ಅಭಿನಂದನಾ ಗ್ರಂಥ ಬಿಡುಗಡೆಗೊಳಿಸಿದ ಹಿರಿಯ ಸಾಹಿತಿ ಡಾ.ವೀರಣ್ಣ ರಾಜೂರ ಅಭಿಪ್ರಾಯ ಕನ್ನಡ ಸಾಹಿತ್ಯಕ್ಕೆ ಜೆಪಿ ಕೊಡುಗೆ ಅಪಾರ ಬೆಳಗಾವಿ: ಉತ್ತಮ ವ್ಯಕ್ತಿತ್ವ ರೂಪಿಸಿಕೊಂಡು ಕನ್ನಡ ಸಾಹಿತ್ಯ ಲೋಕಕ್ಕೆ ಉತ್ತಮ ಕೃತಿಗಳನ್ನು ನೀಡಿದ ಡಾ. ಜೆ.ಪಿ.ದೊಡ್ಡಮನಿ ಕಾರ್ಯ ಶ್ರೇಷ್ಠವಾದುದು. ಅವರ ಅನುವಾದ ಜ್ಯೋತಿ, ಈ ಅಭಿನಂದನಾ ಗ್ರಂಥವು ಕೇವಲ ಒಂದು ಪುಸ್ತಕವಲ್ಲ. ಅವರ ಸಮಗ್ರ ವ್ಯಕ್ತಿತ್ವ ಅರ್ಥಮಾಡಿಕೊಳ್ಳುವ ಹೊತ್ತಿಗೆಯಾಗಿದೆ ಎಂದು ಧಾರವಾಡ ಕರ್ನಾಟಕ ವಿಶ್ವವಿದ್ಯಾಲಯದ ವಿಶ್ರಾಂತ ಪ್ರಾಧ್ಯಾಪಕ, ಹಿರಿಯ ಸಾಹಿತಿ ಡಾ.ವೀರಣ್ಣ …
Read More »ಆಷಾಢ ಶುಕ್ರವಾರ: ಚಾಮುಂಡಿ ವಿಶೇಷ ದರ್ಶನಕ್ಕೆ 2 ಸಾವಿರ ರೂ. ನಿಗದಿ ಖಂಡಿಸಿ ಪ್ರತಿಭಟನೆ
ಮೈಸೂರು: ಚಾಮುಂಡಿ ಬೆಟ್ಟದಲ್ಲಿ ಆಷಾಢ ಶುಕ್ರವಾರದ ವಿಶೇಷ ದರ್ಶನ ಪ್ಯಾಕೇಜ್ಗಾಗಿ 2000 ರೂಪಾಯಿ ಟಿಕೆಟ್ ದರ ನಿಗದಿ ಮಾಡಿರುವುದು ಅತ್ಯಂತ ಖಂಡನೀಯ ಎಂದು ಆಕ್ರೋಶ ವ್ಯಕ್ತಪಡಿಸಿ, ಹಳೆಯ ಜಿಲ್ಲಾಧಿಕಾರಿ ಕಚೇರಿ ಬಳಿ ಕರ್ನಾಟಕ ಸೇನೆಯ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ದೇವರ ದರ್ಶನಕ್ಕೆ ಸರ್ಕಾರ ಇಷ್ಟೊಂದು ದುಬಾರಿ ಟಿಕೆಟ್ ಮಾಡಲು ಹೊರಟಿರುವುದು ಅತ್ಯಂತ ನಾಚಿಕೆಗೇಡಿನ ಸಂಗತಿಯಾಗಿದೆ. ಜನರಿಗೆ ಒಂದು ಕೈಯಲ್ಲಿ ಕೊಟ್ಟು ದೇವರ ಹೆಸರಿನಿಂದ ಇನ್ನೊಂದು ಕೈಯಲ್ಲಿ ಕಿತ್ತುಕೊಳ್ಳುತ್ತಿರುವುದು ಅತ್ಯಂತ ನೋವಿನ ಸಂಗತಿಯಾಗಿದೆ. ಈ …
Read More »ರಾಜ್ಯದಲ್ಲಿ ಇಂದಿನಿಂದ ಬೈಕ್ ಟ್ಯಾಕ್ಸಿ ಬಂದ್
