ಚೆನ್ನೈ: ಕೊರೊನಾ ನಿಯಂತ್ರಣಕ್ಕಾಗಿ ವಿಧಿಸಿರುವ ಲಾಕ್‍ಡೌನ್ ನಿಯಮವನ್ನು ಉಲ್ಲಂಘನೆ ಮಾಡಿ ಮನೆಯಲ್ಲಿಯೇ ಜೂಜಾಟ ನಡೆಸಿದ ಆರೋಪಕ್ಕೆ ಸಂಬಂಧಿಸಿದಂತೆ ದಕ್ಷಿಣ ಭಾರತದ ಖ್ಯಾತ ಸೇರಿ ಹಲವರನ್ನು ಪೊಲೀಸರು ಬಂಧಿಸಿದ್ದಾರೆ. ಖ್ಯಾತ ನಟ ಶ್ಯಾಮ್ ನುಂಗಂಬಕ್ಕಂ ಪ್ರದೇಶದ ಸಮೀಪವಿರುವ ತಮ್ಮ ಅಪಾರ್ಟ್‌ಮೆಂಟ್‌ನಲ್ಲಿ ಜೂಜಾಟ ಆಡುತ್ತಿದ್ದರು. ಅಲ್ಲದೇ ಈ ಜೂಜಾಟದಲ್ಲಿ ತಮಿಳು ನಟರೊಬ್ಬರು ಹಣ ಕಳೆದುಕೊಂಡಿದ್ದಾರೆ ಎಂದು ವರದಿಯಾಗಿದೆ. ಈ ಹಿನ್ನೆಲೆಯಲ್ಲಿ ಖಚಿತ ಮಾಹಿತಿ ಮೇರೆಗೆ ಪೊಲೀಸರು ನಟನ ಅಪಾರ್ಟ್‌ಮೆಂಟ್ ಮೇಲೆ ದಾಳಿ ಮಾಡಿದ್ದಾರೆ. …
Read More »ಗೆಳೆಯನ ಜೊತೆ ಎಂಗೇಜ್ ಆದ ಹಾಟ್ ಬೆಡಗಿ ಪೂನಂ ಪಾಂಡೆ
ಮುಂಬೈ: ನಟಿ ಮತ್ತು ರೂಪದರ್ಶಿ ಪೂನಂ ಪಾಂಡೆ ತನ್ನ ಬಾಯ್ ಫ್ರೆಂಡ್ ಸ್ಯಾಮ್ ಬಾಂಬೆ ಜೊತೆಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ತನ್ನ ನಿಶ್ಚಿತಾರ್ಥದ ವಿಚಾರವಾಗಿ ಪೂನಂ ಪಾಂಡೆ ಇನ್ನೂ ಯಾವುದೇ ಅಧಿಕೃತ ಹೇಳಿಕೆಯನ್ನು ನೀಡಿಲ್ಲ. ಆದರೆ ತಮ್ಮ ನಿಶ್ಚಿತಾರ್ಥದ ಫೋಟೋವನ್ನು ತಮ್ಮ ಇನ್‍ಸ್ಟಾಗ್ರಾಮ್‍ನಲ್ಲಿ ಹಾಕಿಕೊಂಡಿರುವ ಸ್ಯಾಮ್ ಬಾಂಬೆ ಕೊನೆಗೂ ನಾವು ನಿಶ್ಚಿತಾರ್ಥ ಮಾಡಿಕೊಂಡೆವು ಎಂದು ಬರೆದುಕೊಂಡಿದ್ದಾರೆ. ಸ್ಯಾಮ್ ಮತ್ತು ಪೂನಂ ಕಳೆದ ಕೆಲದಿನಗಳಿಂದ ಪ್ರೀತಿಸುತ್ತಿದ್ದರು ಸ್ಯಾಮ್ ಹಂಚಿಕೊಂಡಿರುವ ಫೋಟೋದಲ್ಲಿ ಇಬ್ಬರು ಬೆರಳುಗಳಲ್ಲಿ …
Read More »ಸಂಜಯ್ ದತ್ ವಿರುದ್ಧ ಹೈಕೋರ್ಟ್‌ಗೆ ಹೋದ ರಾಜೀವ್‌ಗಾಂಧಿ ಹಂತಕ!
