Breaking News

ರಾಷ್ಟ್ರೀಯ

ಅಫ್ಘಾನಿಸ್ತಾನದಿಂದ ಬರಲು ಇಚ್ಛಿಸುವ ಹಿಂದೂಗಳಿಗೆ ಆಶ್ರಯ: ಪ್ರಧಾನಿ ಮೋದಿ

ನವದೆಹಲಿ, ಆಗಸ್ಟ್ 18: ಭಾರತಕ್ಕೆ ಬರಲು ಇಚ್ಛಿಸುವ ಅಫ್ಘಾನಿಸ್ತಾನದ ಅಲ್ಪಸಂಖ್ಯಾತ ಸಿಖ್ ಹಾಗೂ ಹಿಂದೂಗಳಿಗೆ ಆಶ್ರಯ ನೀಡಲು ಕ್ರಮ ಕೈಗೊಳ್ಳುವಂತೆ ಪ್ರಧಾನಿ ನರೇಂದ್ರ ಮೋದಿ ಸೂಚನೆ ನೀಡಿದ್ದಾರೆ. ತಾಲಿಬಾನ್ ಅಟ್ಟಹಾಸದಿಂದ ಅಫ್ಘಾನಿಸ್ತಾನ ನಲುಗುತ್ತಿದ್ದು, ಅಲ್ಲಿನ ಭಾರತೀಯರ ಸಹಾಯಕ್ಕೆ ಪ್ರಧಾನಿ ಮೋದಿ ಮುಂದಾಗಿದ್ದಾರೆ. ಆಫ್ಘನ್‌ನಲ್ಲಿ ಇರುವ ಎಲ್ಲ ಭಾರತೀಯರನ್ನು ಸುರಕ್ಷಿತವಾಗಿ ಕರೆದುಕೊಂಡು ಬರಬೇಕು ಎಂದು ವಿದೇಶಾಂಗ ಅಧಿಕಾರಿಗಳಿಗೆ ತಿಳಿಸಿದ್ದಾರೆ. ಸಹಾಯಕ್ಕಾಗಿ ಭಾರತದತ್ತ ನೋಡುತ್ತಿರುವ ನಿರಾಶ್ರಿತರಿಗೆ ಎಲ್ಲ ನೆರವು ನೀಡುವ ಜವಾಬ್ದಾರಿ ನಮ್ಮ …

Read More »

ಮಳೆಯಿಂದ ಹಾನಿಯಾದ ರಸ್ತೆ ದುರಸ್ತಿಗೆ ಮೊದಲ ಆದ್ಯತೆ ನೀಡಿ : ಸಿಎಂ

ಬೆಂಗಳೂರು, ಆ. 17 : ರಾಜ್ಯದಲ್ಲಿ ಇತ್ತೀಚೆಗೆ ಸುರಿದ ಭಾರೀ ಮಳೆಯಿಂದ ರಸ್ತೆಗಳು ಹಾಳಾಗಿವೆ. ಹಾಳಾದ ರಸ್ತೆಗಳ ದುರಸ್ತಿ ಕಾರ್ಯವನ್ನು ಆದ್ಯತೆ ಮೇರೆಗೆ ಕೈಗೆತ್ತಿಕೊಳ್ಳುವಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೂಚನೆ ನೀಡಿದರು.ಅವರು ಇಂದು ಗೃಹ ಕಚೇರಿ ಕೃಷ್ಣಾದಲ್ಲಿ ಲೋಕೋಪಯೋಗಿ ಇಲಾಖೆಯ ಪ್ರಗತಿ ಪರಿಶೀಲನೆ ಸಭೆಯಲ್ಲಿ ಈ ಸೂಚನೆ ನೀಡಿದರು. ಮಳೆಯಿಂದ ಹಾನಿಯಾದ ಪ್ರದೇಶಗಳ ರಸ್ತೆ ಸುಧಾರಣೆಗೆ 300 ಕೋಟಿ ರೂ. ಬಿಡುಗಡೆ ಮಾಡಲಾಗಿದ್ದು, ಈ ಅನುದಾನವನ್ನು ವಾಸ್ತವವಾಗಿ ಹಾನಿಯಾದ ಪ್ರದೇಶದಲ್ಲಿಯೇ …

Read More »

ದಿಢೀರನೇ ದೆಹಲಿಗೆ ಹಾರಿದ ಸಚಿವ ಆನಂದ್ ಸಿಂಗ್..!