ಬೆಂಗಳೂರು: ರಾಜ್ಯದಲ್ಲಿ ಬೈಕ್ ಟ್ಯಾಕ್ಸಿ ಸೇವೆಗಳ ನಿಷೇಧ ಸೋಮವಾರದಿಂದ ಅಧಿಕೃತವಾಗಿ ಜಾರಿಯಾಗಿದೆ. ಬೈಕ್ ಟ್ಯಾಕ್ಸಿ ಸೇವೆ ನೀಡಲು ಗೈಡ್ ಲೈನ್ಸ್ ಜಾರಿಯಾಗುವವರೆಗೂ ಸೇವೆಗಳನ್ನ ಸ್ಥಗಿತಗೊಳಿಸುವ ರಾಜ್ಯ ಸರ್ಕಾರದ ಆದೇಶವನ್ನ ಕರ್ನಾಟಕ ಹೈಕೋರ್ಟ್ ಎತ್ತಿಹಿಡಿದಿತ್ತು. ಬೈಕ್ ಟ್ಯಾಕ್ಸಿ ಕಂಪನಿಗಳು ಕೋರಿದ್ದ ಆರು ವಾರಗಳ ಕಾಲಾವಕಾಶ ಸಹ ಭಾನುವಾರ (ಜೂನ್ 15)ದಂದು ಮುಕ್ತಾಯಗೊಂಡಿದ್ದು, ಮಧ್ಯಂತರ ಅನುಮತಿಯನ್ನೂ ನಿರಾಕರಿಸಲಾಗಿದೆ. ಆದ್ದರಿಂದ ರ‍್ಯಾಪಿಡೋ, ಊಬರ್ ಮತ್ತಿತರ ಕಂಪನಿಗಳು ತಮ್ಮ ಆ್ಯಪ್‌ನಲ್ಲಿ ಬೈಕ್ ಟ್ಯಾಕ್ಸಿ ಸೇವೆಯ ಆಯ್ಕೆಯನ್ನ ತೆಗೆದು …
Read More »ಹೆಲಿಕಾಪ್ಟರ್ ದುರಂತದಿಂದ ಬೆಳಗಾವಿಯ ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಜಸ್ಟ್ ಮಿಸ್
ಹೆಲಿಕಾಪ್ಟರ್ ದುರಂತದಿಂದ ಬೆಳಗಾವಿಯ ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಸೇರಿದಂತೆ ದೇಶದ ಎಂಟು ಸಂಸದರು, ಅವರ ಕುಟುಂಬಸ್ಥರು ಜಸ್ಟ್ ಮಿಸ್ ಆಗಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಉತ್ತರಾಖಂಡದ ಕೇದಾರನಾಥ ಬಳಿ ನಿನ್ನೆ ಬೆಳಗ್ಗೆ ಹೆಲಿಕಾಪ್ಟರ್ ದುರಂತ ಸಂಭವಿಸಿದೆ. ಈ ದುರ್ಘಟನೆಯಲ್ಲಿ ಪೈಲೆಟ್ ಸೇರಿ ಏಳು ಯಾತ್ರಾರ್ಥಿಗಳು ಜೀವ ಕಳೆದುಕೊಂಡಿದ್ದಾರೆ. ಸಂಸದರು ಮೊದಲ ಬ್ಯಾಚ್‌ನಲ್ಲಿ ಹೋಗುವ ಹೆಲಿಕಾಪ್ಟರ್ ಮೂಲಕ ಕೇದಾರನಾಥ್‌ಗೆ ತೆರಳಬೇಕಿತ್ತು.. ಡೆಹ್ರಾಡೂನ್‌ನಿಂದ ಕೆದಾರನಾಥಗೆ ತೆರಳಲು ಎಂಟು ಸಂಸದರಿಗೆ ನಿನ್ನೆ ಬೆಳಗ್ಗೆ …
Read More »ಬೆಂಗಳೂರು ಚಿನ್ನಸ್ವಾಮಿ ಕ್ರೀಡಾಂಗಣ ಕಾಲ್ತುಳಿತ….ಧಾರವಾಡದಲ್ಲಿ ಬೀದಿಗೆ ಇಳುದು ಬಿಜೆಪಿ ಆಕ್ರೋಶ.
