ಬೆಂಗಳೂರು: ರಾಜ್ಯದ ರೈಲು ಪ್ರಯಾಣಿಕರ ಅನುಕೂಲಕ್ಕಾಗಿ ನೈರುತ್ಯ ರೈಲ್ವೇ ವಿಭಾಗವು ಹೆಚ್ಚುವರಿ ಟಿಕೆಟ್ ಕಾಯ್ದಿರಿಸುವ ಕೇಂದ್ರಗಳನ್ನು ಕಾರ್ಯಾರಂಭಗೊಳಿಸಲಿದೆ. ಇವೆಲ್ಲಾ ಕೇಂದ್ರಗಳು ನಾಳೆಯಿಂದ ಕಾರ್ಯಾರಂಭವಾಗಲಿದೆ. ಬೆಂಗಳೂರಿನಲ್ಲಿ ಮಲ್ಲೇಶ್ವರ, ಚಿಕ್ಕಬಾಣಾವರ, ಬಾಣಸವಾಡಿ, ಬೆಂಗಳೂರು ಪೂರ್ವ, ಕಾರ್ಮೆಲರಾಂ ಮತ್ತು ವೈಟ್ಫೀಲ್ಡ್ ರೈಲು ನಿಲ್ದಾಣಗಳಲ್ಲಿ ಈ ಹೆಚ್ಚುವರಿ ಕೌಂಟರ್ಗಳನ್ನು ಕಾರ್ಯಾರಂಭಗೊಳಿಸಲಾಗುವುದು. ಜೊತೆಗೆ, ಕುಪ್ಪಂ, ಪೆನುಕೊಂಡ, ಚಿಕ್ಕಬಳ್ಳಾಪುರ, ದೊಡ್ಡಬಳ್ಳಾಪುರ, ಗೌರಿಬಿದನೂರು ಮತ್ತು ಮದ್ದೂರು ರೈಲ್ವೇ ನಿಲ್ದಾಣಗಳಲ್ಲಿ ಸಹ ಈ ಕೇಂದ್ರಗಳನ್ನು ಕಾರ್ಯಾರಂಭಗೊಳಿಸಲಾಗುವುದು. ಅಕ್ಟೋಬರ್ 20 ರಿಂದ ನವೆಂಬರ್ 30ರವರೆಗೆ …
Read More »ಕಿಂಗ್ಸ್ ಇಲೆವೆನ್ ಪಂಜಾಬ್ ಬೌಲರ್ಗಳ ಸ್ಪಿನ್ ಮೋಡಿಗೆ ಮಂಕಾದ RCB ಬ್ಯಾಟ್ಸ್ಮನ್
ಕೊನೇ ಓವರ್. ಕೊನೇ ಎಸೆತದವರೆಗೂ ಅಭಿಮಾನಿಗಳ ಉಸಿರನ್ನ ಬಿಗಿ ಹಿಡಿಯುವಂತೆ RCB ವಿರುದ್ಧ ರಣರೋಚಕ ಪಂದ್ಯದಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ ಕೊನೆಗೂ ಗೆಲುವು ಸಾಧಿಸಿದೆ. ಟಾಸ್ ಗೆದ್ದು ಬ್ಯಾಟಿಂಗ್ ಮಾಡಿದ RCB ಗೆ ಓಪನರ್ಗಳಾದ ದೇವದತ್ ಪಡಿಕ್ಕಲ್ ಹಾಗೂ ಌರೋನ್ ಫಿಂಚ್, ಉತ್ತಮ ಆರಂಭ ನೀಡುವಲ್ಲಿ ವಿಫಲವಾದ್ರು. 12ಬಾಲ್ಗಳಲ್ಲಿ 18ರನ್ ಗಳಿಸಿದ್ದ ಪಡಿಕ್ಕಲ್, ಆರ್ಷ್ದೀಪ್ ಸಿಂಗ್ ಎಸೆತದಲ್ಲಿ ನಿಕೋಲಸ್ ಪೂರನ್ಗೆ ಕ್ಯಾಚ್ ನೀಡಿದ್ರು. ಇನ್ನೂ ಌರೋನ್ ಆಟ 20ರನ್ಗೆ ಅಂತ್ಯವಾಯ್ತು. …
Read More »ಮನೀಷ್ ಶೆಟ್ಟಿ ಕೊಲೆ ಪ್ರಕರಣ: ಬಾರ್ ಮಾಲೀಕನ ಹತ್ಯೆಗೆ ನಡೆದಿತ್ತು ಭರ್ಜರಿ ಸ್ಕೆಚ್!