ನವದೆಹಲಿ,ಆ.18- ಖಾತೆ ಕ್ಯಾತೆ ತೆಗೆದು ಮುನಿಸಿಕೊಂಡಿರುವ ಪ್ರವಾಸೋದ್ಯಮ ಸಚಿವ ಆನಂದ್ ಸಿಂಗ್ ಕಳೆದ ರಾತ್ರಿ ದಿಢೀರನೇ ದೆಹಲಿಗೆ ತೆರಳಿರುವುದು ಸಾಕಷ್ಟು ಕುತೂಹಲಕ್ಕೆ ಕಾರಣವಾಗಿದೆ. ಯಲ್ಲಾಪುರ ಪ್ರವಾಸದಲ್ಲಿದ್ದ ಆನಂದ್ ಸಿಂಗ್ ದಿಢೀರನೇ ಗೋವಾ ಮೂಲಕ ಕಳೆದ ರಾತ್ರಿ ದೆಹಲಿಗೆ ತೆರಳಿದ್ದಾರೆ. ಮೂಲಗಳ ಪ್ರಕಾರ ಅವರು ಇಂದು ದೆಹಲಿಯಲ್ಲಿ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಅವರನ್ನು ಭೇಟಿಯಾಗಲಿದ್ದಾರೆ ಎಂದು ಹೇಳಲಾಗುತ್ತಿದೆ. ನಿನ್ನೆ ವೈಯಕ್ತಿಕ ಕೆಲಸದ ಹಿನ್ನೆಲೆಯಲ್ಲಿ ಉತ್ತರಕನ್ನಡ ಜಿಲ್ಲೆಯ ಯಲ್ಲಾಪುರಕ್ಕೆ ಬಂದಿದ್ದ ಆನಂದ್ …

Read More »

ಡಿಸ್ಟರ್ಬ್​ ಮಾಡಬೇಡ ಅಮ್ಮಾ..’ ರೂಮಿಗೆ ತೆರಳಿ ವಿದ್ಯಾರ್ಥಿ ಆತ್ಮಹತ್ಯೆಗೆ ಶರಣು

ಕಲಬುರಗಿ: ಪೋಷಕರಿಂದ ಆನ್ ಲೈನ್ ಕ್ಲಾಸ್​ಗೆ ತೊಂದರೆ ಆಯ್ತು ಅಂತ ಮನನೊಂದು ವಿದ್ಯಾರ್ಥಿಯೊಬ್ಬ ಆತ್ಮಹತ್ಯೆ ಮಾಡಿಕೊಂಡ ಘಟನೆ ಜಿಲ್ಲೆಯ ಚಿತ್ತಾಪುರ ತಾಲೂಕಿನ ವಾಡಿ ಪಟ್ಟಣದಲ್ಲಿ ನಡೆದಿದೆ. 17 ವರ್ಷದ ಗುರುಚರಣ್ ಉಡುಪಾ ಆತ್ಮಹತ್ಯೆ ಮಾಡಿಕೊಂಡ ಯುವಕ. ಗುರುಚರಣ್ ಉಡುಪಿಯ ಪ್ರತಿಷ್ಠಿತ ಕಾಲೇಜ್​ನಲ್ಲಿ ಪಿಯುಸಿ ವಿದ್ಯಾಭ್ಯಾಸ ಮಾಡುತ್ತಿದ್ದ. ವಾಡಿ ಪಟ್ಟಣದ ಬಿರ್ಲಾ ಕ್ವಾಟರ್ಸ್​ನಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾನೆ ಎಂದು ತಿಳಿದುಬಂದಿದೆ. ಎರಡು ದಿನದ ಹಿಂದೆ ಆನ್​ಲೈನ್​ ಕ್ಲಾಸ್​ನಲ್ಲಿದ್ದಾಗ ಅವ್ರ ತಂದೆ ತಾಯಿ ಡಿಸ್ಟರ್ಬ್​ …

