ಬೆಂಗಳೂರು: ಡಿಜೆ ಹಳ್ಳಿಯಲ್ಲಿ ನಡೆದ ಹಿಂಸಾಚಾರ ಘಟನೆ ಬಳಿಕ ಕೋಲಾರ ಸೇರಿದಂತೆ ಒಟ್ಟು 6 ಪ್ರದೇಶಗಲ್ಲಿ ತೀವ್ರ ಕಟ್ಟೆಚ್ಚರವಹಿಸಲಾಗಿದೆ ಎಂದು ಕೇಂದ್ರೀಯ ವಲಯದ ಐಜಿಪಿ ಸೀಮಂತ್ ಕುಮಾರ್ ಸಿಂಗ್ ಅವರು ಬುಧವಾರ ಹೇಳಿದ್ದಾರೆ. ಕೋಲಾರ, ರಾಮನಗರ, ತುಮಕೂರು, ಕೆಜಿಎಪ್, ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ ದಲ್ಲಿ ಹೈಅಲರ್ಟ್ ಆಗಿರುವಂತೆ ಹಾಗೂ ರಾತ್ರಿ ವೇಳೆ ಗಸ್ತು ತಿರುಗುವಂತೆ ಸೂಚಿಸಲಾಗಿದೆ. ಇನ್ನೂ ಎರಡೂ ದಿನಗಳ ಕಾಲ ಇದೇ ರೀತಿ ಭದ್ರತೆಯೊದಗಿಸುವಂತೆ ಸೂಚಿಸಲಾಗಿದೆ ಎಂದು ಹೇಳಿದ್ದಾರೆ. …
Read More »ಪತ್ರಕರ್ತರ ಮೇಲೆ ಹಲ್ಲೆ ಜಿಲ್ಲಾಧಿಕಾರಿಗಳಿಗೆ ಮನವಿ
ಚಿತ್ರದುರ್ಗ,ಆ12(ಹಿಸ): ಬೆಂಗಳೂರಿನ ಡಿ.ಜಿ ಹಳ್ಳಿ ಮತ್ತು ಕೆ.ಆರ್.ಹಳ್ಳಿಗಳಲ್ಲಿ ನಡೆದಿರುವ ಗಲಭೆಯ ಸಂದರ್ಭದಲ್ಲಿ ಸುದ್ದಿ ಮಾಧ್ಯಮದ ಪ್ರತಿನಿಧಿಗಳ ಮೇಲೆ ನಡೆದಿರುವ ಹಲ್ಲೆಯನ್ನು ಖಂಡಿಸಿ ಚಿತ್ರದುರ್ಗ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದಿಂದ ಇಂದು ಜಿಲ್ಲಾಧಿಕಾರಿಗಳ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು. ಹಲ್ಲೆಗೊಳಗಾದ ಪತ್ರಕರ್ತರಿಗೆ ಸರ್ಕಾರದಿಂದ ಪರಿಹಾರ ಘೋಷಣೆ ಮಾಡಬೇಕು ಮತ್ತು ಪತ್ರಕರ್ತರಿಗೆ ರಕ್ಷಣೆ ನೀಡಬೇಕು ಹಾಗೆಯೇ ಮಹಾರಾಷ್ಟ್ರ ಮಾದರಿಯಲ್ಲಿ ರಾಜ್ಯದಲ್ಲೂ ಕೊಡ ಪತ್ರಕರ್ತರಿಗೆ ರಕ್ಷಣೆ ನೀಡುವಂತಹ ಸುರಕ್ಷಣಾ ಕಾನೂನು ಜಾರಿ ಮಾಡಬೇಕು ಎಂದು …
Read More »ಶಿವಸೇನೆ ಷಡ್ಯಂತ್ರಕ್ಕೆ ಗ್ರಾಮಸ್ಥರ ಮಂಗಳಾರತಿ; ಮಣಗುತ್ತಿ ಶಿವಾಜಿ ಮೂರ್ತಿ ವಿವಾದ ಇತ್ಯರ್ಥ