ಬೆಂಗಳೂರು: ಬಾರ್ ಮಾಲೀಕ ಮನೀಷ್ ಶೆಟ್ಟಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕೊಲೆ ಆರೋಪಿಗಳ ಪತ್ತೆಗೆ 9 ವಿಶೇಷ ತಂಡಗಳ ರಚನೆ ಮಾಡಲಾಗಿದೆ. ಘಟನಾ ಸ್ಥಳದ ಮಾಹಿತಿ ಆಧರಿಸಿ ಪೊಲೀಸರಿಂದ ತನಿಖೆ ನಡೆಸಲಾಗುತ್ತಿದೆ. ಜೊತೆಗೆ, ಘಟನಾ ಸ್ಥಳದ ಸುತ್ತಲಿನ ಸಿಸಿಟಿವಿ ದೃಶ್ಯಾವಳಿಯನ್ನು ವಶಕ್ಕೆ ಪಡೆದು ಪರಿಶೀಲನೆ ನಡೆಸಲಾಗುತ್ತಿದೆ. ಸದ್ಯ, ಸಿಸಿಬಿ ಮತ್ತು ಕೇಂದ್ರ ವಿಭಾಗ ಪೊಲೀಸರಿಂದ ಹಂತಕರಿಗೆ ಶೋಧ ನಡೆಸಲಾಗುತ್ತಿದೆ. ಇತ್ತ, ಮನೀಷ್ ಶೆಟ್ಟಿ ಹತ್ಯೆಗೆ ಬಳಸಿದ್ದ ಮಾರಕಾಸ್ತ್ರ ಹಾಗೂ ಬಂದೂಕು ಪತ್ತೆಯಾಗಿದೆ. …
Read More »500ಕ್ಕೂ ಹೆಚ್ಚು ಶ್ವಾನಗಳಿಗೆ ಆಹಾರ ನೀಡಿ ವೆಡ್ಡಿಂಗ್ ಡೇ ಆಚರಿಸಿಕೊಂಡ ದಂಪತಿ
ಭುವನೇಶ್ವರ್: ಸಾಮಾನ್ಯವಾಗಿ ವಿವಾಹ ಮಹೋತ್ಸವವನ್ನು ತಮ್ಮ ಹತ್ತಿರದ ಸಂಬಂಧಿಗಳಿಗೆ ಪಾರ್ಟಿಗಳನ್ನು ಆಯೋಜಿಸುವ ಮೂಲಕ ಸೆಲೆಬ್ರೆಟ್ ಮಾಡುತ್ತಾರೆ. ಆದರೆ ಇಲ್ಲೊಬ್ಬ ದಂಪತಿ ಮಾತ್ರ ವಿವಾಹವಾದ ದಿನವನ್ನು 500ಕ್ಕೂ ಹೆಚ್ಚು ಶ್ವಾನಗಳಿಗೆ ಆಹಾರ ನೀಡುವ ಮೂಲಕ ಅತ್ಯಂತ ಸಂಭ್ರಮದಿಂದ ಆಚರಿಸಿಕೊಂಡಿದ್ದಾರೆ. ಹೌದು. ಒಡಿಶಾ ಮೂಲದ ಯುರೇಕಾ ಅಪ್ತಾ ಹಾಗೂ ಜೋವಾನ್ನಾ ವಾಂಗ್ ದಂಪತಿ ಇಂತಹ ಮಹತ್ವದ ನಿರ್ಧಾರವನ್ನು ತೆಗೆದುಕೊಳ್ಳುವ ಮೂಲಕ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಸೆಪ್ಟೆಂಬರ್ 25ರಂದು ದಂಪತಿ ಭುವನೇಶ್ವರದಲ್ಲಿ ವಿವಾಹವಾಗಿದ್ದಾರೆ. ಇದೇ …
Read More »ಮಲಪ್ರಭಾ ಸಹಕಾರಿ ಸಕ್ಕರೆ ಕಾರ್ಖಾನೆನಾಸೀರ್ ಬಾಗವಾನ್ ಪೆನಲ್ ಭರ್ಜರಿ ಜಯಗಳಿಸಿದೆ.
