದ್ದಾರೆ ಎಂದು ವಿಧಾನ ಸಭೆ ವಿಪಕ್ಷ ನಾಯಕ ಸಿದ್ದರಾಮಯ್ಯ ಕೇಂದ್ರ ಬಟೆಜ್ ಬಗ್ಗೆ ತೀವ್ರ ಟೀಕೆ ಮಾಡಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಆರ್ಥಿಕ ಪರಿಸ್ಥಿತಿ ಅಧೋಗತಿಗೆ ಹೋಗಿದೆ ಅದನ್ನು ಚೇತರಿಕೆ ಹಾದಿಗೆ ತರುತ್ತಾರೆ ಎಂಬ ನಿರೀಕ್ಷೆ ಇತ್ತು ಅದು ಹುಸಿಯಾಗಿದೆ. ಬಹಳ ಜನರು ಕೊರೊನಾ ಲಾಕ್ ಡೌನ್ ನಿಂದ ಉದ್ಯೋಗ ಕಳೆದುಕೊಂಡಿದ್ದರು. …

Read More »

ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದ 684 ಮದ್ಯದ ಬಾಟಲ ವಶಕ್ಕೆ

ಬೆಳಗಾವಿ: ಬಸ್ ನಲ್ಲಿ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಬಂಧಿಸಿರುವ ಪೊಲೀಸರು 684 ಮದ್ಯದ ಬಾಟಲುಗಳನ್ನು ವಶಕ್ಕೆ ಪಡೆದಿರುವ ಘಟನೆ ಬೆಳಗಾವಿ ಜಿಲ್ಲೆ ಖಾನಾಪುರ ತಾಲೂಕಿನ ಕಣಕುಂಟ ಬಳಿ ನಡೆದಿದೆ. ಬೆಳಗಾವಿ ಉಪ ವಿಭಾಗ ಹಾಗೂ ತನಿಖಾ ಠಾಣೆಯ ಅಧಿಕಾರಿಗಳು ವಾಹನ ತಪಾಸಣೆ ನಡೆಸುತ್ತಿದ್ದ ವೇಳೆ ಬಿಳಿ ಬಣ್ಣದ ಅಶೋಕಾ ಲೈಲ್ಯಾಂಡ್ ಕಂಪನಿಯ ಎಸಿ ಬಸ್ ನಿಲ್ಲಿಸಿ ಪರಿಶೀಲಿಸಿದಾಗ ಅಕ್ರಮವಾಗಿ ಮದ್ಯ ಸಾಗಾಟ ಮಾಡುತ್ತಿರುವುದು ಗೊತ್ತಾಗಿದೆ. ಪ್ರಕರಣ …

Read More »

ಕಿಚ್ಚಾ ಸುದೀಪ ಅಭಿನಯದ ಕನ್ನಡ ಚಲನಚಿತ್ರ “ವಿಕ್ರಾಂತ ರೋಣಾ” ದ ಶಿರ್ಷೀಕೆ ದುಬೈನ ಬುರ್ಜ ಖಲಿಫಾದ ಮೇಲೆ ಬಿಡುಗಡೆ

ಗೋಕಾಕ: ಕಿಚ್ಚಾ ಸುದೀಪ ಅಭಿನಯದ ಕನ್ನಡ ಚಲನಚಿತ್ರ “ವಿಕ್ರಾಂತ ರೋಣಾ” ದ ಶಿರ್ಷೀಕೆ ಹಾಗೂ ಲಾಂಛನವನ್ನು ಜನೆವರಿ 31ರಂದು ದುಬೈನ ಬುರ್ಜ ಖಲಿಫಾದ ಮೇಲೆ ಬಿಡುಗಡೆ ಮಾಡುವ ಮೂಲಕ ವಿಶ್ವದಾಖಲೆ ಮಾಡಲಿದೆ. ಎರಡು ಸಾವಿರ ಅಡಿ ಎತ್ತರದ ನಟ ಕಿಚ್ಚಾ ಸುದೀಪ ಅವರ ಕಟೌಟನ್ನು ಈ ಕಟ್ಟಡದಲ್ಲಿ ಹಾಕುವ ಮೂಲಕ ಚಲನಚಿತ್ರ ರಂಗದಲ್ಲಿಯೇ ಅತೀ ಎತ್ತರದ ಕಟೌಟನಲ್ಲಿ ರಾರಾಜಿಸುವ ಕೀರ್ತಿಗೆ ಸುದೀಪ ಪಾತ್ರರಾಗುತ್ತಿದ್ದಾರೆ. ಈ ದೃಶ್ಯವನ್ನು ಭಾರತದಲ್ಲಿ ಜನೇವರಿ 31ರ …

Read More »