Read More »

ರಾಜ್ಯದ ಮಕ್ಕಳಿಗೆ ಸರ್ಕಾರದಿಂದ ಸಿಹಿ ಸುದ್ದಿ: ‘ಆರೋಗ್ಯ ನಂದನ’ ಯೋಜನೆ ಜಾರಿ

ಮಕ್ಕಳ ಆರೋಗ್ಯ ತಪಾಸಣೆಗೆ ಆರೋಗ್ಯ ನಂದನ ಕಾರ್ಯಕ್ರಮ ಕೈಗೊಳ್ಳಲಾಗಿದ್ದು, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಶೀಘ್ರವೇ ಚಾಲನೆ ನೀಡಲಿದ್ದಾರೆ. ಕೊರೋನಾ ಮೂರನೇ ಅಲೆ ಮಕ್ಕಳ ಮೇಲೆ ಪರಿಣಾಮ ಬೀರಬಹುದು ಎಂಬ ಆತಂಕದ ಹಿನ್ನೆಲೆಯಲ್ಲಿ ರಾಜ್ಯದ ಎಲ್ಲಾ ಮಕ್ಕಳ ಆರೋಗ್ಯತಪಾಸಣೆ ಉದ್ದೇಶದಿಂದ ಆರೋಗ್ಯ ನಂದನ ಕಾರ್ಯಕ್ರಮ ಕೈಗೊಳ್ಳಲಾಗಿದೆ. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಚಿವ ಡಾ.ಕೆ. ಸುಧಾಕರ್ ಈ ಬಗ್ಗೆ ಮಾಹಿತಿ ನೀಡಿ, ಕೊರೊನಾ ಮೂರನೇ ಅಲೆ ಮಕ್ಕಳ ಮೇಲೆ ಪರಿಣಾಮ …

Read More »

ಗೋವಾದಲ್ಲಿ ಜಾರಿಗೆ ತಂದ ‘ಹರ್ ಘರ್ ನಲ್’ ಯೋಜನೆ ಸಂಪೂರ್ಣ ವಿಫಲ : ಮಹಾದೇವ್ ನಾಯ್ಕ ವಾಗ್ದಾಳಿ

ಪಣಜಿ: ಮುಂಬರುವ ಐದು ವರ್ಷಗಳಲ್ಲಿ ಗೋವಾ ರಾಜ್ಯದಲ್ಲಿನ ಪ್ರತಿಯೊಂದು ಮನೆಗಳಿಗೆ ಕುಡಿಯುವ ನೀರು ಪೂರೈಕೆಯಾಗುತ್ತದೆಯೇ…? ಎಂಬುದನ್ನು ಮುಖ್ಯಮಂತ್ರಿ ಪ್ರಮೋದ ಸಾವಂತ್ ರವರಿಂದ ಖಚಿತಪಡಿಸಿಕೊಳ್ಳಲು ಸಾಧ್ಯವೇ..? ಮಳೆಗಾಲದಲ್ಲಂತೂ ಗೋವಾ ರಾಜ್ಯದ ಜನರು ಕೊಳಕು ಕುಡಿಯುವ ನೀರಿನ ಪೂರೈಕೆಯಿಂದ ಜನತೆ ತೊಂದರೆ ಅನುಭವಿಸುತ್ತಿದ್ದಾರೆ. ಮುಖ್ಯಮಂತ್ರಿ ಸಾವಂತ್ ರವರ ಹರ್ ಘರ್ ನಲ್ ಯೋಜನೆ ಸಂಪೂರ್ಣ ವಿಫಲವಾಗಿದ್ದು, ಜನರು ಕುಡಿಯುವ ನೀರಿಗಾಗಿ ಬಾವಿಗಳನ್ನು ಅವಲಂಭಿಸಿರುವಂತಾಗಿದೆ ಎಂದು ಆಮ್ ಆದ್ಮಿ ನಾಯಕ ಮಹಾದೇವ್ ನಾಯ್ಕ ವಾಗ್ದಾಳಿ …