ಬೆಳಗಾವಿ: ಎಂ.ಕೆ.ಹುಬ್ಬಳ್ಳಿ ಗ್ರಾಮದ ಮಲಪ್ರಭಾ ಸಹಕಾರಿ ಸಕ್ಕರೆ ಕಾರ್ಖಾನೆ ಆಡಳಿತ ಮಂಡಳಿಯ ಚುನಾವಣೆಯಲ್ಲಿ ನಾಸೀರ್ ಬಾಗವಾನ್ ಪೆನಲ್ ಭರ್ಜರಿ ಜಯಗಳಿಸಿದೆ. ನಿನ್ನೆ ಸಂಜೆ 7 ಗಂಟೆಗೆ ಮತ ಎಣಿಕೆ ಆರಂಭವಾಗಿ, ಮದ್ಯರಾತ್ರಿ 2 ಗಂಟೆಗೆ ಮುಕ್ತಾಯವಾಯಿತು. ನಾಸೀರ ಬಾಗವಾನ್ ಗುಂಪಿನ ಎಲ್ಲಾ ಅಭ್ಯರ್ಥಿಗಳು ಗೆಲವು ಸಾಧಿಸಿದ್ದು, ಮಾಜಿ ಕೇಂದ್ರ ಸಚಿವ ಬಾಬಾಗೌಡ ಪಾಟೀಲ ಅವರ ಪುತ್ರ ಪ್ರಕಾಶಗೌಡ ಪಾಟೀಲ ಅವರ ತಂಡ ಸೋಲು ಅನುಭವಿಸಿದೆ. ಆರಂಭದಲ್ಲಿ ನಾಸೀರ್ ಬಾಗವಾನ್ ಬೆಂಬಲಿತ …
Read More »ಬೇಲ್ ಪಡೆಯಲ್ಲ, ಸ್ಟೇಷನ್‍ಗೆ ಹೋಗಲ್ಲ – ಕುಸುಮಾ ವಿರುದ್ಧದ ಎಫ್ಐಆರ್‌ಗೆ ಡಿಕೆಶಿ ಕಿಡಿ
ಬೆಂಗಳೂರು: ನಮ್ಮ ಅಭ್ಯರ್ಥಿ ಹೆಣ್ಣು ಮಗಳ ಮೇಲೆ ಹಾಗೂ ಸಿದ್ದರಾಮಯ್ಯ ಎಸ್ಕಾರ್ಟ್ ಡ್ರೈವರ್ ಮೇಲೆ ಎಫ್‍ಐಆರ್ ಆಗಿದೆ. ಈ ಎಫ್ಐಆರ್‌ಗೆ ನಾವು ಬೇಲ್ ಪಡೆಯಲ್ಲ, ಸ್ಟೇಷನ್‍ಗೂ ಹೋಗಲ್ಲ. ಇದಕ್ಕೆ ನಾವು ಹೆದರೋ ಪ್ರಶ್ನೆಯೇ ಇಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಹೇಳಿದ್ದಾರೆ. ನಗರದಲ್ಲಿ ಇಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಡಿಕೆಶಿ, ಪ್ರಜಾಪ್ರಭುತ್ವದಲ್ಲಿ ಇಷ್ಟು ನೀಚವಾದ ರಾಜಕಾರಣ ನಾನು ಯಾವತ್ತೂ ನೋಡಿಲ್ಲ. ಕಾಂಗ್ರೆಸ್ ಪಕ್ಷದ ವಿದ್ಯಾವಂತ ಹೆಣ್ಣುಮಗಳು ಕಾನೂನು ಅರಿವಿರುವ …
Read More »ಸಿಪಿಐ ಕಲ್ಯಾಣಶೆಟ್ಟಿ ಸಹಜ ತಾಳ್ಮೆ-ದೊಡ್ಡತನ ಕಾಯ್ದುಕೊಳ್ಳದೇ ಸಾರ್ವಜನಿಕರಿಗೆ ಹಲ್ಲೆನಡೆಸಿ ತಡರಾತ್ರಿ