ದೆಹಲಿ ಗಡಿಯಲ್ಲಿ ಇಂಟರ್‌ನೆಟ್‌ ಸೇವೆ ಬಂದ್‌

ನವದೆಹಲಿ/ ಬೆಂಗಳೂರು: ದೆಹಲಿ ಗಡಿಗಳಲ್ಲಿ ಹೈಡ್ರಾಮಾ ಮುಂದುವರಿದಿದೆ. ಮೊನ್ನೆ ಘಾಜಿಪುರ ಗಡಿಯಲ್ಲಿ ಕರೆಂಟ್, ನೀರು ಕಡಿತಗೊಳಿಸಿದ್ದ ಸರ್ಕಾರ ಈಗ ರೈತರು ಪ್ರತಿಭಟನೆ ನಡೆಸುತ್ತಿರುವ ಎಲ್ಲ ಗಡಿಗಳಲ್ಲಿ ಇಂಟರ್‌ನೆಟ್‌ ಸೇವೆಯನ್ನು ಇದ್ದಕ್ಕಿದ್ದಂತೆ ಬಂದ್ ಮಾಡಿದೆ. ಸಿಂಘು, ಟಿಕ್ರಿ, ಗಾಜಿಪುರ್ ಗಡಿಯಲ್ಲಿ ಜ.31ರ ರಾತ್ರಿ 11 ಗಂಟೆಯವರೆಗೆ ತಾತ್ಕಾಲಿಕವಾಗಿ ಇಂಟರ್‌ನೆಟ್‌ ಸೇವೆ ಸ್ಥಗಿತಗೊಳಿಸುವಂತೆ ಕೇಂದ್ರ ಗೃಹ ಸಚಿವಾಲಯ ಆದೇಶಿಸಿದೆ. ನಡೆಯುತ್ತಿರುವ ರೈತರ ಪ್ರತಿಭಟನೆಯ ಮಧ್ಯೆ ಸಾರ್ವಜನಿಕ ಸುರಕ್ಷತೆಯನ್ನು ಕಾಪಾಡಿಕೊಳ್ಳಲು ಈ ನಿರ್ಧಾರ ಕೈಗೊಳ್ಳಲಾಗಿದೆ …

Read More »

ಮಹಿಳೆಯರ ಭಾವನೆಗೆ ಧಕ್ಕೆ – ಮಿಂತ್ರಾದಿಂದ ಲೋಗೋ ಬದಲಾವಣೆ

ಮುಂಬೈ: ಬಟ್ಟೆಗಳನ್ನು ಮಾರಾಟ ಮಾಡುತ್ತಿರುವ ಖ್ಯಾತ ಆನ್‌ಲೈನ್‌ ಶಾಪಿಂಗ್‌ ತಾಣ ಮಿಂತ್ರಾ ಮಹಿಳೆಯೊಬ್ಬರ ದೂರಿನ ಹಿನ್ನೆಲೆಯಲ್ಲಿ ತನ್ನ ಲೋಗೋವನ್ನು ಬದಲಾಯಿಸಿದೆ. ಸರ್ಕಾರೇತರ ಸಂಸ್ಥೆ ಅವೆಸ್ಟಾ ಫೌಂಡೇಶನಿನ ಮಹಿಳಾ ಹಕ್ಕುಗಳ ಹೋರಾಟಗಾರ್ತಿ ನಾಜ್​ ಪಟೇಲ್​ ಎಂಬುವವರು ಕಳೆದ ಡಿಸೆಂಬರ್​ನಲ್ಲಿ ಸೈಬರ್​ ಕ್ರೈಂ ಪೊಲೀಸರಿಗೆ ದೂರು ಸಲ್ಲಿಸಿದ್ದರು. ಈ ಲೋಗೋ ಬದಲಾವಣೆ ಮಾಡದೇ ಇದ್ದರೆ ಮುಂಬೈ ಮೂಲದ ಕಂಪನಿ ವಿರುದ್ಧ ಕಾನೂನು ಸಮರ ಮಾಡುತ್ತೇನೆ ಎಂದು ಎಚ್ಚರಿಕೆ ನೀಡಿದ್ದರು. ಮಿಂತ್ರಾ ಲೋಗೋ ಬೆತ್ತಲೆ …

Read More »