Read More »

ಆಫ್ಘಾನ್​​ನಿಂದ ತಾಯ್ನಾಡಿಗೆ 120 ಮಂದಿ ಭಾರತೀಯರು- ರಣಾಂಗಣದಂತಾದ ಅಫ್ಘಾನಿಸ್ತಾನದಿಂದ ರಕ್ಷಣೆಯೇ ರೋಚಕ

ಅಫ್ಘಾನಿಸ್ತಾನವನ್ನ ಇದೀಗ ತಾಲಿಬಾನಿಗಳು ವಶಪಡಿಸಿಕೊಂಡು ತಮ್ಮದೇ ಸರ್ಕಾರ ರಚಿಸಲು ಬೇಕಾದ ತಯಾರಿಗಳನ್ನು ಮಾಡಿಕೊಳ್ಳುತ್ತಿದೆ. ಮಾನವ ಹಕ್ಕುಗಳಿಗೆ ಮಾರಕವಾದ ಸಿದ್ಧಾಂತಗಳನ್ನ ನಂಬಿರುವ ತಾಲಿಬಾನಿಗಳು ಅಫ್ಘಾನಿಸ್ತಾನದ ಜನರನ್ನ ಹಿಂಸಿಸಲು ಮುಂದಾಗಬಹುದು ಎಂಬ ಆತಂಕ ಜಗತ್ತಿನಾದ್ಯಂತ ಮನೆಮಾಡಿದೆ. ಈ ಮಧ್ಯೆ ಅಫ್ಘಾನಿಸ್ತಾನದ ಮೊದಲ ಮಹಿಳಾ ಮೇಯರ್ ಒಬ್ಬರ ಮಾತುಗಳು ಎಂಥವರ ಹೃದಯವನ್ನೂ ಹಿಂಡುವಂತಿದೆ.   : ಸರ್ಕಾರಿ ಅಧಿಕಾರಿಗಳಿಗೆ ‘ಸಾರ್ವತ್ರಿಕ ಕ್ಷಮಾದಾನ’ ಕೋರಿದ ತಾಲಿಬಾನಿಗಳು   ತಾಲಿಬಾನಿಗಳು ನನ್ನನ್ನು ಕೊಲ್ತಾರೆ, ನಮ್ಮ ಕುಟುಂಬವನ್ನು ಕೊಲ್ತಾರೆ.. …

Read More »

ಇನ್ನು 4 ದಿನಗಳಲ್ಲಿ ಎಲ್ಲವೂ ನಿರ್ಧಾರ; ಶಾಸಕ ಶ್ರೀಮಂತ ಪಾಟೀಲ್

ಬೆಳಗಾವಿ: ನಿಗಮ ಮಂಡಳಿ ಅಧ್ಯಕ್ಷ ಸ್ಥಾನ ಕೊಟ್ಟರೆ ನನಗೆ ಬೇಡ. ನಾನು ಕೆಳಗೆ ಬರೋದಿಲ್ಲ. ಮೇಲಿನ ಸ್ಥಾನ ಕೊಟ್ಟರೆ ನಿಭಾಯಿಸುವೆ. ಅದು ಪಕ್ಷಕ್ಕೂ ಸರಿ ಅಲ್ಲ, ನನಗೂ ಸರಿಯಲ್ಲ ಅಂತ ಬೆಳಗಾವಿಯಲ್ಲಿ ಶಾಸಕ ಶ್ರೀಮಂತ ಪಾಟೀಲ್ (Shrimant Patil) ಹೇಳಿದ್ದಾರೆ. ಇನ್ನು ಮರಾಠಾ ಸಮುದಾಯಕ್ಕೆ ಸಚಿವ ಸ್ಥಾನ ಸಿಗದ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಶಾಸಕ, ಸಾಕಷ್ಟು ಸಮಯವಿದೆ, ಸಚಿವ ಸ್ಥಾನ ಕೊಡಬಹುದು. ಮರಾಠಾ ಸಮುದಾಯದವರು ಬೇಸರ ಮಾಡಿಕೊಳ್ಳಬೇಡಿ. 4 ದಿನದಲ್ಲಿ …