ಬೆಳಗಾವಿ: ಹುಕ್ಕೇರಿ ಸಿಪಿಐ ಕಲ್ಯಾಣಶೆಟ್ಟಿ ಸಹಜ ತಾಳ್ಮೆ-ದೊಡ್ಡತನ ಕಾಯ್ದುಕೊಳ್ಳದೇ ಸಾರ್ವಜನಿಕರಿಗೆ ಹಲ್ಲೆನಡೆಸಿ ತಡರಾತ್ರಿ ಗನ್ ತೋರಿಸಿ ಬೆದರಿಸಿದ ಬಗ್ಗೆ ಬೆಳಗಾವಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಮೊದಲ ಆರೋಪಿಯಾಗಿ ಪ್ರಕರಣ ದಾಖಲಾಗಿದೆ. ಹಲ್ಲೆಗೊಳಗಾದವರು ಕೊಟ್ಟ ದೂರು ಮತ್ತು ದಾಖಲಾದ FIR ಅಂಶಗಳ ಅನ್ವಯ ಖಾನಾಪುರ ತಾಲೂಕಿನ ಕಸಮಳ್ಳಿ ಗ್ರಾಮದಿಂದ ಬರುತ್ತಿದ್ದ ಬೆಳಗಾವಿ ಶಹಾಪುರದ ಇನ್ನೋವಾ ಕಾರು ರಸ್ತೆ ತಗ್ಗಿನ ಬಳಿ ಮುಂದಿನ ಸ್ವಿಫ್ಟ್ ಗೆ ತಾಗಿದ್ದೇ ಈ ಅವಾಂತರಕ್ಕೆ ಕಾರಣ ಎನ್ನಲಾಗಿದೆ. …
Read More »ಈಗಲೂ ಪರಿಸ್ಥಿತಿ ಸಂಪೂರ್ಣ ಚೇತಕರಿಸಿಕೊಂಡಿಲ್ಲ’ ಎಂದು ಸಾರಿಗೆ ಸಚಿವರೂ ಆಗಿರುವ ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ ತಿಳಿಸಿದರು.
ಬೆಳಗಾವಿ: ‘ಕೊರೊನಾ ಹಾಗೂ ಲಾಕ್‌ಡೌನ್ ಕಾರಣದಿಂದ ಬಸ್‌ಗಳ ಕಾರ್ಯಾಚರಣೆ ಸ್ಥಗಿತಗೊಳಿಸಿದ್ದರಿಂದ ಸಾರಿಗೆ ಇಲಾಖೆಯು ₹ 3ಸಾವಿರ ಕೋಟಿಗೂ ಅಧಿಕ ನಷ್ಟ ಅನುಭವಿಸಿದೆ. ಈಗಲೂ ಪರಿಸ್ಥಿತಿ ಸಂಪೂರ್ಣ ಚೇತಕರಿಸಿಕೊಂಡಿಲ್ಲ’ ಎಂದು ಸಾರಿಗೆ ಸಚಿವರೂ ಆಗಿರುವ ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ ತಿಳಿಸಿದರು. ಇಲ್ಲಿ ಬುಧವಾರ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ‘ಇಲಾಖೆಯಲ್ಲಿ 1.30 ಲಕಷ ಸಿಬ್ಬಂದಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಈಗ ಬರುತ್ತಿರುವ ಆದಾಯ ಬಸ್‌ಗಳ ಡಿಸೇಲ್‌ಗೆ ಮಾತ್ರವೇ ಸಾಕಾಗುತ್ತಿದೆ. ಆದಾಯ ಇಲ್ಲವೆಂದು ಬಸ್‌ಗಳ ಕಾರ್ಯಾಚರಣೆ …
Read More »‘ಖಾತೆ ಬದಲಾವಣೆ ಆದಾಕ್ಷಣ ಸಚಿವ ಬಿ.ಶ್ರೀರಾಮುಲು ಅಸಮರ್ಥರು ಎಂದರ್ಥವಲ್ಲ.