ನಾಳೆ ಪೋಲಿಯೋ ಲಸಿಕೆ ಅಭಿಯಾನ; ಹತ್ತಿರದ ಲಸಿಕಾ ಕೇಂದ್ರದ ಬಗ್ಗೆ ಮಾಹಿತಿಗೆ ಈ ಆಪ್ ಬಳಸಿ

ನಾಳೆ ಭಾನುವಾರ, ಜನವರಿ 31ರಂದು ರಾಜ್ಯಾದ್ಯಂತ ಪೋಲಿಯೋ ಲಸಿಕೆ ಅಭಿಯಾನ ನಡೆಯಲಿದೆ ಎಂದು ಆರೋಗ್ಯ ಸಚಿವ ಡಾ.ಸುಧಾಕರ್ ಮಾಹಿತಿ ನೀಡಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿರುವ ಸಚಿವರು, ಈ ಹಿಂದೆ ಎಷ್ಟೇ ಬಾರಿ ಪೋಲಿಯೋ ಲಸಿಕೆ ಹಾಕಿಸಿದ್ದರೂ 5 ವರ್ಷದೊಳಗಿನ ಎಲ್ಲ ಮಕ್ಕಳಿಗೂ ಕಡ್ಡಾಯವಾಗಿ ಲಸಿಕೆ ಹಾಕಿಸಬೇಕು ಎಂದು ಪೋಷಕರಲ್ಲಿ ಮನವಿ ಮಾಡಿದ್ದಾರೆ. ನಿಮ್ಮ ಹತ್ತಿರದ ಲಸಿಕಾ ಕೇಂದ್ರದ ಬಗ್ಗೆ ಮಾಹಿತಿ ಪಡೆಯಲು ಈ ಆಪ್ ಬಳಸಿ.

Read More »

ಗೋಕಾಕ ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷರಾಗಿ ಗೋಕಾಕ ಆಯ್ಕೆ

ಗೋಕಾಕ: ಇಲ್ಲಿನ ನಗರಸಭೆ ಸ್ಥಾಯಿ ಸಮಿತಿಯ ನೂತನ ಅಧ್ಯಕ್ಷರಾಗಿ ಕುತ್ಬುದ್ಧೀನ್ ಗೋಕಾಕ ಶನಿವಾರ ಆಯ್ಕೆಯಾಗಿದ್ದಾರೆ. ಕುತ್ಬುದ್ಧೀನ್ ಅವರು ಮೂರು ಬಾರಿ ನಗರಸಭೆಗೆ ಆಯ್ಕೆಯಾಗಿದ್ದರು. ಜಿಲ್ಲಾ ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿ, ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ, ಮುಖಂಡರಾದ ಲಖನ್ ಜಾರಕಿಹೊಳಿ ಹಾಗೂ ಅಂಬಿರಾವ್ ಪಾಟೀಲ ಅವರ ಸೂಚನೆಯ ಮೇರೆಗೆ ಇವರನ್ನು ಅವಿರೋಧವಾಗಿ ಆಯ್ಕೆ ಮಾಡಲಾಗಿದೆ. ಈ ಸಂದರ್ಭದಲ್ಲಿ ನಗರಸಭೆ ಅಧ್ಯಕ್ಷ ಜಯಾನಂದ ಹುಂಚ್ಯಾಳ, ನಗರ ಸೇವಕರಾದ ಅಬ್ಬಾಸ ದೇಸಾಯಿ, ಸಂತೋಷ …

Read More »

ಕರ್ತವ್ಯದ ಸಮಯದಲ್ಲಿ ಕ್ರಿಮಿನಲ್ ಜತೆಗೆ ಸಿಸಿಬಿ ಪೊಲೀಸರ ಎಣ್ಣೆ ಪಾರ್ಟಿ

ಮಂಗಳೂರು : ಕರ್ತವ್ಯದ ವೇಳೆಯಲ್ಲಿ ಬಾರಿನಲ್ಲಿ ಕ್ರಿಮಿನಲ್ ಹಿನ್ನಲೆ ಹೊಂದಿರುವ ವ್ಯಕ್ತಿಯೊಬ್ಬನೊಂದಿಗೆ ಮಂಗಳೂರು ಸಿಸಿಬಿ ಪೊಲೀಸರು ಎಣ್ಣೆ ಪಾರ್ಟಿ ಮಾಡಿದ್ದು, ಈಗ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಪುಲ್ ವೈರಲ್ ಆಗಿದೆ. ಮಂಗಳೂರು ಸಿಸಿಬಿ ವಿಭಾಗದ ಎಂಟು ಮಂದಿ ಪೊಲೀಸರು ಮಂಗಳೂರು ಹೊರವಲಯದ ಕುತ್ತಾರು ಬಳಿಯ ಬಾರ್ ನಲ್ಲಿ ಎಣ್ಣೆ ಪಾರ್ಟಿ ಮಾಡಿದ್ದರು ಎನ್ನಲಾಗಿದೆ. ಬಾರ್ ಹೊರಗೆ ಸರಕಾರಿ ಟಿ.ಟಿ ವಾಹನ ನಿಲ್ಲಿಸಿ ಪಾರ್ಟಿ ನಡೆಸುತ್ತಿದ್ದರು ಎನ್ನಲಾಗಿದೆ. ವಿಡಿಯೋ ವೈರಲ್ ಆಗುತ್ತಿದ್ದಂತೆ …

Read More »