ಬೆಂಗಳೂರು ಚಿನ್ನಸ್ವಾಮಿ ಕ್ರೀಡಾಂಗಣ ಕಾಲ್ತುಳಿತ….ಧಾರವಾಡದಲ್ಲಿ ಬೀದಿಗೆ ಇಳುದು ಬಿಜೆಪಿ ಆಕ್ರೋಶ. ಬೆಂಗಳೂರಿನಲ್ಲಿ ಆರ್‌ಸಿಬಿ ವಿಜಯೋತ್ಸವದ ವೇಳೆ ನಡೆದ ಕಾಲ್ತುಳಿತ ಪ್ರಕರಣದ ನೈತಿಕ ಹೊಣೆಯನ್ನು ರಾಜ್ಯ ಕಾಂಗ್ರೆಸ್ ಸರ್ಕಾರ ಹೊತ್ತು, ಕೂಡಲೇ ಸಿಎಂ ಹಾಗೂ ಡಿಸಿಎಂ ರಾಜೀನಾಮೆ ಕೊಡಬೇಕು ಎಂದು ಆಗ್ರಹಿಸಿ ಧಾರವಾಡದ ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ ನಡೆಸಿ ಆಕ್ರೋಶ ಹೊರಹಾಕಿದರು. ವೈ- ಧಾರವಾಡದ ಜ್ಯುಬಿಲಿ ವೃತ್ತವನ್ನು ಬಂದ್ ಮಾಡಿದ ಬಿಜೆಪಿ ಕಾರ್ಯಕರ್ತರು ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿದರು …
Read More »ಮಳೆಯಿಂದ ಹಾನಿ; ವಸತಿ, ಪರಿಹಾರಕ್ಕೆ ಆಗ್ರಹಿಸಿ ರಸ್ತೆ ತಡೆದು ಆಕ್ರೋಶ
ವಿಜಯಪುರ*ಮಳೆಯಿಂದ ಹಾನಿ; ವಸತಿ, ಪರಿಹಾರಕ್ಕೆ ಆಗ್ರಹಿಸಿ ರಸ್ತೆ ತಡೆದು ಆಕ್ರೋಶ: ವಿಜಯಪುರ ಜಿಲ್ಲೆಯ ಬಸವನಬಾಗೇವಾಡಿ ಪಟ್ಟಣದಲ್ಲಿ ಇತ್ತೀಚಿನ ಸುರಿದ ಭಾರಿ ಮಳೆಗೆ ಲಕ್ಷ್ಮೀನಗರದ ಪಕ್ಕದ ಜಮೀನಿನ ಒಡ್ಡು ಒಡೆದು ಮನೆಯೊಳಗೆ ನೀರು ನುಗ್ಗಿ ಜನರು ರಾತ್ರಿಯಿಡಿ ಪರದಾಡುವಂತಾಗಿತ್ತು. ಹೀಗಾಗಿ, ತಮಗೆ ಸೂಕ್ತ ಪರಿಹಾರ ನೀಡುವಂತೆ ಆಗ್ರಹಿಸಿ ನಿವಾಸಿಗಳು ಅಂಬೇಡ್ಕರ ವೃತ್ತದಲ್ಲಿ ದಿಢೀರ್ ರಸ್ತೆ ತಡೆದು ಧರಣಿ ನಡೆಸಿದರು. ಪ್ರತಿಭಟನೆ ನಿರತರರು ವಿವಿಧ ಮನೆಯಲ್ಲಿನ ಸಾಮಗ್ರಿ ಗಳೊಂದಿಗೆ ಪ್ರತಿಭಟನೆಯಲ್ಲಿ ಭಾಗವಹಿಸಿ, ಆಕ್ರೋಶ …
Read More »ನಗರದಲ್ಲಿ ಅಲೆದಾಡುತ್ತಿದ್ದ ಮಾನಸಿಕ ಅಸ್ವಸ್ಥೆಯನ್ನು ತಾಯಿ ಮಡಿಲಿಗೆ ಸೇರಿಸಿದ ಸಾಮಾಜಿಕ ಕಾರ್ಯಕರ್ತ