ಮುಂಬೈ: ಬಾಲಿವುಡ್ ನಟ ಸಂಜಯ್ ದತ್‌ಗೆ ನಾಳೆ 60ನೇ ಹುಟ್ಟುಹಬ್ಬದ ಸಂಭ್ರಮ. ಆದರೆ ಅದರ ಮುನ್ನಾದಿನವೇ ಅವರಿಗೆ ಶಾಕ್ ಆಗುವಂಥ ವಿಚಾರವೊಂದು ನಡೆದಿದೆ. ಅದೇನೆಂದರೆ ಅವರ ವಿರುದ್ಧ ಇಂದು ಬಾಂಬೆ ಹೈಕೋರ್ಟ್‌ಗೆ ಕೇಸೊಂದು ದಾಖಲಾಗಿದೆ. ಈ ಕೇಸ್ ದಾಖಲು ಮಾಡಿರುವವರು ರಾಜೀವ್ ಗಾಂಧಿ ಹತ್ಯೆ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆ ಅನುಭವಿಸುತ್ತಿರುವ ಜಿ ಪೆರರಿವಾಲನ್. ಅಷ್ಟಕ್ಕೂ ಈತನಿಗೂ, ಸಂಜಯ್ ದತ್‌ಗೂ ಸಂಬಂಧ ಏನೆಂದರೆ, ರಾಜೀವಗಾಂಧಿ ಹತ್ಯೆ ಪ್ರಕರಣದಲ್ಲಿ ಅವರನ್ನು ಹತ್ಯೆ ಮಾಡಲು …
Read More »ನಾಲ್ಕು ಜಿಲ್ಲೆಗಳಿಗೆ ಸಚಿವ ಸ್ಥಾನ ಮರೀಚಿಕೆ?
ಕಲಬುರ್ಗಿ: ಸಚಿವ ಸ್ಥಾನಕ್ಕೆ ತೀವ್ರ ಲಾಬಿ ನಡೆಸಿದ್ದ ಮೂವರೂ ಸೇರಿದಂತೆ ಕಲ್ಯಾಣ ಕರ್ನಾಟಕದ ಐವರು ಶಾಸಕರನ್ನು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ನಿಗಮ-ಮಂಡಳಿಗೆ ನೇಮಕ ಮಾಡಿದ್ದಾರೆ. ಆ ಮೂಲಕ ಈ ಜಿಲ್ಲೆಗಳಿಗೆ ಸದ್ಯ ಸಚಿವ ಸ್ಥಾನ ದೊರೆಯುವುದಿಲ್ಲ ಎಂಬ ಸಂದೇಶವೂ ರವಾನೆಯಾದಂತಾಗಿದೆ. ಬಳ್ಳಾರಿ ಜಿಲ್ಲೆಯ ಆನಂದ ಸಿಂಗ್ ಹಾಗೂ ಬೀದರ್ ಜಿಲ್ಲೆಯ ಏಕೈಕ ಬಿಜೆಪಿ ಶಾಸಕ ಪ್ರಭು ಚವ್ಹಾಣ್ ಅವರು ಸಚಿವರಾಗಿದ್ದಾರೆ. ಕಲಬುರ್ಗಿ, ಯಾದಗಿರಿ, ರಾಯಚೂರು, ಕೊಪ್ಪಳ ಜಿಲ್ಲೆಗಳಿಗೆ ಸಂಪುಟದಲ್ಲಿ ಪ್ರಾತಿನಿಧ್ಯ …
Read More »ಜೈಲಿನಲ್ಲೇ ಮರ್ಡರ್ಗೆ ಸ್ಕೆಚ್; ₹1 ಕೋಟಿ ಸುಪಾರಿ ಪಡೆದಿದ್ದ ಆರೋಪಿಗಳು ಅರೆಸ್ಟ್