ಚಿಕ್ಕೋಡಿ: ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಮಣಗುತ್ತಿ ಗ್ರಾಮದಲ್ಲಿ ನಡೆದ ಶಿವಾಜಿ ಮೂರ್ತಿ ಪ್ರತಿ ಸ್ಥಾಪನೆ ಪ್ರಕರಣ ಕೊನೆಗೆ ಅಂತ್ಯ ಕಂಡಿದೆ. ಶಿವಾಜಿ ಮೂರ್ತಿ ವಿಚಾರವನ್ನೆ ಮುಂದಿಟ್ಟುಕೊಂಡು ರಾಜಕೀಯ ಮಾಡಲು ಹೊರಟಿದ್ದ ಎಂ.ಇ.ಎಸ್. ಹಾಗೂ ಶಿವಸೇನೆಗೆ ತೀವ್ರ ಮುಖ ಭಂಗವಾಗಿದೆ. ಹೌದು, ಕಳೆದ ಒಂದು ವಾರದಿಂದಲೂ ಮಣಗುತ್ತಿ ಗ್ರಾಮದಲ್ಲಿ ಶಿವಾಜಿ ಮಹಾರಾಜರ ಮೂರ್ತಿ ಪ್ರತಿ ಸ್ಥಾಪನೆ ಮಾಡುವ ವಿಚಾರವಾಗಿ ಹಲವಾರು ಗಲಾಟೆಗಳು ನಡೆದಿದ್ದವು. ಶಿವಸೇನೆಯ ಕುಮ್ಮಕ್ಕಿನಿಂದ ಸುಳ್ಳು ಪ್ರಚಾರ ಪಡೆದಿದ್ದ …
Read More »ನನ್ನೊಂದಿಗೆ ಮಲಗಲು ನಿರಾಕರಿಸಿದ್ರೆ ಫೋಟೋ ವೈರಲ್ – ಫ್ಯಾಷನ್ ಡಿಸೈನರ್‌ಗೆ ಕಿರುಕುಳ
ಮುಂಬೈ: ಸಿನಿಮಾದಲ್ಲಿ ಅವಕಾಶ ಕೊಡಿಸುವುದಾಗಿ ನಂಬಿಸಿ 42 ವರ್ಷದ ಫ್ಯಾಷನ್ ಡಿಸೈನರ್‌ಗೆ ಕಿರುಕುಳ ನೀಡಿದ ಆರೋಪದ ಮೇಲೆ ವ್ಯಕ್ತಿಯ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.ಆರೋಪಿಯನ್ನು ಕೇರಳ ಮೂಲದ ರಾಹುಲ್ ಶ್ರೀವಾಸ್ತವ ಎಂದು ಗುರುತಿಸಲಾಗಿದೆ. ಆರೋಪಿ ಸಿನಿಮಾಕ್ಕಾಗಿ ಸ್ಕ್ರೀನ್ ಟೆಸ್ಟ್ ಸಮಯದಲ್ಲಿ ನನ್ನ ಫೋಟೋಗಳನ್ನು ತೆಗೆದುಕೊಂಡಿದ್ದು, ಅವುಗಳನ್ನು ಅಶ್ಲೀಲ ಚಿತ್ರಗಳಾಗಿ ಮಾರ್ಫ್ ಮಾಡಿದ್ದಾನೆ. ಬಳಿಕ ತನ್ನೊಂದಿಗೆ ದೈಹಿಕ ಸಂಬಂಧವನ್ನು ಹೊಂದಬೇಕು, ಇಲ್ಲವಾದರೆ ಮಾರ್ಫ್ ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಅಪ್ಲೋಡ್ ಮಾಡುವುದಾಗಿ ಬೆದರಿಕೆ ಹಾಕುತ್ತಿದ್ದಾನೆ …
Read More »S.S.L.C. ಪರೀಕ್ಷೆಯ ಯಶಸ್ಸಿಗೆ ಶ್ರಮಿಸಿದ ಎಲ್ಲರಿಗೆ ಸಿಎಂ ಕೃತಜ್ಞತೆ