ಹಾವೇರಿ: ನಗರದಲ್ಲಿ ಓಡಾಡುತ್ತಿದ್ದ ಮಾನಸಿಕ ಅಸ್ವಸ್ಥ ಯುವತಿಯನ್ನು ಸಾಮಾಜಿಕ ಕಾರ್ಯಕರ್ತ ಅಬ್ದುಲ್ ಖಾದರ್ ತಾಯಿಯ ಮಡಿಲಿಗೆ ಸೇರಿಸುವ ಮೂಲಕ ಮಾನವೀಯತೆ ಮೆರೆದಿದ್ದಾರೆ. ದಾವಣಗೆರೆ ಮೂಲದ ಯುವತಿ ಮುಮ್ತಾಜ್ ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿದ್ದು, ನಾಲ್ಕೈದು ದಿನಗಳ ಹಿಂದೆ ಮನೆಯಿಂದ ನಾಪತ್ತೆಯಾಗಿದ್ದರು. ಮುಮ್ತಾಜ್ ಗುರುವಾರ ಹಾವೇರಿ ನಗರದಲ್ಲಿ ಅಲೆದಾಡುತ್ತಿದ್ದನ್ನು ಕಂಡ ಸ್ಥಳೀಯರು ಸಾಮಾಜಿಕ ಕಾರ್ಯಕರ್ತ ಅಬ್ದುಲ್ ಖಾದರ್ಗೆ ಮಾಹಿತಿ ನೀಡಿದ್ದರು. ನಂತರ ಖಾದರ್, ಮಾನಸಿಕ ಅಸ್ವಸ್ಥ ಯುವತಿಯನ್ನು ಜಿಲ್ಲಾಸ್ಪತ್ರೆಗೆ ದಾಖಲು ಮಾಡಿ, ವೈದ್ಯರಿಗೆ ತೋರಿಸಿದ್ದರು. …
Read More »ಶೃಂಗೇರಿ ಟು ಮಂಗಳೂರು ರಸ್ತೆ ಸಂಚಾರ ಬಂದ್
ಚಿಕ್ಕಮಗಳೂರು, ಜೂನ್ 15: ಮಲೆನಾಡು ಪಶ್ಚಿಮ ಘಟ್ಟಗಳ ಸಾಲಿನಲ್ಲಿ ಭಾರಿ ಮಳೆ (Rain) ಮುಂದುವರೆದಿದೆ. ಹಲವೆಡೆ ಅವಾಂತರಗಳು ಸಂಭವಿಸಿವೆ. ಜಿಲ್ಲೆಯ ಶೃಂಗೇರಿ ತಾಲೂಕಿನ ನೆಮ್ಮಾರು ಬಳಿಯ ರಾಷ್ಟ್ರೀಯ ಹೆದ್ದಾರಿ 169ರ ಒಂದೇ ಸ್ಥಳದಲ್ಲಿ ಪದೇಪದೇ ಗುಡ್ಡ ಕುಸಿಯುತ್ತಿದೆ. ಶೃಂಗೇರಿ-ಮಂಗಳೂರು ಮಾರ್ಗದ (Sringeri to Mangaluru) ರಸ್ತೆ ಸಂಚಾರ ಸಂಪೂರ್ಣ ಬಂದ್ ಆಗಿದೆ. ಹೀಗಾಗಿ ಮಂಗಳೂರಿಗೆ ತೆರಳುವ ವಾಹನಗಳಿಗೆ ಬದಲಿ ಮಾರ್ಗದಲ್ಲಿ ಸಂಚರಿಸಲು ಪೊಲೀಸರು ಸೂಚನೆ ನೀಡಿದ್ದಾರೆ. ಶೃಂಗೇರಿ ಟು ಮಂಗಳೂರು ರಸ್ತೆ ಸಂಚಾರ ಬಂದ್ ಧಾರಾಕಾರವಾಗಿ ಸುರಿಯುತ್ತಿರುವ …