ಬೆಂಗಳೂರು: ಜೈಲಿನಲ್ಲೇ ಇದ್ದು ಮರ್ಡರ್ ಮಾಡೋಕೆ ಸ್ಕೆಚ್ ಹಾಕಿದ್ದ ಖತರ್ನಾಕ್ ಗ್ಯಾಂಗ್ನ ಒಂಬತ್ತು ಜನ ಆರೋಪಿಗಳನ್ನು ಪೊಲೀಸರು ಹೆರೆಮುರಿ ಕಟ್ಟಿದ್ದಾರೆ. ಕಾಮಾಕ್ಷಿಪಾಳ್ಯ ನಿವಾಸಿ ವರಲಕ್ಷ್ಮೀ ಎಂಬುವವರ ಪತಿ ಗೋವಿಂದೇ ಗೌಡನ ಹತ್ಯೆಯ ಪ್ರತೀಕಾರವಾಗಿ ಕೊಲೆ ಮಾಡಿದ ಆರೋಪಿಗಳ ಹತ್ಯೆಗೆ ವರಲಕ್ಷ್ಮೀ ಸುಪಾರಿ ನೀಡಿದ್ದರು ಎನ್ನಲಾಗಿದೆ. ವರಲಕ್ಷ್ಮೀ ಹಾಗೂ ಗೋವಿಂದೇಗೌಡನಿಗೆ ಆತ್ಮೀಯನಾಗಿದ್ದ ಚಿಕ್ಕತಿಮ್ಮೇಗೌಡ, ತಾನು ಬೆಳೆಯುತ್ತಿದ್ದಂತೆ ಇಬ್ಬರನ್ನ ದೂರ ಮಾಡಿದ್ದ. ವರಲಕ್ಷ್ಮೀ ದಂಪತಿಗೆ ಮಕ್ಕಳಿಲ್ಲದ ಕಾರಣ ಚಿಕ್ಕತಿಮ್ಮೇಗೌಡನನ್ನು ಬೆಳೆಸಿ, ಆತನಿಗೆ ಒಳ್ಳೆಯ …
Read More »ಹೋಟೆಲ್ನಲ್ಲಿ ಹೈಟೆಕ್ ವೇಶ್ಯಾವಾಟಿಕೆ ದಂಧೆ: ಮೂವರು ಅರೆಸ್ಟ್
ಬೆಂಗಳೂರು: ಹೈಟೆಕ್ ವೇಶ್ಯಾವಾಟಿಕೆ ದಂಧೆ ನಡೆಸುತ್ತಿದ್ದ ಮೂವರು ಆರೋಪಿಗಳನ್ನ ಪೊಲೀಸರು ಬಂಧಿಸಿದ್ದಾರೆ. ಗೌರವ್, ಹೀನಾ ಹಾಗೂ ಅಣ್ಣಪ್ಪ ಬಂಧಿತರು. ಆರೋಪಿಗಳು ಲಾಡ್ಜ್ ನಡೆಸಲು ಪರವಾನಗಿ ಪಡೆದು ಅನಧಿಕೃತವಾಗಿ ವೇಶ್ಯಾವಾಟಿಕೆಗೆ ಇಳಿದಿದ್ದರು. ಕೆಲಸದ ಆಮಿಷವೊಡ್ಡಿ ಹೊರರಾಜ್ಯದಿಂದ ಹುಡುಗಿಯರನ್ನು ಕರೆಯಿಸಿ ಕಂಫರ್ಟ್ ಹೋಟೆಲ್ನಲ್ಲಿ ದಂಧೆ ನಡೆಸುತ್ತಿದ್ದರು. ಆನ್ಲೈನ್ನಲ್ಲಿ ಮೊಬೈಲ್ ನಂಬರ್ ಹಾಕಿಕೊಂಡು, ಟೆಲಿಕಾಲರ್ ಮೂಲಕ ಗಿರಾಕಿಗಳನ್ನ ಕರೆಸುತ್ತಿದ್ದರು. ಇದು ಯಾರಿಗೂ ಗೊತ್ತಾಗದಂತೆ ಒಂದೊಂದು ನಂಬರ್ ಯ್ಯೂಸ್ ಮಾಡುತ್ತಿದ್ದರು ಎನ್ನಲಾಗಿದೆ. ಈ ಬಗ್ಗೆ ಖಚಿತ …
Read More »ಭೂಮಿ ಪೂಜೆಗೆ ಮೋದಿ ಹಾಜರಾಗುವುದು ಸಾಂವಿಧಾನಿಕ ಪ್ರಮಾಣವನ್ನು ಉಲ್ಲಂಘಿಸಿದಂತೆ – ಓವೈಸಿ