ಬೆಳಗಾವಿ: ‘ಖಾತೆ ಬದಲಾವಣೆ ಆದಾಕ್ಷಣ ಸಚಿವ ಬಿ.ಶ್ರೀರಾಮುಲು ಅಸಮರ್ಥರು ಎಂದರ್ಥವಲ್ಲ. ಒಳ್ಳೆಯ ಕೆಲಸ ಆಗಬೇಕೆಂದು ಈ ತೀರ್ಮಾನ ಮಾಡಲಾಗಿದೆ’ ಎಂದು ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ ಹೇಳಿದರು. ಇಲ್ಲಿನ ಸಾಂಬ್ರಾ ವಿಮಾನನಿಲ್ದಾಣದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಬುಧವಾರ ಮಾತನಾಡಿದ ಅವರು, ‘ವರಿಷ್ಠರ ಸಲಹೆ ಪಡೆದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಸಂಪುಟದ ಕೆಲವು ಸಹೋದ್ಯೋಗಿಗಳ ಖಾತೆ ಬದಲಿಸಿದ್ದಾರೆ. ಖಾತೆಗಳನ್ನು ಅದಲು-ಬದಲು ಮಾಡುವ ಅಧಿಕಾರ ಅವರಿಗಿದೆ. ಈ ಬಗ್ಗೆ ಕಾಂಗ್ರೆಸ್‌ನವರೇಕೆ ತಲೆಕೆಡಿಸಿಕೊಳ್ಳಬೇಕು?’ ಎಂದು ಕೇಳಿದರು. …
Read More »ನಗರದಲ್ಲಿ ಬುಧವಾರ ಒಂದು ತಾಸು ಜೋರು ಮಳೆ ಬಿದ್ದಿತು.
ಬೆಳಗಾವಿ: ನಗರದಲ್ಲಿ ಬುಧವಾರ ಒಂದು ತಾಸು ಜೋರು ಮಳೆ ಬಿದ್ದಿತು. ನಂತರ ಆಗಾಗ ತುಂತುರು ಮಳೆಯಾಯಿತು. ಸವದತ್ತಿ, ಹಿರೇಬಾಗೇವಾಡಿ, ಕಿತ್ತೂರು, ಅಥಣಿ, ಚಿಕ್ಕೋಡಿ, ಎಂ.ಕೆ. ಹುಬ್ಬಳ್ಳಿ, ಹುಕ್ಕೇರಿ ಹಾಗೂ ಬೈಲಹೊಂಗಲ ಭಾಗದಲ್ಲಿ ಸಾಧಾರಣ ಮಳೆ ಸುರಿಯಿತು. ನಾಲ್ಕೈದು ದಿನಗಳಿಂದ ಆಗಾಗ ಮಳೆ ಬೀಳುತ್ತಿರುವುದರಿಂದ ಜಿಲ್ಲೆಯ ವಿವಿಧೆಡೆ 8,500 ಹೆಕ್ಟೇರ್ ಸೋಯಾಬೀನ್, ಹತ್ತಿ, ಮೆಕ್ಕೆಜೋಳ, ಕಬ್ಬು ಬೆಳೆಗಳಿಗೆ ಹಾಗೂ 300ಕ್ಕೂ ಹೆಚ್ಚಿನ ಮನೆಗಳಿಗೆ ಹಾನಿಯಾಗಿದೆ. ಸವದತ್ತಿ ತಾಲ್ಲೂಕಿನ ಇನಾಮಹೊಂಗಲ ಬಳಿಯ ಧಾರವಾಡ …
Read More »