Read More »ಅಜ್ಜಿ ತಿಥಿ ಕಾರ್ಯಕ್ಕೆ ಹೋಗಿದ್ದವರ ಮನೆಯಲ್ಲಿ ಕಳ್ಳತನ
ಆನೇಕಲ್, ಜೂನ್ 15: ಅಜ್ಜಿಯ ತಿಥಿ ಕಾರ್ಯಕ್ಕೆ ಹೋದವರಿಗೆ ಕಳ್ಳರು ಶಾಕ್ ನೀಡಿದ್ದಾರೆ. ಅತ್ತ ಹಳೆ ಮನೆಯಲ್ಲಿ ಮನೆ ಮಂದಿಯಲ್ಲ ಸೇರಿ ಅಜ್ಜಿಯ ತಿಥಿ ಕಾರ್ಯ ಮಾಡುತ್ತಿದ್ದರೇ, ಇತ್ತ ಕಳ್ಳರು ಮಾತ್ರ ಹೊಸ ಮನೆಯಲ್ಲಿದ್ದ 240 ಗ್ರಾಂ ಚಿನ್ನ ದೋಚಿ ಪರಾರಿಯಾಗಿದ್ದಾರೆ. ಬೆಂಗಳೂರು (Bengaluru) ಹೊರವಲಯ ಆನೇಕಲ್ (Anekal) ತಾಲೂಕಿನ ಆಡೆಸೊಣ್ಣಟ್ಟಿ ಗ್ರಾಮದಲ್ಲಿ ಘಟನೆ ನಡೆದಿದೆ. ಮೇ 2ನೇ ತಾರೀಖು ರಾತ್ರಿ ಪ್ರೇಮಾ ಎಂಬುವವರ ಮನೆಯ ಬಾಗಿಲು ಮುರಿದು ಒಳ ನುಗ್ಗಿದ …
Read More »ಪ್ರೀತಿ ಕೊಂದ ಕೊಲೆಗಾರ 6 ತಿಂಗಳ ಬಳಿಕ ಸಿಕ್ಕಿಬಿದ್ದ: ಹಂತಕನ ಹೆಡೆಮುರಿ ಕಟ್ಟಿದ್ದೇ ರೋಚಕ
ಗದಗ, (ಜೂನ್ 15): ಮದುವೆಯಾಗು ಎಂದು ಪೀಡಿಸಿದ್ದ ಪ್ರೇಯಿಸಿ (Lover) ಮಧುಶ್ರೀಯನ್ನು ಕೊಲೆ ಮಾಡಿ ಬಳಿಕ ಹಳ್ಳದಲ್ಲಿ ಹೂತ್ತಿದ್ದ ಪ್ರಕರಣವನ್ನು ಗದಗ (Gadag) ಪೊಲೀಸರು ಭೇದಿಸಿದ್ದಾರೆ. ಗದಗ ತಾಲೂಕಿನ ನಾರಾಯಣಪುರ (Narayanapura) ಗ್ರಾಮದ ಸತೀಶ್ ಹಿರೇಮಠ ಅದೇ ಗ್ರಾಮದ ಮಧುಶ್ರೀ ಪರಸ್ಪರ ಪ್ರೀತಿಸುತ್ತಿದ್ದರು. ಹೀಗೆ ಒಂದು ದಿನ ಕುಟುಂಬಸ್ಥರ ಕಣ್ತಪ್ಪಿಸಿ ಇಬ್ಬರು ಹಳ್ಳಿ ಗ್ರಾಮದ ಹೊರಹೊಲದಲ್ಲಿ ಭೇಟಿಯಾಗಿದ್ದು, ಈ ವೇಳೆ ಮಧುಶ್ರೀ ತನನ್ನು ಮದುವೆಯಾಗುವಂತೆ ಒತ್ತಾಯಿಸಿದ್ದಾಳೆ. ಬಳಿಕ ಇಬ್ಬರ ನಡುವೆ ಗಲಾಟೆ ನಡೆದಿದ್ದು, ಈ ವೇಳೆ ಸತೀಶ್, ವೇಲ್ ನಿಂದ …
Read More »