ಹೈದರಾಬಾದ್: ರಾಮ ಮಂದಿರ ಭೂಮಿ ಪೂಜೆ ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿ ಹಾಜರಾಗುವುದು ಸಾಂವಿಧಾನಿಕ ಪ್ರಮಾಣವನ್ನು ಉಲ್ಲಂಘಿಸಿದಂತೆ ಎಂದು ಅಖಿಲ ಭಾರತ ಮಜ್ಲಿಸ್-ಇ-ಇಥೆಹಾದುಲ್ ಮುಸ್ಮಿಮಿನ್ (ಎಐಎಂಐಎಂ) ಪಕ್ಷದ ಮುಖ್ಯಸ್ಥ, ಹೈದರಾಬಾದ್ ಸಂಸದ ಅಸಾದುದ್ದೀನ್ ಓವೈಸಿ ಹೇಳಿದ್ದಾರೆ. ಆಗಸ್ಟ್ 5 ರಂದು ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ ನಡೆಯಲಿರುವ ಭೂಮಿ ಪೂಜೆ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಭಾಗವಹಿಸಲಿದ್ದಾರೆ ಎಂದು ವರದಿ ಪ್ರಕಟವಾಗುತ್ತಿರುವ ಹಿನ್ನೆಲೆಯಲ್ಲಿ ಓವೈಸಿ ಟ್ವೀಟ್ ಮಾಡಿ ತಮ್ಮ ಅಭಿಪ್ರಾಯವನ್ನು ಹೇಳಿದ್ದಾರೆ. “ಕರ್ತವ್ಯದಲ್ಲಿದ್ದಾಗ …
Read More »ಕೆಲಸ ಕಳ್ಕೊಂಡು ತರಕಾರಿ ಮಾರಾಟ ಮಾಡ್ತಿದ್ದ ಟೆಕ್ಕಿಗೆ ಸೋನು ಸೂದ್ ಸಹಾಯ
ಹೈದರಾಬಾದ್: ಕೊರೊನಾ ಲಾಕ್‍ಡೌನ್ ಶುರುವಾದಗಿನಿಂದ ಬಾಲಿವುಡ್ ನಟ ಸೋನು ಸೂದ್ ಕಷ್ಟದಲ್ಲಿರುವವರಿಗೆ ಸಹಾಯ ಮಾಡುತ್ತಿದ್ದಾರೆ. ಇದೀಗ ಕೋವಿಡ್‍ನಿಂದ ಕೆಲಸ ಕಳೆದುಕೊಂಡು ತರಕಾರಿ ಮಾರಾಟ ಮಾಡುತ್ತಿದ್ದ ಮಹಿಳಾ ಟೆಕ್ಕಿ ನೆರವಿಗೆ ಸೋನು ಸೂದ್ ಧಾವಿಸಿದ್ದಾರೆ. ಹೈದರಾಬಾದ್‍ನ ಟೆಕ್ಕಿ ಉಂಡಾಡಿ ಶಾರದಾ ಕೊರೊನಾದಿಂದ ಕೆಲಸ ಕಳೆದುಕೊಂಡು ಶ್ರೀನಗರ ಕಾಲೋನಿಯಲ್ಲಿ ತರಕಾರಿಗಳನ್ನು ಮಾರಾಟ ಮಾಡಲು ಪ್ರಾರಂಭಿಸಿದ್ದರು. ಈ ಬಗ್ಗೆ ತಿಳಿದು ಸೋನು ಸೂದ್ ಮಹಿಳಾ ಟೆಕ್ಕಿಗೆ ಉದ್ಯೋಗವನ್ನು ಕೊಡಿಸಿದ್ದಾರೆ. ಟೆಕ್ಕಿ ಶಾರದಾ ಬಗ್ಗೆ ರಿಚ್ಚಿ …