ಬೆಂಗಳೂರು, ಆ.11 : ಸವಾಲುಗಳ ನಡುವೆ ಯಶಸ್ವಿಯಾಗಿ ಎಸ್.ಎಸ್.ಎಲ್.ಸಿ ಪರೀಕ್ಷೆಗಳು ನಡೆಯಲು ಕಾರಣರಾದ ಎಲ್ಲರಿಗೂ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರು ಕೃತಜ್ಞತೆ ಸಲ್ಲಿಸಿದ್ದಾರೆ. ಕೊರೋನಾ ಸವಾಲುಗಳ ನಡುವೆ ಮಕ್ಕಳ ಶೈಕ್ಷಣಿಕ ಬೆಳವಣಿಗೆಗೆ ಅಡ್ಡಿಯಾಗಬಾರದು ಎಂದು ರಾಜ್ಯ ಸರ್ಕಾರ ಟೊಂಕಕಟ್ಟಿ ನಿಂತು, ಈ ವರ್ಷದ ಜೂನ್ 25 ರಿಂದ ಜುಲೈ 3 ರವರೆಗೆ, ಅತ್ಯಂತ ಯಶಸ್ವಿಯಾಗಿ ನಡೆಸಿದ ಎಸ್.ಎಸ್.ಎಲ್.ಸಿ ಪರೀಕ್ಷೆಗಳ ಫಲಿತಾಂಶ ನಿನ್ನೆ ಪ್ರಕಟವಾಗಿದೆ. ಶೇಕಡಾ 71.80 ರಷ್ಟು ಮಕ್ಕಳು …
Read More »ಘಟಪ್ರಭಾ-ಮಣಗುತ್ತಿ ವಿವಾದ ಸೌಹಾರ್ದತೆ ಕಾಪಾಡುವಂತೆ ಪೋಲಿಸ್ ಕಮೀಶನರ್ ಗೆ ಕನ್ನಡ ಸೇನೆ ವತಿಯಿಂದ ಮನವಿ
ಹುಕ್ಕೇರಿ ತಾಲೂಕಿನ ಮಣಗುತ್ತಿ ಗ್ರಾಮದಲ್ಲಿ ಶಿವಾಜಿ ಮಹಾರಾಜರ ಮೂರ್ತಿ ಅನಾವರಣ ಮತ್ತು ಸ್ಥಳಾಂತರ ಪ್ರಕರಣವನ್ನು ಶಿವಸೇನೆ ಮತ್ತು ಹೊರಗಿನಿಂದ ಬಂದ ಇತರೆ ಸಂಘಟನೆಗಳು ವಿವಾದ ಸೃಷ್ಟಿ ಮಾಡಿ ಸೌಹಾರ್ದತೆ ಹಾಳು ಮಾಡಲು ಪ್ರಯತ್ನಿಸುತ್ತಿರುವ ಕಿಡಗೇಡಿಗಳನ್ನು ಕೂಡಲೇ ಅವರನ್ನು ಬಂದಿಸಬೇಕು. ಅದರಂತೆ ಅಲ್ಲಿಯ ಜನರಿಗೆ ಸೌಹಾರ್ದತೆಯಿಂದ ಬಾಳಲು ಅನುಮಾಡಿ ಕೊಡಬೇಕು ಎಂದು ಕನ್ನಡ ಸೇನೆ ಮತ್ತು ಕರವೇ ಸಂಘಟನೆ ವತಿಯಿಂದ ಪೋಲಿಸ್ ಕಮೀಶನರ್ ಮನವಿ ಸಲ್ಲಿಸಲಾಯಿತು. ಮಣಗುತ್ತಿ ಗ್ರಾಮದಲ್ಲಿ ಶಿವಾಜಿ ಮಹಾರಾಜರ …
Read More »ನನ್ನ ಹೇಳಿಕೆಗೆ ನಾನು ಬದ್ಧ. ನನ್ನ ಇಡೀ ಜೀವನವನ್ನು ಜೈಲಿನಲ್ಲೇ ಕಳೆಯಲು ಸಿದ್ಧ