Read More »

ರಾಜ್ಯದಲ್ಲಿ ತೈಲದರ ಇಳಿಕೆ ಪ್ರಸ್ತಾಪ ಇಲ್ಲ- ಸಿಎಂ ಬಸವರಾಜ ಬೊಮ್ಮಾಯಿ

ಬೆಂಗಳೂರು: ತಮಿಳುನಾಡಿನಲ್ಲಿ ಪೆಟ್ರೋಲ್ ಬೆಲೆ 3 ರೂ. ಕಡಿತ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ನಮ್ಮ ರಾಜ್ಯದಲ್ಲಿ ಆ ರೀತಿಯ ಪ್ರಸ್ತಾಪ ಇಲ್ಲ ಎಂದಿದ್ದಾರೆ.   ಮಾಧ್ಯಮಗಳ ಜತೆ ಮಾತನಾಡಿದ ಸಿಎಂ ಬಸವರಾಜ ಬೊಮ್ಮಾಯಿ, ತಮಿಳುನಾಡು ರಾಜ್ಯದಲ್ಲಿ ಪೆಟ್ರೋಲ್ ಬೆಲೆ 3 ರೂ. ಕಡಿತ ಮಾಡಿದಂತೆ ರಾಜ್ಯದಲ್ಲೂ ಕಡಿತ ಮಾಡುವ ಪ್ರಸ್ತಾಪ ಇಲ್ಲ ಎಂದು ಸ್ಪಷ್ಟನೆ ನೀಡಿದರು.   ಇಂದು 3 ಇಲಾಖೆಗಳ ಪದಾಧಿಕಾರಿಗಳ ಸಭೆ ಮಾಡುತ್ತೇನೆ. …

Read More »

ಕಾಡಾಪೂರ ಗ್ರಾಮದಲ್ಲಿ ಯೋಧನ ತಾಯಿಯ ಮೇಲೆ ಹಲ್ಲೇ ಖಂಡಿಸಿ ಅಂಕಲಿ ಗ್ರಾಮದಲ್ಲಿ ಮಾಜಿ ಸೈನಿಕರಿಂದ ಪಾದಯಾತ್ರೆ ಮೂಲಕ ಪ್ರತಿಭಟನೆ

    ಅಂಕಲಿ : ಅತ್ಯಂತ ಪ್ರತಿಕೂಲ ಸನ್ನಿವೇಶದಲ್ಲೂ ತಮ್ಮ ಪ್ರಾಣದ ಹಂಗು ತೊರೆದು ದೇಶದ ಗಡಿ ಕಾಯುವ ಯೋಧರಯ ನಮ್ಮ ದೇಶದ ಅಮೂಲ್ಯ ಆಸ್ತಿ ಅತಂಹ ಗಡಿ ಕಾಯುವ ಕರ್ತವ್ಯ ನಿರಂತ ಯೋಧನ ತಾಯಿಯ ಮೇಲೆ ಐದಾರು ಜನ ಹಲ್ಲೆ ಮಾಡಿದ್ದಾರೆ. ಅವರುಗಳ ವಿರುದ್ಧ ಸಾಮಾನ್ಯವಾದ ಪ್ರಕರಣವನ್ನು ಫೋಲಿಸ್ ಅಧಿಕಾರಿಗಳು ದಾಖಲು ಮಾಡಿದ್ದಾರೆಂದು ಮಾಜಿ ಸೈನಿಕ ಕ್ಷೇಮಾಭಿವೃದ್ಧಿ ಸಂಘದ ರಾಜಾಧ್ಯಕ್ಷರಾದ ಕೆ. ಶಿವಾನಂದ ಆರೋಪಿಸಿದ್ದಾರೆ. ಅಂಕಲಿ ಪೋಲಿಸ್ ಠಾಣೆಯ …

Read More »