Read More »ವಿಡಿಯೋ ಕಾಲ್ ಮಾಡಿ ವೈದ್ಯರ ಸಲಹೆ ಪಡೆದು ಹೆರಿಗೆ ಮಾಡಿಸಿದ ಮಹಿಳೆಯರು
ಹಾವೇರಿ : ವಿಡಿಯೋ ಕಾಲ್ ಮೂಲಕ ವೈದ್ಯರ ಸಲಹೆ ಪಡೆದು ಮಹಿಳೆಯರು ಹೆರಿಗೆ ಮಾಡಿಸಿರುವ ಘಟನೆ ಜಿಲ್ಲೆಯ ಹಾನಗಲ್ ಪಟ್ಟಣದಲ್ಲಿ ನಡೆದಿದೆ. ನಿನ್ನೆ ಮಧ್ಯಾಹ್ನ 2:30ರ ಸುಮಾರಿಗೆ ವಾಸವಿ ಪತ್ತೆಪೂರ ಎಂಬ ಮಹಿಳೆಗೆ ಹೆರಿಗೆ ನೋವು ಕಾಣಿಸಿಕೊಂಡಿತ್ತು. ಆದ್ರೆ ಸಂಡೇ ಲಾಕ್ ಡೌನ್ ಇದ್ದ ಕಾರಣ ಇಡೀ ನಗರವೇ ಸ್ತಬ್ಧವಾಗಿತ್ತು. ಹೀಗಾಗಿ ವಾಸವಿ ಪತ್ತೆಪೂರ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲು ಸಾಧ್ಯವಾಗಿರಲ್ಲಿಲ್ಲ. ಇತ್ತ ಮಹಿಳೆಯ ಆಕ್ರಂದನ ಮತ್ತು ಕಿರುಚುವುದನ್ನ ಕಂಡ ಸ್ಥಳೀಯ …
Read More »24 ಗಂಟೆಯಲ್ಲಿ 654 ಜನರು ಸಾವು ಇಂದು ವಿಶ್ವದಲ್ಲೇ ಅತಿ ಹೆಚ್ಚು.
ಭಾರತದಲ್ಲಿ ಕೊರೊನಾ ವೈರಸ್ ಪ್ರಕರಣಗಳು ನಿರಂತರವಾಗಿ ಹೆಚ್ಚುತ್ತಿವೆ. ದೇಶದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 15 ಲಕ್ಷದ ಹತ್ತಿರ ಬಂದಿದೆ. ಸಾವಿನ ಸಂಖ್ಯೆಯೂ ವೇಗವಾಗಿ ಹೆಚ್ಚುತ್ತಿದೆ. ಕಳೆದ 24 ಗಂಟೆಗಳಲ್ಲಿ 47,704 ಹೊಸ ಸೋಂಕು ಪ್ರಕರಣಗಳು ಕಾಣಿಸಿಕೊಂಡಿವೆ. 24 ಗಂಟೆಯಲ್ಲಿ 654 ಜನರು ಸಾವನ್ನಪ್ಪಿದ್ದಾರೆ. ಈ ಸಾವುಗಳು ಇಂದು ವಿಶ್ವದಲ್ಲೇ ಅತಿ ಹೆಚ್ಚು. ಅಮೆರಿಕ ಮತ್ತು ಬ್ರೆಜಿಲ್‌ನಲ್ಲಿ ಸಾವಿನ ಸಂಖ್ಯೆ ಭಾರತಕ್ಕಿಂತ ಕಡಿಮೆಯಿದೆ. ಯುಎಸ್ ಮತ್ತು ಬ್ರೆಜಿಲ್ ನಲ್ಲಿ ಕಳೆದ …
Read More »