ಶಿವಮೊಗ್ಗ: ಕಾಶಿ ಮತ್ತು ಮಥುರಾದಲ್ಲಿ ಮಸೀದಿಗಳ ಜಾಗದಲ್ಲಿ ದೇವಸ್ಥಾನಗಳನ್ನು ನಿರ್ಮಿಸಬೇಕು ಎಂಬ ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್. ಈಶ್ವರಪ್ಪ ಹೇಳಿಕೆ ವಿವಾದಕ್ಕೆ ಕಾರಣವಾಗಿದ್ದು, ಈ ರೀತಿ ಪ್ರಚೋದನಕಾರಿ ಹೇಳಿಕೆ ನೀಡಿರುವ ಈಶ್ವರಪ್ಪನವರ ವಿರುದ್ಧ ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡು, ಬಂಧಿಸಬೇಕು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಒತ್ತಾಯಿಸಿದ್ದಾರೆ. ಶಿವಮೊಗ್ಗದಲ್ಲಿ ಮಾತನಾಡಿರುವ ಈ ಈಶ್ವರಪ್ಪ, ಡಿ.ಕೆ ಶಿವಕುಮಾರ್ ಹೇಳಿಕೆಗೆ ಪ್ರತಿಕ್ರಿಯಿಸಿ ನನ್ನ ಹೇಳಿಕೆಗೆ ನಾನು ಬದ್ಧನಾಗಿದ್ದೇನೆ. ನನ್ನ ಇಡೀ ಜೀವನವನ್ನು ಬೇಕಾದರೂ ಜೈಲಿನಲ್ಲೇ …
Read More »ಕೊಲ್ಲಾಪುರ ಜಿಲ್ಲೆಯ ನೀರಾವರಿ ಇಲಾಖೆಯ ಸಿಂಚನ ಭವನಕ್ಕೆ ಭೇಟಿ ನೀಡಿದಸಚಿವೆ ಶಶಿಕಲಾ ಜೊಲ್ಲೆ ಹಾಗೂ ಸಂಸದ ಅಣ್ಣಾಸಾಹೆಬ ಜೊಲ್ಲೆ
ಕೊಲ್ಲಾಪುರ – ಕೊಲ್ಲಾಪುರ ಜಿಲ್ಲೆಯ ನೀರಾವರಿ ಇಲಾಖೆಯ ಅಧಿಕಾರಿಗಳೊಂದಿಗೆ ಸಚಿವೆ ಶಶಿಕಲಾ ಜೊಲ್ಲೆ ಹಾಗೂ ಸಂಸದ ಅಣ್ಣಾಸಾಹೆಬ ಜೊಲ್ಲೆ ಪ್ರವಾಹದ ಕುರಿತು ಚರ್ಚಿಸಿದರು. ಕೊಲ್ಲಾಪುರ ಜಿಲ್ಲೆಯ ನೀರಾವರಿ ಇಲಾಖೆಯ ಸಿಂಚನ ಭವನಕ್ಕೆ ಭೇಟಿ ನೀಡಿದಾಗ ಅಲ್ಲಿನ ಅಧಿಕಾರಿಗಳು ಹೃತ್ಪೂರ್ವಕ ಸ್ವಾಗತಿಸಿದರು. ನಂತರ ಅಧಿಕಾರಿಗಳೊಂದಿಗೆ ಮಹಾಪುರದ ಕುರಿತು ಸುದೀರ್ಘ ಚರ್ಚೆನಡೆಸಿ, ಮುಖ್ಯವಾದ ಮಾಹಿತಿಗಳನ್ನು ಪಡೆದುಕೊಂಡು, ಅಗತ್ಯ ಸಲಹೆ ಸೂಚನೆಗಳನ್ನು ನೀಡಲಾಯಿತು. ಭಾರೀ ಮಳೆಯಿಂದ ಸಂಭವಿಸುತ್ತಿರುವ ಅನಾಹುತಗಳ ತೀವ್ರತೆಯನ್ನು ಮನಗಂಡು, ನಿತ್ಯ ಮಳೆಯ …
Read More »ಅನಾಥಾಶ್ರಮದಲ್ಲೇ 14 ವರ್ಷದ ಬಾಲಕಿ ಮೇಲೆ ಅನಾಥಾಶ್ರಮದ ದಾನಿ ಒಂದು ವರ್ಷ ನಿರಂತರವಾಗಿ ಅತ್ಯಾಚಾರ
ಹೈದರಾಬಾದ್: ಅನಾಥಾಶ್ರಮದಲ್ಲೇ 14 ವರ್ಷದ ಬಾಲಕಿ ಮೇಲೆ ಅನಾಥಾಶ್ರಮದ ದಾನಿ ಒಂದು ವರ್ಷ ನಿರಂತರವಾಗಿ ಅತ್ಯಾಚಾರ ಎಸಗಿರುವ ಅಮಾನವೀಯ ಘಟನೆ ನಡೆದಿದೆ.ತೆಲಂಗಾಣದ ಮೆಡ್ಚಲ್ ಜಿಲ್ಲೆಯಲ್ಲಿ ಘಟನೆ ನಡೆದಿದ್ದು, ಅನಾಥಾಶ್ರಮದಲ್ಲಿದ್ದ ಬಾಲಕಿ ಮೇಲೆ ದಾನಿ ಸತತ ಒಂದು ವರ್ಷ ಕಾಲ ಪದೇ ಪದೇ ಅತ್ಯಾಚಾರ ಎಸಗಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಆರೋಪಿಗಳನ್ನು ಬಂಧಿಸಲಾಗಿದೆ. ಅನಾಥಾಶ್ರಮದ ಮಾಲೀಕನನ್ನು ಚೀಲುಕುರಿ ವಿಜಯ್ ಎಂದು ಗುರುತಿಸಲಾಗಿದ್ದು, ಈತ ಹಾಸ್ಟೆಲ್ ವಾರ್ಡನ್ ಸಹ ಆಗಿದ್ದಾನೆ. ಈತನ ಸಹೋದರ …
Read More »ಗೋಕಾಕ: ನಗರಸಭೆ ಹಿರಿಯ ಸದಸ್ಯ ಮತ್ತು ಮಾಜಿ ಅಧ್ಯಕ್ಷ ಶೇಖ್ ಫತೆವುಲ್ಲಾ .ಎ.ಖೋತವಾಲ (ಗೌಡರು) ಅವರು ಇಂದು ನಿಧನರಾಗಿದ್ದಾರೆ.
ಗೋಕಾಕ: ನಗರಸಭೆ ಹಿರಿಯ ಸದಸ್ಯ ಮತ್ತು ಮಾಜಿ ಅಧ್ಯಕ್ಷ ಶೇಖ್ ಫತೆವುಲ್ಲಾ .ಎ.ಖೋತವಾಲ (ಗೌಡರು) ಅವರು ಇಂದು ನಿಧನರಾಗಿದ್ದಾರೆ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದ ಅವರು ನಗರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯತಿದ್ದ ಅವರು ಇಂದು ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ. ಗೋಕಾಕ ನಗರಸಭೆಗೆ 8 ಬಾರಿ ಸದಸ್ಯರಾಗಿ ಆಯ್ಕೆಯಾಗಿದ್ದ ಅವರು ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ. ಅಂಜುಮನ್ ಇಸ್ಲಾಂ ಕಮಿಟಿ ಗೋಕಾಕ ಮತ್ತು ತಂಜೀಮ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾಗಿ ಮತ್ತು ಗ್ರಾಮ ದೇವತೆ …
Read More »